ರಾಧಿಕಾ ಕುಮಾರಸ್ವಾಮಿಗೆ ಈ ಮೂರು ದೊಡ್ಡ ಆಸೆಗಳಿವೆ
Recommended Video

ನಟಿ ರಾಧಿಕಾ ಕುಮಾರಸ್ವಾಮಿ ಈಗಾಗಲೇ ಕನ್ನಡದ ಅನೇಕ ಸ್ಟಾರ್ ಗಳ ಜೊತೆಗೆ ಸಿನಿಮಾ ಮಾಡಿದ್ದಾರೆ. ಆದರೆ, ಮೂರು ಸ್ಟಾರ್ ನಟರ ಜೊತೆಗೆ ನಟಿಸಬೇಕು ಎಂಬುದು ಅವರ ಆಸೆಯಾಗಿದೆ.
'ರುದ್ರತಾಂಡವ' ಬಳಿಕ ಅವರ ಬೇರೆ ಯಾವ ಸಿನಿಮಾಗಳು ಬಿಡುಗಡೆಯಾಗಿಲ್ಲ. ಆದರೂ ಅವರ ಫ್ಯಾನ್ಸ್ ಕಡಿಮೆ ಆಗಿಲ್ಲ. ರಾಧಿಕಾ ಈಗಲೂ ತನ್ನ ಅಭಿಮಾನಿ ಬಹಳವನ್ನು ಉಳಿಸಿಕೊಂಡಿದ್ದಾರೆ. ರಾಧಿಕ ಮತ್ತೆ ಯಾವಾಗ ಸಿನಿಮಾ ಮಾಡುತ್ತಾರೆ ಎನ್ನುತ್ತಿದ್ದ ಅಭಿಮಾನಿಗಳಿಗೆ ಈಗ ಒಂದರ ನಂತರ ಒಂದು ಚಿತ್ರಗಳು ಸಾಲಿನಲ್ಲಿ ನಿಂತಿವೆ.
ಅಂದಹಾಗೆ, ಈ ಬಾರಿಯ ಜ್ಯೂವೆಲ್ಸ್ ಆಫ್ ಇಂಡಿಯಾದ ರಾಯಭಾರಿ ಆಗಿರುವ ರಾಧಿಕಾ ಕುಮಾರಸ್ವಾಮಿ ಇತ್ತೀಚಿಗಷ್ಟೆ ತಮ್ಮ ಸಿನಿಮಾ ಕನಸುಗಳ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ...

ಪುನೀತ್, ಸುದೀಪ್, ಯಶ್ ಜೊತೆ ಸಿನಿಮಾ ಮಾಡಬೇಕು
''ಪುನೀತ್, ಸುದೀಪ್ ಜೊತೆಗೆ ಸಿನಿಮಾ ಮಾಡಿಲ್ಲ. ಅವರ ಜೊತೆಗೆ ಆಕ್ಟ್ ಮಾಡುವ ಆಸೆ ಇದೆ. ಯಶ್ ಅವರಿಗೆ ನಾನು 'ಲಕ್ಕಿ' ಸಿನಿಮಾವನ್ನು ನಿರ್ಮಾಣ ಮಾಡಿದ್ದೇನೆ. ಆದರೆ, ಅವರ ಜೊತೆಗೆ ಇನ್ನೂ ಸಹ ನಟಿಸಿಲ್ಲ. ಈ ನಟರ ಜೊತೆಗೆ ಸಿನಿಮಾ ಮಾಡುವ ಆಸೆ ನನಗೆ ಇದೆ.'' - ರಾಧಿಕಾ ಕುಮಾರಸ್ವಾಮಿ, ನಟಿ

