''ಪ್ರಾಮಾಣಿಕವಾಗಿ ಹೇಳಬೇಕು ಅಂದರೆ ದರ್ಶನ್ ಅವರು ಕನ್ನಡ ಚಿತ್ರರಂಗಕ್ಕೆ ಬೇಕು'' - ರಾಧಿಕಾ ಕುಮಾರಸ್ವಾಮಿ..!
ದರ್ಶನ್ ಕೇವಲ ನೇರಾ ನೇರ ನಡುವಳಿಕೆಗೆ ಹೆಸರಾಗಿರಲಿಲ್ಲ. ಬದಲಿಗೆ ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್‌ಮಾರ್ಕ್ ಆಗಿತ್ತು. ಆದರೆ ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆಯ ದರ್ಶನ್ ಅವರಿಗೆ ಜನಪ್ರಿಯತೆಯ ಅಮಲು ಕೂಡ ಏರಿತ್ತು. ಹಣದ ಅಮಲು .. ಸುತ್ತಲು ಮೊಳಗುವ ಜೈಕಾರದ ನಶೆ .. ನಾನೇನೂ ಮಾಡಿದರು ಬಚಾವ್ ಆಗ್ಬಿಡ್ತೀನಿ ಎನ್ನುವ ಅಹಂಕಾರ.. ಇವೆಲ್ಲವೂ ಕೂಡ ನೆತ್ತಿಗೇರಿತ್ತು. ಖಾಸಗಿ ಬದುಕು ಕೂಡ ಗಲೀಜು ಆಗಿತ್ತು.
ಇನ್ನೂ ಅಭಿಮಾನಿಗಳಿಗೆ ದಾಸನಾಗಿದ್ದ ದರ್ಶನ್ ಕುಡಿತಕ್ಕೂ ದಾಸನಾಗಿದ್ದರು. ಸಹವಾಸ ದೋಷದಿಂದ ಮನೆ ಮಂದಿಯನ್ನೂ ಬಿಡದೇ, ಸ್ನೇಹಿತರು ತನ್ನ ಜೊತೆ ಕೆಲಸ ಮಾಡುವವರನ್ನು ಹೊಡೆಯುವುದು, ಬಡಿಯುವದು ಮಾಡಲು ಶುರುಮಾಡಿದರು. ಇಂಥಾ ದರ್ಶನ್ ಪರ ಚಿತ್ರರಂಗದಲ್ಲಿ ಅನೇಕರು ವಕಾಲತ್ತು ವಹಿಸಿದ್ದಾರೆ. ಸಾಲದಕ್ಕೆ ರಚಿತಾ ರಾಮ್ ಸೇರಿ ಅನೇಕರು ಪರಪ್ಪನ ಅಗ್ರಹಾರಕ್ಕೆ ತೆರಳಿ ದರ್ಶನ್ ದರ್ಶನವನ್ನು ಪಡೆದು ಪುನೀತರಾಗಿದ್ದಾರೆ. ಇದರ ನಡುವೆ ಈಗ ರಾಧಿಕಾ ಕುಮಾರಸ್ವಾಮಿ ಕೂಡ ದರ್ಶನ್ ಅವರ ಗುಣಗಾನವನ್ನು ಮಾಡಿದ್ದಾರೆ.

