ವಿಡಿಯೋ: ಬೀಚ್‌ನಲ್ಲಿ ರಾಧಿಕಾ ಕುಮಾರಸ್ವಾಮಿ ಸಖತ್ ಡ್ಯಾನ್ಸ್

ವೈಯಕ್ತಿಕ ಕಾರಣಗಳಿಂದಾಗಿ ಸಿನಿಮಾರಂಗದಿಂದ ಕೆಲ ಕಾಲ ದೂರ ಉಳಿಸಿದ್ದ ನಟಿ ರಾಧಿಕಾ ಕುಮಾರಸ್ವಾಮಿ 2020ರ 'ದಮಯಂತಿ' ಸಿನಿಮಾದ ಮೂಲಕ ಮರುಪ್ರವೇಶ ಮಾಡಿದರು. ಇದೀಗ ಅವರ ನಟನೆಯ ಮೂರು ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಹಾಗೂ ಚಿತ್ರೀಕರಣದ ಹಂತದಲ್ಲಿವೆ.

ಸಿನಿಮಾ ರಂಗದಲ್ಲಿ ಸಕ್ರಿಯವಾಗಿರುವ ರಾಧಿಕಾ ಕುಮಾರಸ್ವಾಮಿ, ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯರಾಗಿದ್ದು, ನಿನ್ನೆಯಷ್ಟೆ ಅವರು ಪೋಸ್ಟ್ ಮಾಡಿರುವ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ.

ಸಮುದ್ರ ದಂಡೆಯಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಒಂದನ್ನು ರಾಧಿಕಾ ಕುಮಾರಸ್ವಾಮಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ರ್‍ಯಾಪರ್ ಬಾದ್‌ಶಾನ 'ಜುಗ್ನು' ಹಾಡಿಗೆ ರಾಧಿಕಾ ಕುಮಾರಸ್ವಾಮಿ ಹೆಜ್ಜೆ ಹಾಕಿದ್ದು, ಯಾವುದೇ ಕೊರಿಯಾಗ್ರಾಫರ್ ಇಲ್ಲದೆ ಹಾಡಿನ ತಾಳಕ್ಕೆ ತಕ್ಕಂತೆ ನರ್ತಿಸಿರುವುದನ್ನು ಹಲವರು ಪ್ರಶಂಸಿದ್ದಾರೆ. ತಾನು ಚೆನ್ನಾಗಿ ನೃತ್ಯ ಮಾಡಬಲ್ಲೆ ಎಂಬುದನ್ನು ಈ ಮೂಲಕ ತೋರಿಸಿಕೊಟ್ಟಿದ್ದಾರೆ ರಾಧಿಕಾ ಕುಮಾರಸ್ವಾಮಿ.

Radhika Kumaraswamys Dance Video Went Viral On Social Media
ರಾಧಿಕಾ ಕುಮಾರಸ್ವಾಮಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಡ್ಯಾನ್ಸ್ ವಿಡಿಯೋವನ್ನು ಕೆಲವೇ ಗಂಟೆಗಳಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಹಲವರು ಕಮೆಂಟ್ ಮಾಡಿ ರಾಧಿಕಾರ ನೃತ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಫೇಸ್‌ಬುಕ್‌ನಲ್ಲಿಯೂ ಕೆಲವರು ಇದೇ ವಿಡಿಯೋವನ್ನು ಹಂಚಿಕೊಂಡಿದ್ದು, ಅಲ್ಲಿಯೂ ವಿಡಿಯೋ ಸಖತ್ ವೈರಲ್ ಆಗಿದೆ.

ರಾಧಿಕಾ ಕುಮಾರಸ್ವಾಮಿ ಕನ್ನಡ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ 'ಕಾಂಟ್ರಾಕ್ಟ್' ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಇದರ ಜೊತೆಗೆ ರವಿಚಂದ್ರನ್ ನಟಿಸಿರುವ ನಿರೀಕ್ಷಿತ ಸಿನಿಮಾ 'ರಾಜೇಂದ್ರ ಪೊನ್ನಪ್ಪ'ದಲ್ಲಿಯೂ ರಾಧಿಕಾ ನಟಿಸಿದ್ದಾರೆ. ಜೊತೆಗೆ ಭೈರ ದೇವಿ ಎಂಬ ಭಕ್ತಿಪ್ರಧಾನ ಸಿನಿಮಾದಲ್ಲಿಯೂ ರಾಧಿಕಾ ನಟಿಸಿದ್ದಾರೆ.

