ಔಟ್ ಅಂಡ್ ಔಟ್ ಗ್ಲಾಮರಸ್ ಲುಕ್ ನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ.!
radhika kumaraswamy, kannada cinema, sandalwood, ರಾಧಿಕಾ ಕುಮಾರಸ್ವಾಮಿ, ಕನ್ನಡ ಸಿನಿಮಾ, ಸ್ಯಾಂಡಲ್ ವುಡ್
Recommended Video

'ನಿನಗಾಗಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತವಾದ ಬೆಡಗಿ ರಾಧಿಕಾ ಕುಮಾರಸ್ವಾಮಿ. ಹದಿನೈದು ವರ್ಷಗಳ ಹಿಂದೆ ನಟಿ ರಾಧಿಕಾ ಹೇಗಿದ್ರೋ, ಇಂದಿಗೂ ಹಾಗೇ ಇದ್ದಾರೆ. ನಿಜ ಹೇಳಬೇಕು ಅಂದ್ರೆ, ಹಿಂದೆಂದಿಗಿಂತಲೂ ನಟಿ ರಾಧಿಕಾ ಈಗ ಹೆಚ್ಚು ಚೆಂದ ಕಾಣ್ತಾರೆ.
ಮದುವೆ ಆಗಿ ಒಂದು ಮಗುವಿಗೆ ತಾಯಿ ಆಗಿದ್ದರೂ, ರಾಧಿಕಾ ಗ್ಲಾಮರ್ ಎಳ್ಳಷ್ಟೂ ಕಡಿಮೆ ಆಗಿಲ್ಲ. ಸೀರೆಯುಟ್ಟರೆ ನಟಿ ರಾಧಿಕಾ ಎಷ್ಟು ಮುದ್ದಾಗಿ ಕಾಣ್ತಾರೋ, ಅಷ್ಟೇ ಚೆಂದಕ್ಕಿಂತ ಚೆಂದವಾಗಿ ಮಾರ್ಡನ್ ಡ್ರೆಸ್ ನಲ್ಲೂ ಕಾಣ್ತಾರೆ. ಬೇಕಾದ್ರೆ, ನೀವೇ ಈ ಫೋಟೋ ನೋಡಿ...

ಕಪ್ಪು ಬಣ್ಣದ ಟಾಪ್ ಹಾಗೂ ಶಾರ್ಟ್ ಸ್ಕರ್ಟ್ ಧರಿಸಿರುವ ರಾಧಿಕಾ ಕುಮಾರಸ್ವಾಮಿ ಅವರ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಯಾವ ಸಿನಿಮಾದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಹೀಗೆ ಕಾಣಿಸಿಕೊಳ್ತಾರೆ ಅನ್ನೋದು ಕನ್ಫರ್ಮ್ ಆಗಿಲ್ಲ. ಆದ್ರೆ, ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುವ ನಟಿ ರಾಧಿಕಾ ಕುಮಾರಸ್ವಾಮಿ ಇದೀಗ ಇನ್ನಷ್ಟು ತೆಳ್ಳಗೆ ಆಗಿರುವುದು ಪಕ್ಕಾ.
ಸದ್ಯ, 'ಕಾಂಟ್ರ್ಯಾಕ್ಟ್', 'ಭೈರಾ ದೇವಿ', 'ರಾಜೇಂದ್ರ ಪೊನ್ನಪ್ಪ', 'ದಮಯಂತಿ' ಸಿನಿಮಾಗಳಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಬಿಜಿಯಾಗಿದ್ದಾರೆ.


Click it and Unblock the Notifications











