ದಸರಾ ಹಬ್ಬಕ್ಕೆ ರಾಧಿಕಾ ಕುಮಾರಸ್ವಾಮಿ ಸಿನಿಮಾ ಮತ್ತೆ ತೆರೆಗೆ

ಕೊರೊನಾ ಲಾಕ್‌ಡೌನ್ ಮುಗಿದು ಷರತ್ತುಗಳೊಂದಿಗೆ ಚಿತ್ರಮಂದಿರಗಳು ಪುನಃ ಪ್ರಾರಂಭವಾಗಿವೆ. ಆದರೆ ಹೊಸ ಸಿನಿಮಾಗಳು ಚಿತ್ರಮಂದಿರಕ್ಕೆ ಬರಲು ಹಿಂದಡಿ ಇಡುತ್ತಿವೆ.

ಈ ಸನ್ನಿವೇಶ ಈಗಾಗಲೇ ಬಿಡುಗಡೆ ಆಗಿರುವ ಸಿನಿಮಾಗಳಿಗೆ ಸುವರ್ಣಾವಕಾಶ ಕಲ್ಪಿಸಿದ್ದು, ಹಲವು ಸಿನಿಮಾಗಳು ಮರು ಬಿಡುಗಡೆ ಆಗಿವೆ. ಈ ಪಟ್ಟಿಗೆ ಮತ್ತೊಂದು ಸೇರ್ಪಡೆ ರಾಧಿಕಾ ಕುಮಾರಸ್ವಾಮಿ ನಟನೆಯ ದಮಯಂತಿ ಸಿನಿಮಾ.

ಹೌದು, ರಾಧಿಕಾ ಕುಮಾರಸ್ವಾಮಿ ನಟಿಸಿದ್ದ ದಮಯಂತಿ ಸಿನಿಮಾ ಮತ್ತೆ ಬಿಡುಗಡೆ ಆಗಲಿದೆ. ದಸರಾ ಹಬ್ಬದ ಸಂದರ್ಭದಲ್ಲಿ ದಮಯಂತಿ ಸಿನಿಮಾ ಮರು ಬಿಡುಗಡೆ ಮಾಡುವುದು ಸೂಕ್ತವೆಂದು ಚಿತ್ರತಂಡ ಭಾವಿಸಿ ಮರು ಬಿಡುಗಡೆ ಮಾಡುತ್ತಿದೆ.

ಅಭಿಮಾನಿಗಳ ಒತ್ತಾಯದ ಮೇರೆಗೆ ಮರುಬಿಡುಗಡೆ: ಚಿತ್ರತಂಡ

ಅಭಿಮಾನಿಗಳ ಒತ್ತಾಯದ ಮೇರೆಗೆ ಮರುಬಿಡುಗಡೆ: ಚಿತ್ರತಂಡ

ಚಿತ್ರತಂಡದ ಹೇಳಿರುವ ಪ್ರಕಾರ, ಸಿನಿಮಾ ಮರು ಬಿಡುಗಡೆ ಮಾಡುವಂತೆ ಅಭಿಮಾನಿಗಳು ಒತ್ತಾಯ ಮಾಡಿದ್ದರಂತೆ, ಹಾಗಾಗಿ ದಮಯಂತಿ ಸಿನಿಮಾ ಮರು ಬಿಡುಗಡೆ ಮಾಡುವ ನಿರ್ಧಾರ ಮಾಡಿದ್ದಾರಂತೆ.

ಕಳೆದ ವರ್ಷ ನವೆಂಬರ್ 29 ರಂದು ದಮಯಂತಿ ಬಿಡುಗಡೆ ಆಗಿತ್ತು

ಕಳೆದ ವರ್ಷ ನವೆಂಬರ್ 29 ರಂದು ದಮಯಂತಿ ಬಿಡುಗಡೆ ಆಗಿತ್ತು

ಕಳೆದ ವರ್ಷ ನವೆಂಬರ್ 29 ರಂದು ದಮಯಂತಿ ಸಿನಿಮಾ ಬಿಡುಗಡೆ ಆಗಿತ್ತು, ಚಿತ್ರಮಂದಿರದಲ್ಲಿ ದಮಯಂತಿ ಸಿನಿಮಾವು ಸಾಧಾರಣ ಪ್ರದರ್ಶನ ಕಂಡಿತ್ತು. ಆದರೆ ಈಗ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಚಿತ್ರತಂಡ. ಇದೇ ಶುಕ್ರವಾರ ಸಿನಿಮಾ ಮರು ಬಿಡಗುಡೆಗೊಳ್ಳುವ ಸಾಧ್ಯತೆ ಇದೆ.

ನವರಸನ್ ನಿರ್ದೇಶನದ ಸಿನಿಮಾ

ನವರಸನ್ ನಿರ್ದೇಶನದ ಸಿನಿಮಾ

ದಮಯಂತಿ ಸಿನಿಮಾವನ್ನು ನವರಸನ್ ನಿರ್ದೇಶಿಸಿದ್ದರು, ರಾಧಿಕಾ ಕುಮಾರಸ್ವಾಮಿ ಜೊತೆಗೆ, ಸೌರವ್ ಲೋಕೇಶ್, ಶರಣ್ ಉಲ್ತಿ, ಸಾಧು ಕೋಕಿಲಾ ಇನ್ನೂ ಹಲವರು ನಟಿಸಿದ್ದರು. ಸಿನಿಮಾಕ್ಕೆ ಆರ್.ಎಸ್.ಗಣೇಶ್ ನಾರಾಯಣ್ ಸಂಗೀತ ನೀಡಿದ್ದರು.

Recommended Video

ಮೈಸೂರಿನಲ್ಲಿ ಬೀಡುಬಿಟ್ಟ ಹರಿಪ್ರಿಯಾ, ನೀನಾಸಂ ಸತೀಶ್ | Filmibeat Kannada
ಯಾವೆಲ್ಲಾ ಸಿನಿಮಾಗಳು ಮರು ಬಿಡುಗಡೆ ಆಗಿವೆ?

ಯಾವೆಲ್ಲಾ ಸಿನಿಮಾಗಳು ಮರು ಬಿಡುಗಡೆ ಆಗಿವೆ?

ಚಿತ್ರಮಂದಿರಗಳು ತೆರೆದ ನಂತರ ಲವ್ ಮಾಕ್ಟೆಲ್, ಶಿವಾರ್ಜುನ, ದಿಯಾ, ಶಿವಾಜಿ ಸೂರತ್ಕಲ್, ಪುನೀತ್ ನಿರ್ಮಾಣದ ಮಾಯಾಬಜಾರ್, ಕಾಣದಂತೆ ಮಾಯವಾದನು, ಹೊಸಬರ ಸಿನಿಮಾ 3rd ಕ್ಲಾಸ್ ಸಿನಿಮಾಗಳು ಮರು ಬಿಡುಗಡೆ ಆಗಿವೆ.

More from Filmibeat

English summary
Radhika Kumaraswamy's Damayanthi movie re-releasing in theaters shortly. Film team said its demand of fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X