For Quick Alerts
  ALLOW NOTIFICATIONS  
  For Daily Alerts

  ಮಾನವೀಯತೆ ಮೆರೆದ ರಾಧಿಕಾ ಕುಮಾರಸ್ವಾಮಿ: ಕಷ್ಟದಲ್ಲಿರುವ ಜನರಿಗೆ ಆಹಾರ ಪದಾರ್ಥಗಳ ಪೂರೈಕೆ

  |

  ಇಡೀ ಜಗತ್ತೇ ಈಗ ಅಕ್ಷರಶಃ ತಲ್ಲಣದ ಸ್ಥಿತಿಯಲ್ಲಿದೆ. ಕೊರೊನಾ ವೈರಸ್ ಹಾವಳಿಯಿಂದ ಜನರು ತತ್ತರಿಸಿದ್ದಾರೆ. ಅದರಲ್ಲಿಯೂ ಬಡವರು, ದಿನಗೂಲಿ ಕಾರ್ಮಿಕರ ಬದುಕು ತೀರಾ ಸಂಕಷ್ಟದಲ್ಲಿದೆ. ಅವರಿಗೆ ಈಗ ದುಡಿಮೆಯಿಲ್ಲ. ಒಂದು ದಿನ ದುಡಿದರಷ್ಟೇ ಅಂದಿನ ಹೊಟ್ಟೆ ತುಂಬುವುದು ಎನ್ನುವ ಸ್ಥಿತಿಯಲ್ಲಿದ್ದವರಿಗೆ ಈಗ ಉದ್ಯೋಗವೂ ಇಲ್ಲ, ಸಂಪಾದನೆಯೂ ಇಲ್ಲ. ಹೀಗಿರುವಾಗ ಮನೆಯೊಳಗೇ ಕುಳಿತುಕೊಳ್ಳಬೇಕಾದ ಸ್ಥಿತಿಯಲ್ಲಿ ಅವರ ಹೊಟ್ಟೆಪಾಡೇನು?

  ಹೀಗೆ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಅನೇಕರು ನೆರವಾಗುತ್ತಿದ್ದಾರೆ. ಕೆಲವರು ಆರ್ಥಿಕ ನೆವರು ನೀಡುತ್ತಿದ್ದರೆ, ಇನ್ನು ಅನೇಕರು ಅವರಿಗೆ ತಮ್ಮಿಂದ ಸಾಧ್ಯವಾದಷ್ಟು ದವಸ ಧಾನ್ಯ ಮುಂತಾದವುಗಳನ್ನು ವಿತರಣೆ ಮಾಡುವ ಮೂಲಕ ನೆರವಾಗುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಬೀದಿಗಿಳಿದು ಜನರಿಗೆ, ಜಾನುವಾರುಗಳಿಗೆ ಸಹಾಯ ಮಾಡುತ್ತಿದ್ದಾರೆ. ಅವರ ಸಾಲಿಗೆ ನಟಿ ರಾಧಿಕಾ ಕುಮಾರಸ್ವಾಮಿ ಕೂಡ ಸೇರಿಕೊಂಡಿದ್ದಾರೆ.

  ನಿಮ್ಮ ಹೆಸರು ಕೂಡ ನೆನಪಿರೊಲ್ಲ, ಹಾಗೆ ಆಗ್ತೀರಿ: ಎಚ್ಚರಿಕೆ ನೀಡಿದ ಕ್ರೇಜಿಸ್ಟಾರ್ ರವಿಚಂದ್ರನ್ನಿಮ್ಮ ಹೆಸರು ಕೂಡ ನೆನಪಿರೊಲ್ಲ, ಹಾಗೆ ಆಗ್ತೀರಿ: ಎಚ್ಚರಿಕೆ ನೀಡಿದ ಕ್ರೇಜಿಸ್ಟಾರ್ ರವಿಚಂದ್ರನ್

  ಕಷ್ಟದಲ್ಲಿರುವ ಜನರಿಗೆ ಸಹಾಯ

  ಕಷ್ಟದಲ್ಲಿರುವ ಜನರಿಗೆ ಸಹಾಯ

  ಲಾಕ್‌ಡೌನ್ ಕಾರಣದಿಂದ ಅನೇಕ ಜನರ ಬದುಕು ಬೀದಿಗೆ ಬಂದಿದೆ. ಸಂಚಾರಿ ವಿಜಯ್, ಶೈನ್ ಶೆಟ್ಟಿ, ದೀಪಿಕಾ ದಾಸ್, ಸಾಧು ಕೋಕಿಲ ಮುಂತಾದ ಕಲಾವಿದರು ಬಡಜನರು ಹೆಚ್ಚಾಗಿ ಇರುವ ಸ್ಥಳಗಳಿಗೆ ತೆರಳಿ ಆಹಾರ ಸಾಮಗ್ರಿಗಳನ್ನು ಹಂಚುತ್ತಿದ್ದಾರೆ. ರಾಧಿಕಾ ಕುಮಾರಸ್ವಾಮಿ ಕೂಡ ಈ ಮಹತ್ವದ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.