ಕಳೆದ ವರ್ಷ ಜನವರಿ ತಿಂಗಳಲ್ಲಿ ರಾಧಿಕಾ ಕುಮಾರಸ್ವಾಮಿ ಹೆಸರು ವಿವಾದವೊಂದರಲ್ಲಿ ಕೇಳಿ ಬಂದಿತ್ತು. ಹಲವಾರು ಮಂದಿಗೆ ಕೋಟ್ಯಂತರ ಹಣ ವಂಚನೆ ಮಾಡಿದ್ದ ಆರ್‌ಎಸ್‌ಎಸ್ ಮುಖಂಡ ಯುವರಾಜ್ ಬಂಧನದ ಪ್ರಕರಣದಲ್ಲಿ ರಾಧಿಕಾ ಕುಮಾರಸ್ವಾಮಿ ಹೆಸರು ಕೇಳಿ ಬಂದಿತ್ತು.


ವಂಚಕ ಯುವರಾಜ್ ಅಲಿಯಾಸ್ ಸ್ವಾಮಿ ಖಾತೆಯಿಂದ ರಾಧಿಕಾ ಕುಮಾರಸ್ವಾಮಿಗೆ ಲಕ್ಷಾಂತರ ಹಣ ವರ್ಗಾವಣೆ ಆಗಿತ್ತು. ಈ ಬಗ್ಗೆ ತನಿಖೆ ನಡೆಸಲು ಸಿಸಿಬಿಯು ರಾಧಿಕಾಗೆ ನೊಟೀಸ್‌ ನೀಡಿ ವಿಚಾರಣೆ ಸಹ ನಡೆಸಿತ್ತು.

ಸುದ್ದಿಗೋಷ್ಠಿ ನಡೆಸಿ ತಮ್ಮ ಮೇಲೆ ಬಂದಿದ್ದ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ್ದ ರಾಧಿಕಾ ಕುಮಾರಸ್ವಾಮಿ, ''ಸಿನಿಮಾ ಮಾಡುವುದಾಗಿ ಸ್ವಾಮಿ ನಮ್ಮ ಬಳಿಗೆ ಬಂದಿದ್ದು, ಅವರ ಮಗಳ ಹೆಸರಿನಲ್ಲಿಯೇ ಬ್ಯಾನರ್ ಇತ್ತು. ಹಾಗಾಗಿ ನಾನು ಸಿನಿಮಾ ಮಾಡಲು ಒಪ್ಪಿಕೊಂಡೆ. ಅಡ್ವಾನ್ಸ್ ರೂಪದಲ್ಲಿ ಸ್ವಾಮಿಯು ತನ್ನ ಖಾತೆಯಿಂದ 15 ಲಕ್ಷ ಹಣವನ್ನು ಬೇರೆ ಖಾತೆಯಿಂದ 60 ಲಕ್ಷ ಹಣವನ್ನು ನನ್ನ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಸ್ವಾಮಿಯ ಇತರೆ ಯಾವುದೇ ಕಾರ್ಯಗಳ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಆತನ ಬಂಧನವಾದಾಗಲೇ ಆತನ ನಿಜ ರೂಪ ನನಗೆ ಗೊತ್ತಾಗಿದ್ದು. ಆತ ವಾಟ್ಸ್‌ಆಪ್‌ಗಳಲ್ಲಿ ದೊಡ್ಡ-ದೊಡ್ಡ ವ್ಯಕ್ತಿಗಳೊಂದಿಗೆ ಚಿತ್ರಗಳನ್ನು ಹಾಕಿಕೊಳ್ಳುತ್ತಿದ್ದರು. ಅವರು ಜ್ಯೋತಿಷಿ ಆಗಿದ್ದ ಕಾರಣ ಹಲವು ವರ್ಷಗಳಿಂದ ಅವರ ಪರಿಚಯ ನನಗೆ ಇತ್ತು'' ಎಂದಿದ್ದರು ರಾಧಿಕಾ.

More from Filmibeat

English summary
Actress Radhika Kumaraswamy's dance video went viral on social media. She danced to a Hindi number in the video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X