For Quick Alerts
  ALLOW NOTIFICATIONS  
  For Daily Alerts

  RSS ಮುಖಂಡ ಅಂತೇಳಿ ಕೋಟಿಗಟ್ಟಲೆ ವಂಚಿಸಿದ ಯುವರಾಜ್: ಖ್ಯಾತ ನಟಿ, ಸಹೋದರನ ಹೆಸರು ಲಿಂಕ್?

  |

  ಆರ್‌ಎಸ್ಎಸ್ ಮುಖಂಡ ಅಂತೇಳಿ ಪ್ರಮುಖ ವ್ಯಕ್ತಿ ಹಾಗೂ ಉದ್ಯಮಿಗಳಿಂದ ಕೋಟ್ಯಾಂತರ ರೂಪಾಯಿ ವಂಚಿಸಿರುವ ಆರೋಪದಲ್ಲಿ ಯುವರಾಜ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ಆರ್‌ಎಸ್‌ಎಸ್‌ ರಾಷ್ಟ್ರೀಯ ಮುಖಂಡರು ಸೇರಿದಂತೆ ಪ್ರಭಾವಿ ರಾಜಕಾರಣಿಗಳ ಹೆಸರು ಹೇಳಿಕೊಂಡು, 'ಎಲ್ಲರೂ ನನಗೆ ಆಪ್ತರು, ನಿಮಗೆ ಒಳ್ಳೆಯ ಸ್ಥಾನ ಕೊಡಿಸುತ್ತೇನೆ' ಎಂದು ಆಮಿಷ ತೋರಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತ್ತು.

  ಸಿಸಿಬಿ ಪೊಲೀಸರು ಯುವರಾಜ್ ಮನೆ ಮೇಲೆ ದಾಳಿ ನಡೆಸಿ ಅರೆಸ್ಟ್ ಮಾಡಿದ್ದರು. ಇದೀಗ, ವಿಚಾರಣೆ ವೇಳೆ ಕನ್ನಡದ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಮತ್ತು ಅವರ ಸಹೋದರನ ಖಾತೆಗೆ ಭಾರಿ ಮೊತ್ತದ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ವಿಷಯ ತಿಳಿದಿದೆ. ಈ ಹಿನ್ನೆಲೆ ರಾಧಿಕಾ ಮತ್ತು ಸಹೋದರನಿಗೆ ಈ ಕೇಸ್ ಕಂಟಕ ಆಗಲಿದ್ಯಾ ಎಂಬ ಅನುಮಾನ ಶುರುವಾಗಿದೆ. ಈ ಸಂಬಂಧ ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ಟಿವಿ 9 ವಾಹಿನಿಗೆ ಪ್ರತಿಕ್ರಿಯೆ ನೀಡಿದ್ದು, ''ಆತ ನಮ್ಮ ಕುಟುಂಬಕ್ಕೆ ಪರಿಚಿತ, ಆದರೆ, ಹಣಕಾಸಿನ ವ್ಯವಹಾರ ನಡೆದಿಲ್ಲ'' ಎಂದು ತಿಳಿಸಿದ್ದಾರೆ. ಮುಂದೆ ಓದಿ....

  ರಾಜ್ಯಪಾಲರನ್ನಾಗಿ ಮಾಡ್ತೀನಿ ಅಂತ 10 ಕೋಟಿ ವಂಚಿಸಿದ ಯುವರಾಜ !

   ನಮ್ಮ ಕುಟುಂಬಕ್ಕೆ ಸ್ವಾಮೀಜಿಯಾಗಿ ಪರಿಚಿತರು

  ನಮ್ಮ ಕುಟುಂಬಕ್ಕೆ ಸ್ವಾಮೀಜಿಯಾಗಿ ಪರಿಚಿತರು

  ''ಯುವರಾಜ್ ಸ್ವಾಮಿ ಎಂಬ ವ್ಯಕ್ತಿ ನಮ್ಮ ಕುಟುಂಬಕ್ಕೆ 15 ವರ್ಷದಿಂದ ಪರಿಚಿತರು. ಅವರ ಭವಿಷ್ಯವನ್ನು ನಮ್ಮ ತಂದೆ-ತಾಯಿ ಹೆಚ್ಚು ನಂಬುತ್ತಿದ್ದರು. ನಮ್ಮ ತಂದೆ ಸಾವಿನ ವಿಚಾರದಲ್ಲೂ ಅವರು ಹೇಳಿದ ಭವಿಷ್ಯ ನಿಜವಾಗಿತ್ತು ಎಂದು ತಮ್ಮ ತಾಯಿ ಹೇಳಿದ್ದರು. ಹೀಗೆ, ನಮ್ಮ ಕುಟುಂಬಕ್ಕೆ ಪರಿಚಿತರು ಅಷ್ಟೇ. ಇದನ್ನು ಬಿಟ್ಟು ಬೇರೆ ಯಾವುದೇ ರೀತಿಯ ವ್ಯವಹಾರಿಕ ಸಂಬಂಧ ನಮ್ಮ ಮತ್ತು ಅವರು ನಡುವೆ ಇಲ್ಲ'' ಎಂದು ಟಿವಿ9 ವಾಹಿನಿಗೆ ಸ್ಪಷ್ಟನೆ ನೀಡಿದ್ದಾರೆ.

