ಛೇ.. ಆ ಚಿತ್ರದ ಆಫರ್ ಬಿಡಬಾರದಿತ್ತು: ರಾಧಿಕಾಗೆ ಈಗಲೂ ಕಾಡುತ್ತಿದೆ ಕೊರಗು.!
Recommended Video
ಸ್ಯಾಂಡಲ್ ವುಡ್ ನಲ್ಲಿ ರಾಧಿಕಾ ಕುಮಾರಸ್ವಾಮಿ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ. 'ಕಾಂಟ್ರಾಕ್ಟ್', 'ರಾಜೇಂದ್ರ ಪೊನ್ನಪ್ಪ', 'ಭೈರಾ ದೇವಿ', 'ದಮಯಂತಿ' ಸೇರಿದಂತೆ ಸಾಲು ಸಾಲು ಚಿತ್ರಗಳು ರಾಧಿಕಾ ಕುಮಾರಸ್ವಾಮಿ ಕೈಯಲ್ಲಿದೆ.
ಹಾಗ್ನೋಡಿದ್ರೆ, ರಾಧಿಕಾ ಕುಮಾರಸ್ವಾಮಿ ಸಿಕ್ಕಾಪಟ್ಟೆ ಚ್ಯೂಸಿ ಆಗಿದ್ದಾರೆ. ಬರುವ ಅವಕಾಶಗಳನ್ನೆಲ್ಲಾ ಸೀದಾ ಒಪ್ಪಿಕೊಳ್ಳದೆ, ಪಾತ್ರಗಳನ್ನು ಅಳೆದು ತೂಗಿ ರಾಧಿಕಾ ಕುಮಾರಸ್ವಾಮಿ ಒಪ್ಪಿಕೊಳ್ಳುತ್ತಿದ್ದಾರೆ.
ಇಂತಿಪ್ಪ ರಾಧಿಕಾ ಕುಮಾರಸ್ವಾಮಿಗೆ ಒಂದು ಕೊರಗು ಇದೆ. ''ಛೇ.. ಆ ಚಿತ್ರದ ಆಫರ್ ನ ಬಿಡಬಾರದಿತ್ತು'' ಅಂತ ರಾಧಿಕಾ ಕುಮಾರಸ್ವಾಮಿ ಈಗಲೂ ಅಂದುಕೊಳ್ಳುತ್ತಾರಂತೆ. ಯಾವುದು ಆ ಸಿನಿಮಾ ಅಂದ್ರೆ 'ಮಿಲನ'.!

ಹೌದು, 2007 ರಲ್ಲಿ ತೆರೆಕಂಡು ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಹಿಟ್ ಆದ ಸಿನಿಮಾ 'ಮಿಲನ'. ಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗೆ ಮಲಯಾಳಂ ಬೆಡಗಿ ಪಾರ್ವತಿ ನಟಿಸಿದ್ದರು. ಅಪ್ಪಟ ಫ್ಯಾಮಿಲಿ ಎಂಟರ್ ಟೇನರ್ ಆಗಿದ್ದ ಈ ಚಿತ್ರದಲ್ಲಿ ಪುನೀತ್ ಪತ್ನಿ ಪಾತ್ರದಲ್ಲಿ ನಟಿಸುವ ಅವಕಾಶ ಮೊದಲು ಹೋಗಿದ್ದು ರಾಧಿಕಾ ಕುಮಾರಸ್ವಾಮಿಗೆ.!
ಅಂದು 'ಅನಾಥರು' ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಿದ್ದ ರಾಧಿಕಾ ಕುಮಾರಸ್ವಾಮಿ ಕಾರಣಾಂತರಗಳಿಂದ 'ಮಿಲನ' ಪ್ರಾಜೆಕ್ಟ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿರಲಿಲ್ಲ. ಅವತ್ತು ತೆರೆಮೇಲೆ ಪುನೀತ್ ರಾಜ್ ಕುಮಾರ್ ಜೊತೆಗೆ ನಟಿಸುವ ಅವಕಾಶವನ್ನು ಮಿಸ್ ಮಾಡಿಕೊಂಡ ರಾಧಿಕಾ ಕುಮಾರಸ್ವಾಮಿ ಇವತ್ತಿನವರೆಗೂ ಅಪ್ಪು ಜೊತೆ ತೆರೆಹಂಚಿಕೊಳ್ಳಲು ಸಾಧ್ಯವಾಗಿಲ್ಲ.
ಹೀಗಾಗಿ, ''ಛೇ.. ಮಿಲನ ಸಿನಿಮಾ ಬಿಡಬಾರದಿತ್ತು'' ಅಂತ ರಾಧಿಕಾ ಮೇಡಂ ಈಗಲೂ ಕೊರಗುತ್ತಾರೆ.
ಅಂದ್ಹಾಗೆ, ರಾಧಿಕಾ ಕುಮಾರಸ್ವಾಮಿ ಅಭಿನಯದ 'ದಮಯಂತಿ' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಸದ್ಯದಲ್ಲೇ 'ದಮಯಂತಿ' ತೆರೆಗೆ ಬರಲಿದೆ. 'ದಮಯಂತಿ' ಚಿತ್ರದ ಪ್ರಚಾರ ಕಾರ್ಯಗಳಲ್ಲಿ ರಾಧಿಕಾ ಕುಮಾರಸ್ವಾಮಿ ತೊಡಗಿದ್ದಾರೆ.


Click it and Unblock the Notifications











