For Quick Alerts
  ALLOW NOTIFICATIONS  
  For Daily Alerts

  ವಂಚನೆ ಆರೋಪಿ ಯುವರಾಜ್ ಜೊತೆ ಸಿನಿಮಾ ಮಾಡಲು ನಿರ್ಧರಿಸಿದ್ದ ರಾಧಿಕಾ, ಯಾವುದು ಆ ಮೆಗಾ ಪ್ರಾಜೆಕ್ಟ್?

  |

  ಆರ್‌ಎಸ್‌ಎಸ್‌ ಮುಖಂಡ ಅಂತ ನಂಬಿಸಿ ಉದ್ಯಮಿಗಳಿಗೆ, ಪ್ರಭಾವಿ ವ್ಯಕ್ತಿಗಳಿಗೆ ಮೋಸ ಮಾಡುತ್ತಿದ್ದ ಯುವರಾಜ್ ಎಂಬ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ವಂಚನೆ ಆರೋಪಿ ಯುವರಾಜ್ ಜೊತೆ ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಸಂಪರ್ಕ ಇತ್ತು, ಯುವರಾಜ್ ಖಾತೆಯಿಂದ ಸುಮಾರು ಒಂದೂವರೆ ಕೋಟಿ ಹಣ ರಾಧಿಕಾ ಖಾತೆಗೆ ವರ್ಗಾವಣೆ ಆಗಿದೆ ಎಂಬ ವಿಚಾರವೂ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಯಾಯಿತು.

  75 ಲಕ್ಷ ಪಡೆದಿದ್ದು ನಿಜ ಎಂದು ಒಪ್ಪಿಕೊಂಡ ರಾಧಿಕ ಕುಮಾರಸ್ವಾಮಿ | Filmibeat Kannada

  ಈ ಕುರಿತು ಸ್ಪಷ್ಟನೆ ನೀಡಲು ಸುದ್ದಿಗೋಷ್ಠಿ ಕರೆದಿದ್ದ ನಟಿ ರಾಧಿಕಾ ಕುಮಾರಸ್ವಾಮಿ, ''ಯುವರಾಜ್ ಎಂಬ ವ್ಯಕ್ತಿ ನನ್ನ ಖಾತೆಗೆ ಹಣ ವರ್ಗಾವಣೆ ಮಾಡಿರುವುದು ನಿಜ, ಆದರೆ, ಒಂದೂವರೆ ಕೋಟಿಯಲ್ಲ, ಅದು ಸಿನಿಮಾ ವಿಚಾರವಾಗಿ ಹಣ ಕಳುಹಿಸಿದ್ದು, ಬೇರೆ ಯಾವುದು ವ್ಯವಹಾರ ನಡೆದಿಲ್ಲ'' ಎಂದು ವಿವರಿಸಿದ್ದಾರೆ. ಅಷ್ಟಕ್ಕೂ, ಯುವರಾಜ್ ಜೊತೆ ರಾಧಿಕಾ ಮಾಡಲು ನಿರ್ಧರಿಸಿದ್ದ ಚಿತ್ರ ಯಾವುದು? ಮುಂದೆ ಓದಿ...

  ಐತಿಹಾಸಿಕ ಸಿನಿಮಾ ಮಾಡಲು ಚರ್ಚೆ

  ಐತಿಹಾಸಿಕ ಸಿನಿಮಾ ಮಾಡಲು ಚರ್ಚೆ

  ''ಯುವರಾಜ್ ಅವರ ಪತ್ನಿ ಸಿನಿಮಾ ನಿರ್ಮಾಪಕಿ. ಅವರದ್ದು ವೈಷ್ಣವಿ ಪ್ರೊಡಕ್ಷನ್ ಸಂಸ್ಥೆ ಸಹ ಇದೆ. ಐತಿಹಾಸಿಕ ಸಿನಿಮಾ ಮಾಡೋಣ ಅಂತ ಚರ್ಚೆ ಸಹ ಮಾಡಿದ್ದರು. ಈ ಬಗ್ಗೆ ನಾನು ಆಸಕ್ತಿ ಕೊಟ್ಟಿದ್ದರಿಂದ ಅವರು ನನಗೆ ಅಡ್ವಾನ್ಸ್ ಮಾಡಿದ್ದರು. ಈ ಸಂಬಂಧ 15 ಲಕ್ಷ ಹಣ ಅಡ್ವಾನ್ಸ್ ಮಾಡಿದ್ದರು. ಅದು ಅವರ ಖಾತೆಯಿಂದ ಕಳುಹಿಸಿದ್ದರು'' ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.

  RSS ಮುಖಂಡ ಅಂತೇಳಿ ಕೋಟಿಗಟ್ಟಲೆ ವಂಚಿಸಿದ ಯುವರಾಜ್: ಖ್ಯಾತ ನಟಿ, ಸಹೋದರನ ಹೆಸರು ಲಿಂಕ್?RSS ಮುಖಂಡ ಅಂತೇಳಿ ಕೋಟಿಗಟ್ಟಲೆ ವಂಚಿಸಿದ ಯುವರಾಜ್: ಖ್ಯಾತ ನಟಿ, ಸಹೋದರನ ಹೆಸರು ಲಿಂಕ್?