   ಸಿಸಿಬಿ ವಿಚಾರಣೆಗೆ ಕರೆದಿದ್ದರು

  ಸಿಸಿಬಿ ವಿಚಾರಣೆಗೆ ಕರೆದಿದ್ದರು

  ಯುವರಾಜ್ ಜೊತೆಗಿನ ಸಂಪರ್ಕದ ಹಿನ್ನೆಲೆ ಸಿಸಿಬಿ ಪೊಲೀಸರು ರವಿರಾಜ್ ಅವರನ್ನು ವಿಚಾರಣೆ ಮಾಡಿದ್ದರು ಎಂದು ಸ್ವತಃ ರವಿರಾಜ್ ಮಾಹಿತಿ ನೀಡಿದ್ದಾರೆ. 'ಸಿಸಿಬಿ ಪೊಲೀಸರು ವಿಚಾರಣೆಗೆ ಕರೆದಿದ್ದರು. ಒಂದು ಗಂಟೆ ಕಾಲ ವಿಚಾರಣೆಗೆ ಒಳಪಟ್ಟಿದ್ದೆ'' ಎಂದು ಒಪ್ಪಿಕೊಂಡಿದ್ದಾರೆ.

   ರಾಧಿಕಾ ಹಣಕಾಸಿನ ವ್ಯವಹಾರದ ಬಗ್ಗೆ ಗೊತ್ತಿಲ್ಲ

  ರಾಧಿಕಾ ಹಣಕಾಸಿನ ವ್ಯವಹಾರದ ಬಗ್ಗೆ ಗೊತ್ತಿಲ್ಲ

  ಬಂಧಿತ ಯುವರಾಜ್ ಖಾತೆಯಿಂದ ರಾಧಿಕಾ ಕುಮಾರಸ್ವಾಮಿ ಅವರಿಗೂ ಹಾಗು ರವಿರಾಜ್ ಇಬ್ಬರಿಗೂ ಹಣ ವರ್ಗಾವಣೆ ಆಗಿದೆ ಎಂದು ಹೇಳಲಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿದ ರವಿರಾಜ್ ''ನನ್ನ ಖಾತೆಗೆ ಹಣ ವರ್ಗಾವಣೆ ಆಗಿಲ್ಲ, ನನಗೂ ಮತ್ತು ಅವರ ನಡುವೆ ಯಾವುದೇ ಹಣಕಾಸಿನ ವ್ಯವಹಾರ ನಡೆದಿಲ್ಲ. ನನ್ನ ಸಹೋದರಿ ಕುರಿತು ನನಗೆ ಸದ್ಯಕ್ಕೆ ಮಾಹಿತಿ ಇಲ್ಲ'' ಎಂದು ಹೇಳಿದ್ದಾರೆ.

  ನಿಮ್ಮನ್ನ ನೋಡೋಕೆ ನನಗೂ ಇಷ್ಟ ಆದ್ರೆ ಏನ್ಮಾಡೋದು ಎಂದ ಯಶ್ | Filmibeat Kannada
   ಮಧ್ಯಾಹ್ನ ಸುದ್ದಿಗೋಷ್ಠಿ?

  ಮಧ್ಯಾಹ್ನ ಸುದ್ದಿಗೋಷ್ಠಿ?

  ಸದ್ಯ ಬೆಂಗಳೂರಿನಿಂದ ಹೊರಗೆ ಇರುವ ರಾಧಿಕಾ ಕುಮಾರಸ್ವಾಮಿ ಮತ್ತು ರವಿರಾಜ್ ಮಧ್ಯಾಹ್ನದ ವೇಳೆ ಡಾಲರ್ಸ್ ಕಾಲೋನಿಯಲ್ಲಿರುವ ಮನೆಗೆ ಬರಲಿದ್ದಾರೆ. ಆ ನಂತರ 2.30ರ ವೇಳೆ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಸ್ಪಷ್ಟನೆ ನೀಡಲಿದ್ದಾರೆ ಎಂದು ಸ್ವತಃ ರವಿರಾಜ್ ಅವರೇ ಮಾಹಿತಿ ನೀಡಿದ್ದಾರೆ.

  English summary
  Radhika Kumaraswamy Brother Raviraj gives clarifiaction about Fake RSS Leader Yuvaraja case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X