ನವರಾತ್ರಿಯ ಮೊದಲ ದಿನ ಬೆಳ್ಳಿತೆರೆಯಲ್ಲಿ ಧಗಧಗಿಸಲಿದ್ದಾಳೆ ಭೈರಾದೇವಿ..!

ರಾಧಿಕಾ ಕುಮಾರಸ್ವಾಮಿ ಅವರ ಪಾಲಿಗೆ ಈಗ ಎರಡನೇ ಸುತ್ತಿನ ಪರ್ವ ಕಾಲವೊಂದು ಆರಂಭವಾಗುವ ಲಕ್ಷಣ ಕಂಡು ಬರುತ್ತಿದೆ. ಇದಕ್ಕೆ ಪೂರಕವಾಗಿ ವರ್ಷದವರೆಗೆ ತೆರೆ ಮರೆಗೆ ಸರೆದಿದ್ದ ಭೈರಾದೇವಿ ಮತ್ತೊಮ್ಮೆ ಸದ್ದು ಮಾಡಲು ಶುರು ಮಾಡಿದೆ. ಚಿತ್ರದ ಬಿಡುಗಡೆಗೆ ಮುಹೂರ್ತ ಕೂಡ ಫಿಕ್ಸ್ ಆಗಿದೆ.

ಹೌದು, ರಾಧಿಕಾ ಕುಮಾರಸ್ವಾಮಿ ಖುದ್ದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುವುದರ ಜೊತೆ ನಿರ್ಮಾಣವನ್ನೂ ಮಾಡಿರುವ ಭೈರಾದೇವಿ ಈ ಅಕ್ಟೋಬರ್ 3ರಂದು ರಾಜ್ಯದೆಲ್ಲೆಡೆ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ನವರಾತ್ರಿಯ ಮೊದಲ ದಿನವೇ ಈ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ.

Radhika Kumaraswamy has launched promotions for Bhairadevi releasing on October 3

ಇನ್ನೂ ನಿಮಗೆ ಗೊತ್ತು, ಮೊದಲೆಲ್ಲ ಹಾಡು ಗೆದ್ದರೆ ಸಿನಿಮಾ ಗೆದ್ದಂತೆ ಅನ್ನುವ ಮಾತು ಇತ್ತು. ಟ್ರೇಲರ್ ಪ್ರೇಕ್ಷಕರನ್ನು ತಲುಪಿದರೆ ಚಿತ್ರ ಗೆಲ್ಲುವುದು ಖಚಿತವೆನ್ನುವ ಅಭಿಪ್ರಾಯ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಎಷ್ಟೇ ಉತ್ತಮ ಚಿತ್ರ ಮಾಡಿದರೂ ಆ ಚಿತ್ರಕ್ಕೆ ಪ್ರಚಾರ ಕೂಡ ಅಷ್ಟೇ ಮುಖ್ಯ. ಇದನ್ನು ಮನಗಂಡೆ ರಾಧಿಕಾ ಕುಮಾರಸ್ವಾಮಿ ತಮ್ಮ ಚಿತ್ರದ ಪ್ರಚಾರದ ಕಡೆಗೆ ಗಮನ ಕೊಡುತ್ತಿದ್ದಾರೆ. ವಿನೂತನವಾಗಿ ಪ್ರಚಾರವನ್ನೂ ಆರಂಭಿಸಿದ್ದಾರೆ. ಇದರ ಮೊದಲ ಹಂತವಾಗಿ ಭೈರಾದೇವಿಯ ಟ್ಯಾಬ್ಲೋ ಮತ್ತು ಆಟೋ ಪ್ರಚಾರಕ್ಕೆ ರಾಧಿಕಾ ಕುಮಾರಸ್ವಾಮಿ ಚಾಲನೆಯನ್ನು ನೀಡಿದ್ದಾರೆ.