ಶಿವಣ್ಣ ಹಾಗೂ ದರ್ಶನ್ ಜೊತೆಗೆ ಮತ್ತೆ ನಟಿಸಬೇಕು
''ಹಾಗಂತ, ಶಿವಣ್ಣ ಜೊತೆಗೆ ಈಗಾಗಲೇ ಸಿನಿಮಾ ಮಾಡಿದ್ದೇನೆ ಮುಂದೆ ಮಾಡುವುದಿಲ್ಲ ಅಂತ ಅಲ್ಲ. ಅವರ ಜೊತೆಗೆ ಕೂಡ ಸಿನಿಮಾ ಮಾಡುವ ಹಂಬಲ ಇದೆ. ದರ್ಶನ್ ಅವರ ಜೊತೆಗೆ ಕೂಡ ಈ ಹಿಂದೆ ಆಕ್ಟ್ ಮಾಡಿದ್ದೇನೆ ಮುಂದೆ ಸಹ ಸಿನಿಮಾ ಮಾಡಬೇಕು. ಹೀಗೆ ನನಗೆ ತುಂಬ ಆಸೆಗಳು ಇವೆ.'' - ರಾಧಿಕಾ ಕುಮಾರಸ್ವಾಮಿ, ನಟಿ

ಹೊಸ ನಟಿಯರನ್ನು ಪರಿಚಯ ಮಾಡುವ ಪ್ಲಾನ್ ಇದೆ
''ಮೊದಲು ನಾನು ನಿರ್ಮಾಣ ಮಾಡಿದ ಚಿತ್ರದಲ್ಲಿ ರಮ್ಯಾ ನಾಯಕಿ ಆಗಿದ್ದರು. ಎರಡನೇ ಹಾಗೂ ಮೂರನೇ ಚಿತ್ರಕ್ಕೆ ನಾನೇ ನಾಯಕಿ ಆಗಿದ್ದೇನೆ. ಆದರೆ, ಮುಂದೆ ಒಳ್ಳೆಯ ಕಥೆಗಳು ಬಂದರೆ ಒಳ್ಳೆ ಒಳ್ಳೆಯ ನಾಯಕಿಯರನ್ನು ನನ್ನ ಬ್ಯಾನರ್ ನಲ್ಲಿ ಪರಿಚಯ ಮಾಡುವ ಪ್ಲಾನ್ ಇದೆ.'' - ರಾಧಿಕಾ ಕುಮಾರಸ್ವಾಮಿ, ನಟಿ

ಡ್ಯಾನ್ಸ್ ಬಗ್ಗೆ ಇರುವ ಸಿನಿಮಾ
''ಹೊರಗಡೆ ಬ್ಯಾನರ್ ನಿಂದ ಒಂದು ಸಿನಿಮಾ ಬಂದಿದೆ. ಅದು ಡ್ಯಾನ್ಸ್ ಬಗ್ಗೆ ಇದೆ. ಅದು ಸದ್ಯಕ್ಕೆ ಮಾತುಕತೆಯ ಹಂತದಲ್ಲಿದೆ. ಜೊತೆಗೆ ನನ್ನ ಬ್ಯಾನರ್ ನಲ್ಲಿಯೂ ಒಂದು ಡ್ಯಾನ್ಸ್ ಬಗ್ಗೆ ಇರುವ ಒಳ್ಳೆಯ ಕಥೆಯ ಸಿನಿಮಾ ಮಾಡಿಸುತ್ತಿದ್ದೇನೆ.''

ಮುಂದಿನ ಸಿನಿಮಾಗಳು
'ಕಾಂಟ್ರಕ್ಟ್' ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದೆ. ಇನ್ನೂ ಒಂದು ಶಾಡ್ಯೂಲ್ ಅಷ್ಟೇ ಉಳಿಸಿದೆ. 'ರಾಜೇಂದ್ರ ಪೊನ್ನಪ್ಪ' ಚಿತ್ರದ ಎರಡು ಹಾಡಿನ ಚಿತ್ರೀಕರಣ ಮೊನ್ನೆ ಆಗಿದೆ. ಇವುಗಳ ಜೊತೆಗೆ 'ದಮಯಂತಿ' ಚಿತ್ರದಲ್ಲಿ ಕೂಡ ನಟಿಸುತ್ತಿದ್ದೇನೆ.


Click it and Unblock the Notifications











