For Quick Alerts
  ALLOW NOTIFICATIONS  
  For Daily Alerts

  ನಟಿ ರಾಧಿಕಾ ಮಗಳು ಸ್ಯಾಂಡಲ್ ವುಡ್ ನ 'ಈ ಸ್ಟಾರ್' ನಟನ ದೊಡ್ಡ ಅಭಿಮಾನಿಯಂತೆ

  |
  Radhika Kumaraswamy shares her experience about her movie Damayanthi | Filmibeat Kannada

  ಸ್ಯಾಂಡಲ್ ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಸದ್ಯ 'ದಮಯಂತಿ' ಸಿನಿಮಾ ರಿಲೀಸ್ ನ ಬ್ಯುಸಿಯಲ್ಲಿದ್ದಾರೆ. ಚಿತ್ರದಲ್ಲಿ ರಾಧಿಕಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ರುದ್ರತಾಂಡವ' ಚಿತ್ರದ ನಂತರ ರಾಧಿಕಾ ತೆರೆ ಮೇಲೆ ಬರುತ್ತಿದ್ದಾರೆ. ಸುಮಾರು ನಾಲ್ಕು ವರ್ಷದ ಬಳಿಕ ರಾಧಿಕಾ ಅಭಿಮಾನಿಗಳಿಗೆ ದರ್ಶನ ನೀಡುತ್ತಿದ್ದಾರೆ.

  ಸದ್ಯ 'ದಮಯಂತಿ' ಚಿತ್ರದ ಆಡಿಯೋ ರಿಲೀಸ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಆಡಿಯೋ ರಿಲೀಸ್ ಮಾಡುತ್ತಿದ್ದಾರೆ. ಅನೇಕ ವರ್ಷಗಳ ಬಳಿಕ ರಾಧಿಕಾ ಮತ್ತು ದರ್ಶನ್ ಒಂದೆ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೆ ಸಮಯದಲ್ಲಿ ರಾಧಿಕಾ ಕೆಲವು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ಪುತ್ರಿ ಶಮಿಕಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಿಗ್ ಫ್ಯಾನ್ ಅಂತೆ.

  ಆ ಸಂದರ್ಭದಲ್ಲಿ 'ಮತ್ತೆ ನಟಿಸುವುದೇ ಬೇಡ' ಎಂದುಕೊಂಡಿದ್ದರಂತೆ ರಾಧಿಕಾ! ಕಾರಣ ಏನಾಗಿತ್ತು?ಆ ಸಂದರ್ಭದಲ್ಲಿ 'ಮತ್ತೆ ನಟಿಸುವುದೇ ಬೇಡ' ಎಂದುಕೊಂಡಿದ್ದರಂತೆ ರಾಧಿಕಾ! ಕಾರಣ ಏನಾಗಿತ್ತು?

  ರಾಧಿಕಾ ಮತ್ತು ದರ್ಶನ್ ಅಭಿನಯದ 'ಅನಾಥರು' ಸಿನಿಮಾ ಅಂದರೆ ಶಮಿಕಾಗೆ ತುಂಬ ಇಷ್ವವಂತೆ. ಶಮಿಕಾ ಆಗಾಗ 'ಅನಾಥರು' ಸಿನಿಮಾ ವೀಕ್ಷಿಸುತ್ತಿರುತ್ತಾರಂತೆ. ಅಲ್ಲದೆ ಮತ್ತೆ ದರ್ಶನ್ ಜೊತೆ ಸಿನಿಮಾ ಮಾಡುವಂತೆ ಅಮ್ಮನಿಗೆ ಹೇಳುತ್ತಿರುತ್ತಾರಂತೆ. ಮಗಳಿಗಾಗಿ ರಾಧಿಕಾ 'ದಮಯಂತಿ' ಚಿತ್ರದ ಆಡಿಯೋವನ್ನು ದರ್ಶನ್ ಬಳಿ ರಿಲೀಸ್ ಮಾಡಿಸುತ್ತಿದ್ದಾರೆ.

  ರಾಧಿಕಾ ಕುಮಾರಸ್ವಾಮಿ ಮತ್ತು ದರ್ಶನ್ ಎರಡು ಸಿನಿಮಾಗಳಲ್ಲ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. 'ಅನಾಥರು' ಮತ್ತು 'ಮಂಡ್ಯ' ಸಿನಿಮಾಗಳಲ್ಲಿ ಈ ಜೋಡಿ ಕಮಾಲ್ ಮಾಡಿತ್ತು. ಸುಮಾರು 12 ವರ್ಷದ ಬಳಿಕ ರಾಧಿಕಾ ಮತ್ತು ದರ್ಶನ್ ಭೇಟಿಯಾಗುತ್ತಿದ್ದಾರೆ. ಮಗಳ ಆಸೆಯಂತೆ ಇಬ್ಬರು ಮತ್ತೆ ಒಟ್ಟಿಗೆ ಸಿನಿಮಾ ಮಾಡುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.

  ರಾಧಿಕಾ ಬಳಿ ಸದ್ಯ 'ದಮಯಂತಿ' ಸಿನಿಮಾ ಸೇರಿದಂತೆ 'ಭೈರಾದೇವಿ', 'ರಾಜೇಂದ್ರ ಪೊನ್ನಪ್ಪ', 'ಕಾಂಟ್ರ್ಯಾಕ್ಟ'ಳಿದ್ದು ಈ ಎಲ್ಲಾ ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸದ್ಯ 'ದಮಯಂತಿ' ಮೂಲಕ ಅಭಿಮಾನಿಗಳ ಮುಂದೆ ಬರ್ತಿರುವ ರಾಧಿಕಾ ನೋಡಲು ಚಿತ್ರಪ್ರಿಯರು ಕುತೂಹಲದಿಂದ ಕಾಯುತ್ತಿದ್ದಾರೆ. ದಮಯಂತಿ ಸಿನಿಮಾಗೆ ನವರಸನ್ ಆಕ್ಷನ್ ಕಟ್ ಹೇಳಿದ್ದಾರೆ.

  English summary
  Kannada actress Radhika Kumaraswamy daughter Shamika is big fan of Darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X