ಅಭಿಮಾನಿಗಳಿಗಾಗಿ ಹೊಸ ವಿಡಿಯೋ ಹಂಚಿಕೊಂಡ ರಾಧಿಕಾ ಕುಮಾರಸ್ವಾಮಿ

ಸಿನಿಮಾ ನಟ-ನಟಿಯರು, ರಾಜಕಾರಣಿಗಳು ಈಗ ತಮ್ಮ ಅಭಿಮಾನಿಗಳು ಬೆಂಬಲಿಗರೊಟ್ಟಿಗೆ ಸಾಮಾಜಿಕ ಜಾಲತಾಣದ ಮೂಲಕ ಹತ್ತಿರದ ಸಂಪರ್ಕ ಸಾಧಿಸಿಕೊಂಡಿದ್ದಾರೆ.

ಸಿನಿಮಾ ಸೆಲೆಬ್ರಿಟಿಗಳಂತೂ ತಮ್ಮ ಸಿನಿಮಾ ಮಾಹಿತಿ ಸೇರಿದಂತೆ ವೈಯಕ್ತಿಕ ಜೀವನದ ಕೆಲವು ಮಾಹಿತಿಗಳನ್ನು ಸಹ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳಿಗೆ, ಪ್ರೀತಿ ಪಾತ್ರರಿಗೆ ತಲುಪಿಸುತ್ತಾರೆ. ನಟ-ನಟಿಯರು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಟ್ಟಿಗೆ ಆಗಾಗ್ಗೆ ನೇರವಾಗಿ ಸಂವಾದ ಸಹ ನಡೆಸುತ್ತಾರೆ.

ನಟಿ ರಾಧಿಕಾ ಕುಮಾರಸ್ವಾಮಿ ಮಸ್ತ್ ಡಾನ್ಸ್‌: ವಿಡಿಯೋಗೆ ಭಾರಿ ಮೆಚ್ಚುಗೆ!
ನಟಿ ರಾಧಿಕಾ ಕುಮಾರಸ್ವಾಮಿ ಕೆಲ ವರ್ಷಗಳಿಂದ ಚಿತ್ರರಂಗದಲ್ಲಿ ಮತ್ತೆ ಸಕ್ರಿಯರಾಗಿದ್ದು, ಸಿನಿಮಾ ನಿರ್ಮಾಣ, ನಟನೆ ಎರಡರಲ್ಲೂ ತೊಡಗಿಕೊಂಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ಸಹ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಸಮಸ್ಯೆಯೆಂದರೆ ಅವರ ಹೆಸರಲ್ಲಿ ಬಹಳ ಖಾತೆಗಳಿವೆ.

Radhika Kumaraswamy Said She Will Release Her Official Facebook Page
ಇದೀಗ ರಾಧಿಕಾ ಕುಮಾರಸ್ವಾಮಿ ಅವರು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ವಿಡಿಯೋದಲ್ಲಿ ಹೇಳಿರುವಂತೆ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಅಧಿಕೃತ ಫೇಸ್‌ಬುಕ್ ಪೇಜ್ ತೆರೆಯಲಿದ್ದಾರೆ. ನನ್ನ ಹೆಸರಲ್ಲಿ ಬಹಳಷ್ಟು ಮಂದಿ ಅಭಿಮಾನಿಗಳು ಫೇಸ್‌ಬುಕ್ ಪೇಜ್ ತೆರೆದು ಬಿಟ್ಟಿದ್ದಾರೆ ಹಾಗಾಗಿ ಈಗ ನನ್ನದೇ ಫೇಸ್‌ಬುಕ್ ಪೇಜ್ ತೆರೆಯಲಿದ್ದೇನೆ ಅಭಿಮಾನಿಗಳೊಂದಿಗೆ ಆ ಪೇಜ್‌ ಮೂಲಕ ಸಂಪರ್ಕದಲ್ಲಿರಲಿದ್ದೇನೆ ಎಂದಿದ್ದಾರೆ.