ವಿಶೇಷ ಅಂದರೆ ಹಸಿರು ನಿಶಾನೆಯನ್ನು ತೋರಿಸಿ ಕೇವಲ ಪ್ರಚಾರಕ್ಕೆ ಚಾಲನೆ ನೀಡುವುದಲ್ಲದೇ, ಖುದ್ದು ರಾಧಿಕಾ ಕುಮಾರಸ್ವಾಮಿ ತಾವೇ ಆಟೋವನ್ನು ಕೂಡ ಚಾಲನೆ ಮಾಡಿದ್ದಾರೆ. ಪುರುಷ ಮತ್ತು ಮಹಿಳಾ ಆಟೋ ಚಾಲಕರ ಕಷ್ಟ ಸುಖವನ್ನೂ ಹಂಚಿಕೊಂಡಿದ್ದಾರೆ. ಭೈರಾದೇವಿ ಚಿತ್ರದ ಪೋಸ್ಟರ್ ವುಳ್ಳ ಈ ಟ್ಯಾಬ್ಲೊ ಹಾಗೂ ಆಟೋಗಳು ಇಂದಿನಿಂದ ರಾಜ್ಯಾದ್ಯಂತ ಸಂಚರಿಸಲಿವೆ. ಚಿತ್ರದ ಪ್ರಚಾರವನ್ನೂ ಮಾಡಲಿವೆ .

radhika-kumaraswamy-has-launched-promotions-for-bhairadevi-releasing-on-october-3

ಇನ್ನೂ ಶ್ರೀಜೈ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸರಿ ಸುಮಾರು ಒಂಬತ್ತು ವರ್ಷದ ಹಿಂದೆ ದುನಿಯಾ ವಿಜಯ್ ಅವರಿಗೆ ಆರ್ ಎಕ್ಸ್‌ ಸೂರಿ ಚಿತ್ರವನ್ನು ನಿರ್ದೇಶಿಸಿದ್ದ ಶ್ರೀಜೈ ಈ ಚಿತ್ರಕ್ಕೆ ತಮ್ಮ ತನು ಮನವನ್ನು ಅರ್ಪಿಸಿ ಕೆಲಸ ಮಾಡಿದ್ದಾರೆ. ಹೀಗಾಗಿ ಇದು ಕೇವಲ ರಾಧಿಕಾ ಕುಮಾರಸ್ವಾಮಿ ಅವರಿಗೆ ಮಾತ್ರ ಮಹತ್ವದ ಸಿನಿಮಾ ಅಲ್ಲ ಬದಲಿಗೆ ಶ್ರೀಜೈಗೆ ಕೂಡ ತುಂಬಾನೇ ಮಹತ್ವವಾದ ಸಿನಿಮಾ.

ಉಳಿದಂತೆ ಈ ಚಿತ್ರದಲ್ಲಿ ರಮೇಶ್ ಅರವಿಂದ್ ಕೂಡ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನೂ ಆಪ್ತಮಿತ್ರದ ರೀತಿ ಭೈರಾದೇವಿ ಚಿತ್ರ ಮೂಡಿ ಬಂದಿದೆ ಎಂಬ ರಮೇಶ್ ಅರವಿಂದ್ ಅವರ ಹೇಳಿಕೆ ಈ ಚಿತ್ರದ ಮೇಲಿನ ಕುತೂಹಲವನ್ನೂ ಇನ್ನಷ್ಟು ಹೆಚ್ಚಿಸಿದೆ. ರಮೇಶ್ ಅರವಿಂದ್ ಅವರ ಜೊತೆ ರಂಗಾಯಣ ರಘು ಹಾಗೂ ರವಿಶಂಕರ್ ಕೂಡ ಚಿತ್ರದಲ್ಲಿದ್ದಾರೆ. ಇನ್ನು, ರಾಧಿಕಾ ಕುಮಾರಸ್ವಾಮಿ ಅವರೊಂದಿಗೆ ರವಿರಾಜ್ ಹಾಗೂ ಯಾದವ್ ನಿರ್ಮಾಣದಲ್ಲಿ ಕೈ ಜೋಡಿಸಿದ್ದು, ಜೆ.ಎಸ್.ವಾಲಿ ಛಾಯಾಗ್ರಹಣ, ಕೆ.ಕೆ.ಸೆಂಥಿಲ್ ಪ್ರಸಾದ್ ಸಂಗೀತ ನಿರ್ದೇಶನ ಹಾಗೂ ರವಿಚಂದ್ರನ್ ಅವರ ಸಂಕಲನ ಚಿತ್ರಕ್ಕಿದೆ. ಸದ್ಯಕ್ಕೆ ಪ್ರಚಾರದ ಮೈದಾನಕ್ಕೆ ಧುಮುಕಿರುವ ಭೈರಾದೇವಿ ಈ ಅಕ್ಟೋಬರ್ 03ರಂದು ಬಿಡುಗಡೆಯಾಗಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X