ಹೌದು, TV 9 ಕನ್ನಡಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಾಧಿಕಾ ಕುಮಾರಸ್ವಾಮಿ, ಕನ್ನಡ ಚಿತ್ರರಂಗಕ್ಕೆ ದರ್ಶನ್ ಅವರ ಅವಶ್ಯಕತೆ ತುಂಬಾ ಇದೆ ಎಂದು ಹೇಳಿದ್ದಾರೆ. ಅನಾಥರು ಮತ್ತು ಮಂಡ್ಯ ಸಮಯದಲ್ಲಿ ನಾನು ಅವರನ್ನು ನೋಡಿದ್ದು ಎಂದಿರುವ ರಾಧಿಕಾ ಅವರಲ್ಲಿ ಎಷ್ಟು ಸರಳತೆ ಇದೆ ಅಂದರೆ ಸೆಟ್‌ನಲ್ಲಿ ಟೆಕ್ನಿಷಿಯನ್ಸ್‌ಗಳಿಗೆಲ್ಲ ಅಣ್ಣ.. ಬನ್ನಿ.. ಹೋಗಿ ಎಂದು ಗೌರವ ನೀಡಿ ಮಾತನಾಡುತ್ತಿದ್ದರು ಎಂದು ಹೇಳಿದ್ದಾರೆ. ಎಲ್ಲಿಯೂ ಕೂಡ ತಾವು ದೊಡ್ಡ ನಟ ಎಂದು ತೋರಿಸಿಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ಧಾರೆ.
ಇನ್ನೂ, ಹಠಾತ್ ಆಗಿ ಈ ಸುದ್ದಿ ಕೇಳಿದಾಗ ನಿಜಾನಾ ಇದು ಎಂದು ನನಗೆ ನಂಬೋಕೆ ಸಾಧ್ಯವಾಗಲಿಲ್ಲ ಎಂದಿರುವ ರಾಧಿಕಾ ಕುಮಾರಸ್ವಾಮಿ, ಅವರವರ ಜೀವನದಲ್ಲಿ ಏನು ಆಗಿರುತ್ತೆ ಅದು ಅವರಿ ಮಾತ್ರ ಗೊತ್ತಿರಲು ಸಾಧ್ಯ ಎಂದಿರುವ ರಾಧಿಕಾ ನಮಗೆ ನೋಡಿದ್ದು, ಕಂಡಿದ್ದು ಮಾತ್ರ ನಮಗೆ ಗೊತ್ತಿರಲು ಸಾಧ್ಯ, ಅವರ ಬದುಕಿನಲ್ಲಿ ಏನಾಗಿದೆ ಎನ್ನುವುದು ನಮಗೆ ಗೊತ್ತಿರುವುದಿಲ್ಲ ಎಂದಿದ್ದಾರೆ. ಹೀಗಾಗಿ ಅವರ ಬಗ್ಗೆ ಕಾಮೆಂಟ್ ಮಾಡುವುದು ತಪ್ಪು ಎಂದಿರುವ ರಾಧಿಕಾ, ಪ್ರಾಮಾಣಿಕವಾಗಿ ಹೇಳಬೇಕು ಅಂದರೆ ದರ್ಶನ್ ಅವರು ಕನ್ನಡ ಚಿತ್ರರಂಗಕ್ಕೆ ಬೇಕು ಎಂದು ಹೇಳಿದ್ದಾರೆ. ಅವರಿಗೆ ಒಳ್ಳೇಯದಾಗಲಿ ಎಂದಿದ್ದಾರೆ.

ಇನ್ನೂ ಎಲ್ಲರ ಬದುಕಿನಲ್ಲಿ ಕೂಡ ಘಟನೆಗಳು ನಡೆಯುತ್ತಾನೇ ಹೋಗುತ್ತವೆ, ಮುಂಚಿತವಾಗಿ ನಮಗೆ ಯಾವುದು ಗೊತ್ತಾಗುವುದಿಲ್ಲ , ಗೊತ್ತಾದರೆ ಆ ಘಟನೆಗಳನ್ನು ನಾವು ನಡೆಯಲು ಬಿಡುವುದಿಲ್ಲ ಎಂದಿರುವ ರಾಧಿಕಾ ಕುಮಾರಸ್ವಾಮಿ, ಹಿಂದೆ ತಿರುಗಿ ನೋಡಿದಾಗ ಎಲ್ಲರು ಒಂದಿಲ್ಲೊಂದು ತೊಂದರೆಯನ್ನು ಅನುಭವಿಸಿಯೇ ಅನುಭವಿಸಿರುತ್ತಾರೆ ಆದರೆ ಅದೆಲ್ಲವನ್ನೂ ಎದುರಿಸಿ ನಾವು ಮುಂದೆ ಹೋಗ್ತಾ ಇರಬೇಕಷ್ಟೇ ಎಂದು ಹೇಳಿದ್ದಾರೆ. ಮುಂದುವರೆದು ನಾನು ದರ್ಶನ್ ಅವರಿಗೂ ಕೂಡ ಅದೇ ಹೇಳೋದು, ಅವರ ಲೈಫ್‌ನಲ್ಲಿ ಈಗೇನು ತೊಂದರೆಗಳು ಎದುರಾಗುತ್ತಿವೆ. ಈ ತೊಂದರೆಗಳನ್ನು ದರ್ಶನ್ ಬಗೆಹರಿಸಿಕೊಂಡು, ಆದಷ್ಟು ಬೇಗ ಅವರು ನಮ್ಮ ಚಿತ್ರರಂಗಕ್ಕೆ ಮರಳಿ ಬರಲಿ ಎಂದು ಹೇಳಿದ್ದಾರೆ ರಾಧಿಕಾ ಕುಮಾರಸ್ವಾಮಿ.


Click it and Unblock the Notifications











