ಗೌರಿ ಗಣೇಶ ಹಬ್ಬಕ್ಕೆ ಆಭರಣದ ಟಿಪ್ಸ್ ಹೇಳ್ತಿದ್ದಾರೆ ರಾಧಿಕಾ
Recommended Video

ಶ್ರಾವಣ ಮಾಸ ಶುರುವಾಗಿ ಮುಗಿಯುತ್ತಾ ಬರುತ್ತಿದೆ. ಶ್ರಾವಣ ಮಾಸ ಆರಂಭ ಅಂದರೆ ಹಬ್ಬಗಳ ಸಂಭ್ರಮವೂ ಜೊತೆಯಲ್ಲಿ ಬರುತ್ತೆ. ಈಗಾಗಲೇ ನಾಗರ ಪಂಚಮಿ ಹಾಗೂ ವರಮಹಾಲಕ್ಷ್ಮೀ ಹಬ್ಬವನ್ನು ಮುಗಿಸಿದ್ದು ಗೌರಿಯನ್ನ ಬರಮಾಡಿಕೊಳ್ಳಲು ಹೆಣ್ಣು ಮಕ್ಕಳು ಕಾತುರರಾಗಿದ್ದಾರೆ.
ಗೌರಿ ಹಬ್ಬ ಅಂದರೆ ಹೆಣ್ಣು ಮಕ್ಕಳಿಗೆ ತುಂಬಾನೇ ಸ್ಪೆಷಲ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೊಸ ಬಟ್ಟೆ, ಚಿನ್ನಾಭರಣ ಖರೀದಿ ಈ ಸಮಯದಲ್ಲಿ ಜೋರಾಗಿಯೇ ಇರುತ್ತೆ. ಮಾರುಕಟ್ಟೆಯಲ್ಲಿ ಹೊಸ ಹೊಸ ರೀತಿಯ ವಸ್ತ್ರಗಳು ಹಾಗೂ ಆಭರಣಗಳು ಈಗಾಗಲೇ ಹಬ್ಬದ ವಿಶೇಷವಾಗಿ ಬಂದಿದೆ.
ಈ ಸಲ ಗೌರಿ ಹಬ್ಬಕ್ಕೆ ನೀವು ಯಾರ ರೀತಿಯ ಚಿನ್ನದ ಒಡವೆಯನ್ನು ಧರಿಸಿಕೊಂಡರೆ ಸುಂದರವಾಗಿ ಕಾಣಿಸುತ್ತೀರಾ ಎನ್ನುವುದರ ಬಗ್ಗೆ ನಟಿ ಹಾಗೂ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಟಿಪ್ಸ್ ಕೊಡುತ್ತಿದ್ದಾರೆ. ಅದಷ್ಟೇ ಅಲ್ಲದೆ ಅದಕ್ಕಾಗಿ ಒಂದು ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ. ಹಾಗಾದರೆ ರಾಧಿಕಾ ಕುಮಾರಸ್ವಾಮಿ ಕೊಡುತ್ತಿರುವ ಟಿಪ್ಸ್ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

ಆಭರಣದ ಬಗ್ಗೆ ರಾಧಿಕಾ ಕುಮಾರಸ್ವಾಮಿ ಟಿಪ್ಸ್
ನಟಿ ರಾಧಿಕಾ ಕುಮಾರಸ್ವಾಮಿ ಈ ಭಾರಿಯ ಜ್ಯೂವೆಲ್ಸ್ ಆಫ್ ಇಂಡಿಯಾದ ರಾಯಭಾರಿ ಆಗಿದ್ದಾರೆ. ಇದೇ ಕಾರಣದಿಂದ ದುಬಾರಿ ಚಿನ್ನಾಭರಣವನ್ನು ಧರಿಸಿ ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿದ್ದಾರೆ.

ಜ್ಯೂವೆಲರಿ ಫೋಟೋಶೂಟ್ ನಲ್ಲಿ ರಾಧಿಕಾ
ರಾಧಿಕಾ ಕುಮಾರಸ್ವಾಮಿ ಜ್ಯೂವೆಲರಿ ಜಾಹೀರಾತಿಗಾಗಿ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ಬೇರೆ ಬೇರೆ ಉಡುಗೆಯಲ್ಲಿ ರಾಧಿಕಾ ಕಾಣಿಸಿಕೊಂಡಿದ್ದು ಸದ್ಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೊದಲ ಜಾಹೀರಾತಿನಲ್ಲಿ ರಾಧಿಕಾ ಕುಮಾರಸ್ವಾಮಿ
ಸಾಮಾನ್ಯವಾಗಿ ರಾಧಿಕಾ ಕುಮಾರಸ್ವಾಮಿ ಯಾವುದೇ ಜಾಹೀರಾತಿನಲ್ಲಿ ಕಾಣಿಸಿಕೊಂಡಿಲ್ಲ. ಸದ್ಯ ಸಿನಿಮಾದಲ್ಲಿ ಬ್ಯುಸಿ ಆಗಿರುವ ನಟಿ ಆಭರಣ ಧರಿಸಿ ಸುಂದರವಾಗಿ ಕಾಣಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದಲೇ ಜ್ಯೂವೆಲ್ಸ್ ಆಫ್ ಇಂಡಿಯಾ ಜಾಹೀರಾತನ್ನು ಒಪ್ಪಿಕೊಂಡಿದ್ದಾರೆ.

ಸೀರೆಗೆ ಒಡವೆ ಮುಖ್ಯ ಅಂತಾರೆ ರಾಧಿಕಾ
ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ರಾಧಿಕಾ ಕುಮಾರಸ್ವಾಮಿ ಸೀರೆ ಧರಿಸುವ ಎಲ್ಲಾ ಮಹಿಳೆಯರು ಒಡವೆಯನ್ನು ಧರಿಸಲೇಬೇಕು ಅಂತಾರೆ. ರೇಷ್ಮೇ ಸೀರೆ ಧರಿಸಿದಾಗ ಚಿನ್ನದ ಒಡವೆ ಹಾಕಿದರೇ ಚೆನ್ನಾ ಎನ್ನುವುದು ರಾಧಿಕಾ ತಮ್ಮ ಅಭಿಮಾನಿಗಳಿಗೆ ನೀಡುವ ಟಿಪ್ಸ್.


Click it and Unblock the Notifications











