For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಜೊತೆಗಿನ ಸಿನಿಮಾ ಬಗ್ಗೆ ಮಾತುಕತೆ ಆಗಿದೆ- ರಾಧಿಕಾ ಕುಮಾರಸ್ವಾಮಿ

  |
  Radhika Kumaraswamy shares her experience about her movie Damayanthi | Filmibeat Kannada

  'ಅನಾಥರು', 'ಮಂಡ್ಯ' ಸಿನಿಮಾದಲ್ಲಿ ದರ್ಶನ್ ಜೊತೆಗೆ ನಟನೆ ಮಾಡಿದ್ದ ರಾಧಿಕಾ ಕುಮಾರಸ್ವಾಮಿ ಮತ್ತೆ ಅವರ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ವಿಷಯವನ್ನು ಸ್ವತಃ ರಾಧಿಕಾ ಹಂಚಿಕೊಂಡಿದ್ದಾರೆ.

  ಈ ಹಿಂದೆ ದರ್ಶನ್ ರಿಗೆ ಒಂದು ಸಿನಿಮಾವನ್ನು ನಿರ್ಮಾಣ ಮಾಡಬೇಕಾಗಿತ್ತು. ಆದರೆ, ಅದು ಸಾಧ್ಯ ಆಗಲಿಲ್ಲ. ಆದರೆ, ಮುಂದೆ ಒಂದು ಸಿನಿಮಾವನ್ನು ನಿರ್ಮಾಣ ಮಾಡುವ ಬಗ್ಗೆ ಈಗಾಗಲೇ ಮಾತುಕತೆ ನಡೆಸಿದ್ದಾರಂತೆ.

  'ರಾಧಿಕಾ ಕುಮಾರಸ್ವಾಮಿ ನನಗಿಂತ ಸೀನಿಯರ್' - ದರ್ಶನ್'ರಾಧಿಕಾ ಕುಮಾರಸ್ವಾಮಿ ನನಗಿಂತ ಸೀನಿಯರ್' - ದರ್ಶನ್

  ನಿರ್ಮಾಣದ ಸಿನಿಮಾದ ಜೊತೆಗೆ, ರಾಧಿಕಾ ಅವರ ಒಂದು ಸಿನಿಮಾದಲ್ಲಿ ದರ್ಶನ್ ನಟಿಸುತ್ತಾರೆ. ಈ ಸಿನಿಮಾಗಳ ಬಗ್ಗೆ ಈಗಾಗಲೆ ಮಾತುಕತೆ ಕೂಡ ನಡೆದಿದೆಯಂತೆ. ದರ್ಶನ್ ಓಕೆ ಹೇಳಿದರೆ, ಈ ಸಿನಿಮಾಗಳಿಗೆ ಚಾಲನೆ ಸಿಗಲಿದೆ. ವರ್ಷಗಳ ನಂತರ ಮತ್ತೆ ತೆರೆ ಮೇಲೆ ಈ ಜೋಡಿ ಕಾಣಿಸಲಿದೆ.

  ನಿನ್ನೆ ರಾಧಿಕಾ ಕುಮಾರಸ್ವಾಮಿ ಅಭಿನಯದ 'ದಮಯಂತಿ' ಸಿನಿಮಾ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ನಟ ದರ್ಶನ್ ಆಗಮಿಸಿದ್ದರು. ಟ್ರೇಲರ್ ಬಿಡುಗಡೆ ಮಾಡಿದ ಸಿನಿಮಾಗೆ ಶುಭ ಹಾರೈಸಿದರು. ರಾಧಿಕಾ ಬಗ್ಗೆ ಮೆಚ್ಚುಗೆ ಸೂಚಿಸಿದರು.

  ನಟಿ ರಾಧಿಕಾ ಮಗಳು ಸ್ಯಾಂಡಲ್ ವುಡ್ ನ 'ಈ ಸ್ಟಾರ್' ನಟನ ದೊಡ್ಡ ಅಭಿಮಾನಿಯಂತೆನಟಿ ರಾಧಿಕಾ ಮಗಳು ಸ್ಯಾಂಡಲ್ ವುಡ್ ನ 'ಈ ಸ್ಟಾರ್' ನಟನ ದೊಡ್ಡ ಅಭಿಮಾನಿಯಂತೆ

  ಇದೇ ಕಾರ್ಯಕ್ರಮದಲ್ಲಿ ರಾಧಿಕಾ ತಮ್ಮ ಮುಂದಿನದಲ್ಲಿ ದರ್ಶನ್ ನಟಸುವ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಅವರ ದಮಯಂತಿ ಸಿನಿಮಾ ಇದೇ ತಿಂಗಳು ಬಿಡುಗಡೆ ಆಗಲಿದೆ.

  English summary
  Actress Radhika Kumaraswamy says she will do a movie with Darshan

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X