ದರ್ಶನ್ ಜೊತೆಗಿನ ಸಿನಿಮಾ ಬಗ್ಗೆ ಮಾತುಕತೆ ಆಗಿದೆ- ರಾಧಿಕಾ ಕುಮಾರಸ್ವಾಮಿ
Recommended Video
'ಅನಾಥರು', 'ಮಂಡ್ಯ' ಸಿನಿಮಾದಲ್ಲಿ ದರ್ಶನ್ ಜೊತೆಗೆ ನಟನೆ ಮಾಡಿದ್ದ ರಾಧಿಕಾ ಕುಮಾರಸ್ವಾಮಿ ಮತ್ತೆ ಅವರ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ವಿಷಯವನ್ನು ಸ್ವತಃ ರಾಧಿಕಾ ಹಂಚಿಕೊಂಡಿದ್ದಾರೆ.
ಈ ಹಿಂದೆ ದರ್ಶನ್ ರಿಗೆ ಒಂದು ಸಿನಿಮಾವನ್ನು ನಿರ್ಮಾಣ ಮಾಡಬೇಕಾಗಿತ್ತು. ಆದರೆ, ಅದು ಸಾಧ್ಯ ಆಗಲಿಲ್ಲ. ಆದರೆ, ಮುಂದೆ ಒಂದು ಸಿನಿಮಾವನ್ನು ನಿರ್ಮಾಣ ಮಾಡುವ ಬಗ್ಗೆ ಈಗಾಗಲೇ ಮಾತುಕತೆ ನಡೆಸಿದ್ದಾರಂತೆ.
ನಿರ್ಮಾಣದ ಸಿನಿಮಾದ ಜೊತೆಗೆ, ರಾಧಿಕಾ ಅವರ ಒಂದು ಸಿನಿಮಾದಲ್ಲಿ ದರ್ಶನ್ ನಟಿಸುತ್ತಾರೆ. ಈ ಸಿನಿಮಾಗಳ ಬಗ್ಗೆ ಈಗಾಗಲೆ ಮಾತುಕತೆ ಕೂಡ ನಡೆದಿದೆಯಂತೆ. ದರ್ಶನ್ ಓಕೆ ಹೇಳಿದರೆ, ಈ ಸಿನಿಮಾಗಳಿಗೆ ಚಾಲನೆ ಸಿಗಲಿದೆ. ವರ್ಷಗಳ ನಂತರ ಮತ್ತೆ ತೆರೆ ಮೇಲೆ ಈ ಜೋಡಿ ಕಾಣಿಸಲಿದೆ.

ನಿನ್ನೆ ರಾಧಿಕಾ ಕುಮಾರಸ್ವಾಮಿ ಅಭಿನಯದ 'ದಮಯಂತಿ' ಸಿನಿಮಾ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ನಟ ದರ್ಶನ್ ಆಗಮಿಸಿದ್ದರು. ಟ್ರೇಲರ್ ಬಿಡುಗಡೆ ಮಾಡಿದ ಸಿನಿಮಾಗೆ ಶುಭ ಹಾರೈಸಿದರು. ರಾಧಿಕಾ ಬಗ್ಗೆ ಮೆಚ್ಚುಗೆ ಸೂಚಿಸಿದರು.

ಇದೇ ಕಾರ್ಯಕ್ರಮದಲ್ಲಿ ರಾಧಿಕಾ ತಮ್ಮ ಮುಂದಿನದಲ್ಲಿ ದರ್ಶನ್ ನಟಸುವ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಅವರ ದಮಯಂತಿ ಸಿನಿಮಾ ಇದೇ ತಿಂಗಳು ಬಿಡುಗಡೆ ಆಗಲಿದೆ.


Click it and Unblock the Notifications











