For Quick Alerts
  ALLOW NOTIFICATIONS  
  For Daily Alerts

  'ದಮಯಂತಿ' ರಾಧಿಕಾ ಕುಮಾರಸ್ವಾಮಿ ಮತ್ತೆ ಸುದ್ದಿಯಲ್ಲಿರುವುದು ಇದೇ ಕಾರಣಕ್ಕೆ!

  |

  ಒ೦ಬತ್ತನೇ ತರಗತಿ ಮುಗಿದ ನ೦ತರ, 2002ರಲ್ಲಿ "ನೀಲಾ ಮೇಘ ಶಾಮ" ಎನ್ನುವ ಚಿತ್ರದ ಮೂಲಕ, ತಮ್ಮ ಸಿನಿಮಾ ಬದುಕನ್ನು ಆರಂಭಿಸಿದ್ದ ರಾಧಿಕಾ ಕುಮಾರಸ್ವಾಮಿ, ನಟನೆಯ ಜೊತೆಗೆ ನಿರ್ಮಾಪಕರೂ ಆಗಿದ್ದಾರೆ.

  ಈಗಾಗಲೇ, ಯಶ್ ಮತ್ತು ರಮ್ಯಾ ಅಭಿನಯದ 'ಲಕ್ಕಿ' ಸಿನಿಮಾವನ್ನು ನಿರ್ಮಿಸಿದ್ದ ರಾಧಿಕಾ, ಇದಾದ ನಂತರ 'ಸ್ವೀಟಿ ನನ್ ಜೋಡಿ' ಸಿನಿಮಾದ ಪ್ರೊಡ್ಯೂಸರ್ ಕೂಡಾ ಆಗಿದ್ದರು.

  ರಾಧಿಕಾ ನಟನೆಯ 'ದಮಯಂತಿ' ಪೋಸ್ಟರ್ ಬಿಡುಗಡೆ ಮಾಡಿದ ಮೋಹನ್ ಲಾಲ್ರಾಧಿಕಾ ನಟನೆಯ 'ದಮಯಂತಿ' ಪೋಸ್ಟರ್ ಬಿಡುಗಡೆ ಮಾಡಿದ ಮೋಹನ್ ಲಾಲ್

  ಯಶ್-ರಾಧಿಕಾ ಪಾಲಿಗೆ ಇಂದು ವಿಶೇಷ ದಿನ: ಡ್ಯಾನ್ಸ್ ವಿಡಿಯೋ ಶೇರ್ ಮಾಡಿದ ದಂಪತಿ

  ಇದೀಗ, 'ದಮಯಂತಿ' ಸಿನಿಮಾ ನಿರ್ಮಾಣವನ್ನೂ ಬಹುತೇಕ ಮುಗಿಸಿರುವ ರಾಧಿಕಾ, ಈ ಚಿತ್ರದಲ್ಲಿ ಎರಡು ಶೇಡ್ ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

  ಯಾವ ಸಿನಿಮಾಗಾಗಿ ಈ ರೀತಿ ಬದಲಾದರು ರಾಧಿಕಾ ಕುಮಾರಸ್ವಾಮಿ?ಯಾವ ಸಿನಿಮಾಗಾಗಿ ಈ ರೀತಿ ಬದಲಾದರು ರಾಧಿಕಾ ಕುಮಾರಸ್ವಾಮಿ?

  ನವರಸನ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಎಲ್ಲಾ ಯೋಜನೆಯಂತೆ ನಡೆದರೆ, ಮುಂಬರುವ ನವೆಂಬರ್ ತಿಂಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಚಿತ್ರದ ನಿರ್ಮಾಪಕಿ ಕಮ್ ನಟಿ ರಾಧಿಕಾ, ಈಗ ಮತ್ತೆ ಸುದ್ದಿಯಲ್ಲಿದ್ದಾರೆ:

  ದಮಯಂತಿ ಸಿನಿಮಾ

  ದಮಯಂತಿ ಸಿನಿಮಾ

  ದಮಯಂತಿ ಸಿನಿಮಾವನ್ನು ನಾಲ್ಕು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲು ಸಿನಿಮಾ ತಂಡ ನಿರ್ಧರಿಸಿತ್ತು. ದಮಯಂತಿ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಮತ್ತು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ, ಇನ್ನೊಂದು ಭಾಷೆಯಲ್ಲೂ ಇದನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ರಾಧಿಕಾ ಅವರ ಈ ಪ್ರಯತ್ನದಿಂದ ಅವರು ಮತ್ತೆ ಸುದ್ದಿಯಲ್ಲಿದ್ದಾರೆ.