  ನಾಟ್ಯರಾಣಿ ಶಾಂತಲ ಕುರಿತು ಚಿತ್ರ

  ನಾಟ್ಯರಾಣಿ ಶಾಂತಲ ಕುರಿತು ಚಿತ್ರ

  ''ವೈಷ್ಣವಿ ಪ್ರೊಡಕ್ಷನ್ ಸಂಸ್ಥೆಯ (ಯುವರಾಜ್ ಪತ್ನಿ ಮಾಲೀಕರು) ಜೊತೆ ನಾಟ್ಯರಾಣಿ ಶಾಂತಲ ಕುರಿತು ಸಿನಿಮಾ ಮಾಡಲು ಚರ್ಚೆಯಾಗಿತ್ತು. ನಾಟ್ಯರಾಣಿ ಶಾಂತಲ ಬಗ್ಗೆ ಸಿನಿಮಾ ಮಾಡಬೇಕು ಎನ್ನುವುದು ನನ್ನ ಬಹಳ ದಿನಗಳ ಕನಸು. ಇಂತಹ ಅವಕಾಶ ಸಿಕ್ಕಿದ ಸಂದರ್ಭದಲ್ಲಿ ಅದಕ್ಕೆ ಒಂದು ಟೀಂ ರೆಡಿ ಮಾಡೋಣ ಅಂತ ಚರ್ಚೆ ಮಾಡಿದ್ವಿ'' ಎಂದು ರಾಧಿಕಾ ಬಹಿರಂಗಪಡಿಸಿದ್ದಾರೆ.

  ಮತ್ತೊಬ್ಬ ನಿರ್ಮಾಪಕನಿಂದಲೂ ಹಣ

  ಮತ್ತೊಬ್ಬ ನಿರ್ಮಾಪಕನಿಂದಲೂ ಹಣ

  ''ಮತ್ತೊಬ್ಬ ನಿರ್ಮಾಪಕರಿಂದ 60 ಲಕ್ಷ ಹಣ ವರ್ಗಾವಣೆ ಮಾಡಿಸಿದ್ದರು. ನನ್ನ ಭಾವ ಎಂದು ಹೇಳಿದ್ದರು. ಬಹಳ ವರ್ಷದಿಂದ ಪರಿಚಯ ಇದ್ದ ಕಾರಣ ನಂಬಿಕೆಯಿಂದ ಸುಮ್ಮನೆ ಇದ್ದೆ. ಆದರೂ ನಮ್ಮ ಆಡಿಟರ್ ಈ ಚಿತ್ರಗಳ ಕುರಿತು ಅಗ್ರಿಮೆಂಟ್ ಹಾಕೋಣ ಎಂದು ಹೇಳಿದ್ಮೇಲೆ, ಯುವರಾಜ್ ಅವರಿಗೆ ಹಲವು ಬಾರಿ ಫೋನ್ ಮಾಡಿದರೂ, ಯಾವುದೋ ಒಂದು ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಸರಿ ಗೊತ್ತಿರುವ ವ್ಯಕ್ತಿ ಎಲ್ಲಿ ಹೋಗ್ತಾರೆ ಅಂತ ಸುಮ್ಮನಾಗಿದ್ವಿ'' ಎಂದು ರಾಧಿಕಾ ಮಾಹಿತಿ ನೀಡಿದ್ದಾರೆ.

  ನನ್ನ ಬ್ಯಾನರ್‌ನಲ್ಲೇ ಮಾಡ್ತೀನಿ

  ನನ್ನ ಬ್ಯಾನರ್‌ನಲ್ಲೇ ಮಾಡ್ತೀನಿ

  ಇಷ್ಟೆಲ್ಲ ಆದ್ಮೇಲೆ ಅವರ ಜೊತೆಗಿನ ಸಿನಿಮಾ ಮಾಡೋಕೆ ಆಗಲ್ಲ. ಸಾಧ್ಯವಾದರೇ ನನ್ನದೇ ಬ್ಯಾನರ್ ಆ ಸಿನಿಮಾ ಮಾಡ್ತೇನೆ ಎಂದು ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ನನ್ನ ಖಾತೆಗೆ ಬಂದಿರುವ ಹಣಕ್ಕೆ ಸಂಬಂಧಿಸಿದಂತೆ ಆ ಹಣವನ್ನು ಆ ನಿರ್ಮಾಪಕರಿಗೆ ವಾಪಸ್ ಕೊಡುವುದಾಗಿ ರಾಧಿಕಾ ತಿಳಿಸಿದ್ದಾರೆ.

  English summary
  Kannada actress Radhika kumaraswamy press meet in bengaluru on yuvaraj multi-crore fund transfer case. she associated with Yuvaraj for a Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X