For Quick Alerts
  ALLOW NOTIFICATIONS  
  For Daily Alerts

  ತೆಲುಗಿನಲ್ಲಿ ಬಿಡುಗಡೆ ಆಗಲಿದೆ ರಾಧಿಕಾ ಕುಮಾರಸ್ವಾಮಿ ಹೊಸ ಸಿನಿಮಾ

  |

  ನಟಿ ರಾಧಿಕಾ ಕುಮಾರಸ್ವಾಮಿ ಅವರ ಅಭಿನಯದ ಹೊಸ ಸಿನಿಮಾ ತೆಲುಗಿನಲ್ಲಿಯೂ ಬಿಡುಗಡೆ ಆಗಲಿದೆ.

  ಸಿನಿಮಾ ರಂಗದಿಂದ ದೂರ ಉಳಿದಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಕೆಲ ವರ್ಷಗಳಿಂದ ಮತ್ತೆ ಸಿನಿಮಾಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ನಾಯಕಿ ಪ್ರಧಾನ ಚಿತ್ರಗಳಲ್ಲಷ್ಟೆ ನಟಿಸುತ್ತಿದ್ದ ರಾಧಿಕಾ ಈಗ ಸ್ಟಾರ್ ಹೀರೋಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

  ನಟ ಅರ್ಜುನ್ ಸರ್ಜಾ ಜೊತೆಗೆ 'ಕಾಂಟ್ರಾಕ್ಟ್' ಹೆಸರಿನ ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ನಟಿಸುತ್ತಿದ್ದಾರೆ. ಸಮೀರ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾವು ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲಿಯೂ ಬಿಡುಗಡೆ ಆಗಲಿದೆ.

  ಕನ್ನಡದಲ್ಲಿ 'ಕಾಂಟ್ರಾಕ್ಟ್' ಹೆಸರಿನ ಸಿನಿಮಾಕ್ಕೆ ತೆಲುಗಿನಲ್ಲಿ 'ಇದ್ದರು' ಎಂದು ಹೆಸರಿಡಲಾಗಿದೆ. ಅರ್ಜುನ್ ಸರ್ಜಾ ಹಾಗೂ ರಾಧಿಕಾ ಕುಮಾರಸ್ವಾಮಿ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿರುವ ಫೊಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  'ಕಾಂಟ್ರಾಕ್ಟ್' ಸಿನಿಮಾದಲ್ಲಿ ಅಲ್ಲು ಅರ್ಜುನ್ ನಾಯಕರಾಗಿದ್ದರೆ ರಾಧಿಕಾ ಕುಮಾರಸ್ವಾಮಿ ನಾಯಕಿ. ಜೊತೆಗೆ ಖ್ಯಾತ ನಟ ಜೆಡಿ ಚಕ್ರವರ್ತಿ, ಸೋನಿ ಚರಿಸ್ತಾ ಅವರುಗಳು ಇದ್ದಾರೆ. ಸಿನಿಮಾವು ಆಕ್ಷನ್ ಹಾಗೂ ಕೌಟುಂಬಿಕ ಕತೆಯನ್ನು ಹೊಂದಿದ ಸಿನಿಮಾ ಆಗಿರಲಿದೆ.

  ಕೊರೊನಾ ಪಾಸಿಟಿವ್ ಬಂದಿರೋ ಮಕ್ಕಳನ್ನು ಮನೆಯಲ್ಲಿ ಕೇರ್ ಮಾಡೋದು ಹೇಗೆ? | Filmibeat Kannada

  ರಾಧಿಕಾ ಕುಮಾರಸ್ವಾಮಿ ಅಭಿನಯದ 'ಭೈರಾದೇವಿ' ಸಿನಿಮಾ ಇನ್ನಷ್ಟೆ ಬಿಡುಗಡೆ ಆಗಬೇಕಿದೆ. ರವಿಚಂದ್ರನ್ ನಟಿಸಿ, ನಿರ್ದೇಶಿಸಿರುವ 'ರಾಜೇಂದ್ರ ಪೊನ್ನಪ್ಪ' ಸಿನಿಮಾದಲ್ಲಿಯೂ ರಾಧಿಕಾ ಕುಮಾರಸ್ವಾಮಿ ನಟಿಸಿದ್ದಾರೆ. ಅದರ ಬಳಿಕ 'ಕಾಂಟ್ರಾಕ್ಟ್' ಹಾಗೂ 'ಇದ್ದರು' ಸಿನಿಮಾ ಬಿಡುಗಡೆ ಆಗಲಿದೆ.

  English summary
  Actress Radhika Kumaraswamy's new movie 'Contract' releasing in Telugu as 'Iddaru'. Arjun Sarja is hero of the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X