For Quick Alerts
  ALLOW NOTIFICATIONS  
  For Daily Alerts

  ರಾಧಿಕಾ ಕುಮಾರಸ್ವಾಮಿ ರಾಜಕೀಯ ಪ್ರವೇಶಕ್ಕೆ ಕುಟುಂಬದಿಂದ ಒತ್ತಡ

  |

  ರಾಧಿಕಾ ಕುಮಾರಸ್ವಾಮಿ ಅವರ ರಾಜಕೀಯಕ್ಕೆ ಬರ್ತಾರೆ ಎಂಬ ಮಾತು ಹಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ. ಆದ್ರೆ, ರಾಧಿಕಾ ಮಾತ್ರ ಈ ಸುದ್ದಿಯನ್ನು ನಿರಾಕರಿಸುತ್ತಲೇ ಬಂದಿದ್ದಾರೆ.

  ಮನೆಯಲ್ಲಿ ನನಗೆ ತುಂಬಾ ಒತ್ತಡ ಇತ್ತು ಎಂದು ಒಪ್ಪಿಕೊಂಡ Radhika Kumarswamy | Filmibeat Kannada

  ವಂಚಿತ ಯುವರಾಜ್ ಅವರ ಖಾತೆಯಿಂದ ರಾಧಿಕಾ ಕುಮಾರಸ್ವಾಮಿ ಖಾತೆಗೆ ಒಂದೂವರೆ ಕೋಟಿ ಹಣ ವರ್ಗಾವಣೆ ಆಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ರಾಧಿಕಾ ಅವರ ರಾಜಕೀಯ ಪ್ರವೇಶದ ಪ್ರಶ್ನೆ ಮತ್ತೆ ಎದುರಾಯ್ತು. ಇದಕ್ಕೆ ಪ್ರತಿಕ್ರಿಯಿಸಿದ ನಟಿ ''ಮನೆಯಲ್ಲಿ ರಾಜಕೀಯ ಪ್ರವೇಶ ಮಾಡುವಂತೆ ಒತ್ತಡ ಇತ್ತು'' ಎಂದು ಹೇಳಿದ್ದಾರೆ.

  ವಂಚಿತ ಯುವರಾಜ್ ಜೊತೆ ಸಿನಿಮಾ ಮಾಡಲು ನಿರ್ಧರಿಸಿದ್ದ ರಾಧಿಕಾ, ಯಾವುದು ಆ ಮೆಗಾ ಪ್ರಾಜೆಕ್ಟ್?ವಂಚಿತ ಯುವರಾಜ್ ಜೊತೆ ಸಿನಿಮಾ ಮಾಡಲು ನಿರ್ಧರಿಸಿದ್ದ ರಾಧಿಕಾ, ಯಾವುದು ಆ ಮೆಗಾ ಪ್ರಾಜೆಕ್ಟ್?

  ''ನಾನು ರಾಜಕೀಯ ಬರ್ತೀನಿ ಅಂತ ಹೇಳಿಲ್ಲ, ನನ್ನ ಕುಟುಂಬದಲ್ಲಿ ರಾಜಕೀಯಕ್ಕೆ ಬಾ ಎಂದು ಒತ್ತಡ ಹಾಕ್ತಿದ್ರು. ಆದರೆ, ಸದ್ಯಕ್ಕೆ ನಾನು ಸಿನಿಮಾ ಮಾಡಬೇಕು ಎಂಬ ಆಸೆಯಲ್ಲಿದ್ದೇನೆ. ಇನ್ನು ಸ್ವಲ್ಪ ಸಮಯ ಸಿನಿ ಇಂಡಸ್ಟ್ರಿಯಲ್ಲಿ ಇರಲು ನಿರ್ಧರಿಸಿದ್ದೇನೆ. ಆಮೇಲೆ ರಾಜಕೀಯ ನೋಡೋಣ. ರಾಜಕೀಯಕ್ಕೆ ಬರಲೇಬೇಕು ಎಂಬ ಉದ್ದೇಶ ಸದ್ಯಕ್ಕಿಲ್ಲ'' ಎಂದು ಸ್ಪಷ್ಟನೆ ನೀಡಿದ್ದಾರೆ.

  ಇನ್ನು ಬಂಧಿತ ಯುವರಾಜ್ ಅವರ ಜೊತೆಗಿನ ಸಂಪರ್ಕಕ್ಕೆ ಸಂಬಂಧಿಸಿದಂತೆ ಮಾತನಾಡಿದ ರಾಧಿಕಾ ''ಅವರು ನಮ್ಮ ಕುಟುಂಬದ ಜೊತೆ ಸುಮಾರು 17 ವರ್ಷದಿಂದ ಪರಿಚಯ ಹೊಂದಿದ್ದಾರೆ. ಸಿನಿಮಾ ಮಾಡೋಣ ಎಂಬ ಕಾರಣಕ್ಕಾಗಿ ನನ್ನ ಖಾತೆಗೆ 75 ಲಕ್ಷ (ಅವರ ಖಾತೆಯಿಂದ 15 ಲಕ್ಷ, ಬೇರೆಯೊಬ್ಬರ ಖಾತೆಯಿಂದ 60 ಲಕ್ಷ) ಹಣ ಹಾಕಿದ್ದರು ಅಷ್ಟೇ'' ಎಂದಿದ್ದಾರೆ.

  ನಮಗೆ ಮೋಸ ಆಗಿದೆ, ನಾವು ಯಾರಿಗೂ ಮೋಸ ಮಾಡಿಲ್ಲ: ರಾಧಿಕಾ ಕುಮಾರಸ್ವಾಮಿನಮಗೆ ಮೋಸ ಆಗಿದೆ, ನಾವು ಯಾರಿಗೂ ಮೋಸ ಮಾಡಿಲ್ಲ: ರಾಧಿಕಾ ಕುಮಾರಸ್ವಾಮಿ

  ಈ ವಿಚಾರವಾಗಿ ಸಿಸಿಬಿ ಪೊಲೀಸರು ವಿಚಾರಣೆಗೆ ಕರೆದರು ನಾನು ಹೋಗಲು ಸಿದ್ಧ. ಇದನ್ನು ಬಿಟ್ಟು ಬೇರೆ ಯಾವುದೇ ಹಣಕಾಸಿನ ವ್ಯವಹಾರ ನಮ್ಮ ನಡುವೆ ನಡೆದಿಲ್ಲ'' ಎಂದು ನಟಿ ಸ್ಪಷ್ಟಪಡಿಸಿದ್ದಾರೆ.

  English summary
  Kannada actress Radhika kumaraswamy press meet in bengaluru: she react about her political entry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X