  ಬಿಡುಗಡೆಯಾದ ಒಂದು ವಾರದ ನಂತರ ಹಿಂದಿಯಲ್ಲಿ

  ಬಿಡುಗಡೆಯಾದ ಒಂದು ವಾರದ ನಂತರ ಹಿಂದಿಯಲ್ಲಿ

  ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡುವ ಮೂಲ ಯೋಜನೆಯನ್ನು ಹಾಕಿಕೊಂಡಿತ್ತು. ಈಗ, ಹಿಂದಿ ಭಾಷೆಯಲ್ಲೂ ಸಿನಿಮಾ ಬಿಡುಗಡೆ ಮಾಡಲು ರಾಧಿಕಾ ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ನಾಲ್ಕು ಭಾಷೆಯಲ್ಲಿ ಏಕಕಾಲದಲ್ಲಿ, ಬಿಡುಗಡೆಯಾದ ಒಂದು ವಾರದ ನಂತರ ಹಿಂದಿಯಲ್ಲಿ ಬಿಡುಗಡೆ ಮಾಡಲು ರಾಧಿಕಾ ನಿರ್ಧರಿಸಿದ್ದಾರೆ.

  ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್

  ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್

  ಚಿತ್ರತಂಡದ ಸ್ಪೂರ್ತಿ ಹೆಚ್ಚುವ ಇನ್ನೊಂದು ವಿದ್ಯಮಾನವೂ ನಡೆದಿದೆ. ದಮಯಂತಿ ಸಿನಿಮಾದ ಪೋಸ್ಟರ್ ಮಲಯಾಳಂನಲ್ಲೂ ಬಿಡುಗಡೆಯಾಗಿದೆ. ಚಿತ್ರದ ಟೀಸರ್ ಅನ್ನು ನೋಡಿದ್ದ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಚಿತ್ರತಂಡವನ್ನು ಕರೆಸಿ, ಬೆನ್ನು ತಟ್ಟಿದ್ದಾರೆ. ದಮಯಂತಿ ಸಿನಿಮಾದ ಮೊದಲ ಲುಕ್ ಅನ್ನು ಮೋಹನ್ ಲಾಲ್ ಬಿಡುಗಡೆ ಮಾಡಿದ್ದಾರೆ.

  ರಾಧಿಕಾ ಭಯಂಕರ್ ಲುಕ್ ನಲ್ಲಿದ್ದಾರೆ

  ರಾಧಿಕಾ ಭಯಂಕರ್ ಲುಕ್ ನಲ್ಲಿದ್ದಾರೆ

  ತನ್ನ ವೃತ್ತಿ ಬದುಕಿನ ಅತ್ಯಂತ ಕಷ್ಟದ ಪಾತ್ರವನ್ನು ಮಾಡಿದ್ದೇನೆ ಎಂದು ಈಗಾಗಲೇ ಹೇಳಿರುವ ರಾಧಿಕಾ, ಟೀಸರ್ ನೋಡಿ ಹೇಳುವುದಾದರೆ, ಭಯಂಕರ್ ಲುಕ್ ನಲ್ಲಿದ್ದಾರೆ. ರಾಧಿಕಾ ಕುಮಾರಸ್ವಾಮಿ, ಈ ಸಿನಿಮಾದಲ್ಲಿ ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಲಲಿದ್ದಾರೆ.

  ದೀಪಾವಳಿ ಹಬ್ಬದ ನಂತರ ಚಿತ್ರದ ಪ್ರಮೋಷನ್

  ದೀಪಾವಳಿ ಹಬ್ಬದ ನಂತರ ಚಿತ್ರದ ಪ್ರಮೋಷನ್

  ದೀಪಾವಳಿ ಹಬ್ಬದ ನಂತರ ಚಿತ್ರದ ಪ್ರಮೋಷನ್ ಶುರುಮಾಡಲು ರಾಧಿಕಾ ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಬಹು ನಿರೀಕ್ಷಿತ ಈ ಸಿನಿಮಾ, ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಚಿತ್ರದ ಡಬ್ಬಿಂಗ್ ಇತರ ಭಾಷೆಗಳಲ್ಲೂ ಈಗಾಗಲೇ ಮುಗಿದಿದೆ.

  English summary
  Radhika Kumaraswamy Produced And Acted Damayanthi Releasing In Hindi Too.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X