''ನನ್ನ ಹೆಸರಲ್ಲಿ ಸಾಕಷ್ಟು ಪೇಜ್‌ಗಳನ್ನು ಅಭಿಮಾನಿಗಳು ಪ್ರಾರಂಭಿಸಿಬಿಟ್ಟಿದ್ದಾರೆ ಇದರಿಂದ ಗೊಂದಲಗಳಾಗುತ್ತಿವೆ. ಹಾಗಾಗಿ ನನ್ನದೇ ಪೇಜ್ ಅನ್ನು ನಾನು ಬಿಡುಗಡೆ ಮಾಡಿದ್ದು, 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್' ರಿಯಾಲಿಟಿ ಶೋನ ಗ್ರ್ಯಾಂಡ್ ಫಿನಾಲೆಯಂದು ಅದೇ ಚಾನೆಲ್‌ನಿಂದ ಲೈವ್ ಬರಲಿದ್ದೇನೆ ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.


ಇನ್‌ಸ್ಟಾಗ್ರಾಂ ಖಾತೆ ಹೊಂದಿರುವ ರಾಧಿಕಾ ಕುಮಾರಸ್ವಾಮಿ ತಮ್ಮ ಚಿತ್ರಗಳು ವಿಡಿಯೋಗಳನ್ನು ಅಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕೆಲವು ದಿನಗಳ ಹಿಂದಷ್ಟೆ ಸಮುದ್ರ ದಂಡೆಯಲ್ಲಿ ನಿಂತು ಹಿಮದಿಯ 'ಜುಗ್ನು' ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿದ್ದರು ರಾಧಿಕಾ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

2002ರಲ್ಲಿ ಬಿಡುಗಡೆ ಆದ 'ನಿನಗಾಗಿ' ಸಿನಿಮಾದ ಮೂಲಕ ನಟನೆ ಆರಂಭಿಸಿದ ರಾಧಿಕಾ ಕುಮಾರಸ್ವಾಮಿ 2007ರ ವರೆಗೆ ಹಲವು ಸಿನಿಮಾಗಳಲ್ಲಿ ನಟಿಸಿದರು. ಬಳಿಕ ಚಿತ್ರರಂಗದಿಂದ ದೂರಾಗಿಬಿಟ್ಟರು. ಮತ್ತೆ 2012 ರಲ್ಲಿ ನಿರ್ಮಾಪಕಿಯಾಗಿ ಮರು ಪ್ರವೇಶ ಮಾಡಿದ ರಾಧಿಕಾ, ಯಶ್-ರಮ್ಯ ನಟನೆಯ 'ಲಕ್ಕಿ' ಸಿನಿಮಾ ನಿರ್ಮಾಣ ಮಾಡಿದರು. ಬಳಿಕ 'ಸ್ವೀಟಿ ನನ್ ಜೋಡಿ' ಹೆಸರಿನ ಸಿನಿಮಾ ನಿರ್ಮಾಣ ಮಾಡಿ ನಟನೆ ಸಹ ಮಾಡಿದರು. ಆ ಸಿನಿಮಾದಲ್ಲಿ ಆದಿತ್ಯ ನಾಯಕ ನಟನಾಗಿ ನಟಿಸಿದರು.

ಆಗಿನಿಂದ ವರ್ಷಕ್ಕೆ ಒಂದು ಅಥವಾ ಎರಡು ವರ್ಷಕ್ಕೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಲೇ ಬರುತ್ತಿದ್ದಾರೆ ರಾಧಿಕಾ. ಆದರೆ ಈ ವರ್ಷ ರಾಧಿಕಾ ನಟನೆಯ ಮೂರು ಸಿನಿಮಾಗಳು ಬಿಡುಗಡೆ ಆಗಲಿವೆ. ರಾಧಿಕಾ ನಟಿಸಿರುವ 'ಒಪ್ಪಂದ' ಸಿನಿಮಾ ಈಗಾಗಲೇ ಬಿಡುಗಡೆ ಆಗಿದೆ. ರವಿಚಂದ್ರನ್ ಜೊತೆಗೆ ನಟಿಸಿರುವ 'ರಾಜೇಂದ್ರ ಪೊನ್ನಪ್ಪ' ಹಾಗೂ 'ಭೈರಾ ದೇವಿ' ಸಿನಿಮಾಗಳು ಬಿಡುಗಡೆ ಆಗಲಿವೆ.

More from Filmibeat

English summary
Actress Radhika Kumaraswamy she will release her official Facebook page. Now there are too many Facebook pages in the name of Radhika Kumaraswamy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X