  ವಿಡಿಯೋ ಹಂಚಿಕೊಂಡ ರಾಧಿಕಾ ಕುಮಾರಸ್ವಾಮಿ

  ವಿಡಿಯೋ ಹಂಚಿಕೊಂಡ ರಾಧಿಕಾ ಕುಮಾರಸ್ವಾಮಿ

  ತಮ್ಮ ಕಾರ್ಯದ ಬಗ್ಗೆ ರಾಧಿಕಾ ಕುಮಾರಸ್ವಾಮಿ ಹೆಮ್ಮೆ ಮತ್ತು ಖುಷಿಯನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಸ್ಥಳವೊಂದರಲ್ಲಿ ಜನರಿಗೆ ಆಹಾರ ಪದಾರ್ಥಗಳನ್ನು ವಿತರಿಸುವ ವಿಡಿಯೋವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

  ಇದು ನಮ್ಮ ಜವಾಬ್ದಾರಿ

  ಇದು ನಮ್ಮ ಜವಾಬ್ದಾರಿ

  ಮನುಷ್ಯರಾಗಿ ನಾವು ನಮ್ಮ ನಡುವಿನ ಅತಿ ಸಂಕಷ್ಟದಲ್ಲಿರುವ ಜನರಿಗೆ ಅವರ ಅಗತ್ಯದ ಸಮಯದಲ್ಲಿ ಸಹಾಯ ಮಾಡುವುದು ನಮ್ಮ ಜವಾಬ್ದಾರಿ ಎಂದು ನನಗೆ ಅನಿಸಿದೆ ಎಂಬುದಾಗಿ ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.

  ಜನರಿಗೆ ಸಹಾಯ ಮಾಡುವ ಉದ್ದೇಶ

  ಜನರಿಗೆ ಸಹಾಯ ಮಾಡುವ ಉದ್ದೇಶ

  ಹೀಗೆ ಕಷ್ಟದಲ್ಲಿರುವ ಜನರಿಗೆ ನೆರವಾಗುವ ಉದ್ದೇಶದಿಂದ ಅವರು ಬೆಂಗಳೂರಿನ ಬಡ ಜನರಿಗೆ ಆಹಾರ ಪದಾರ್ಥಗಳನ್ನು ನೀಡಿದ್ದಾಗಿ ತಿಳಿಸಿದ್ದಾರೆ. ಈ ಮೂಲಕ ರಾಧಿಕಾ, ಅನೇಕರಿಗೆ ಮಾದರಿಯಾಗುವ ಮಹತ್ಕಾರ್ಯವನ್ನು ಮಾಡಿದ್ದಾರೆ.

  ಸಾಮಾಜಿಕ ಅಂತರ ಕಾಪಾಡಲು ಮನವಿ

  ರಾಧಿಕಾ ಆಹಾರ ಪದಾರ್ಥಗಳ ವಿತರಣೆಗೆ ತೆರಳಿದ್ದಾಗ ನೂರಾರು ಮಂದಿ ಸರದಿಯಲ್ಲಿ ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬಂತು. ಪದಾರ್ಥಗಳನ್ನು ಪಡೆದುಕೊಳ್ಳುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ರಾಧಿಕಾ ಮನವಿ ಮಾಡಿದರು.

  ಮಾಸ್ಕ್ ಹಾಕಿಯೇ ಫೋಟೊ ತೆಗೆಸಿಕೊಂಡರು

  ಮಾಸ್ಕ್ ಹಾಕಿಯೇ ಫೋಟೊ ತೆಗೆಸಿಕೊಂಡರು

  ರಾಧಿಕಾ ಅವರಿಂದ ಆಹಾರ ಪದಾರ್ಥಗಳನ್ನು ಪಡೆದುಕೊಂಡ ಜನರೂ ಖುಷಿಗೊಂಡರು. ನೀರು ಕೊಡಲೇ, ಏನಾದರೂ ಕುಡಿಯಿರಿ ಎಂದು ಉಪಚಾರ ಮಾಡಿದರು. ಅದಕ್ಕೆ ರಾಧಿಕಾ, 'ತೊಂದರೆಯಿಲ್ಲ, ಈಗಷ್ಟೇ ನೀರು ಕುಡಿದು ಬಂದಿದ್ದೇನೆ ಎಂದರು. ಇನ್ನು ಅನೇಕರು ಮುಖಕ್ಕೆ ಮಾಸ್ಕ್ ಧರಿಸಿಯೇ ಅವರೊಂದಿಗೆ ಫೋಟೊ ತೆಗೆಸಿಕೊಂಡರು.

  English summary
  Actress Radhika Kumaraswamy distributed food items to the needy people in Bengaluru amid lockdown.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X