For Quick Alerts
  ALLOW NOTIFICATIONS  
  For Daily Alerts

  ದಸರಾ ಹಬ್ಬದ ಪ್ರಯುಕ್ತ ರಾಧಿಕಾ ಕುಮಾರಸ್ವಾಮಿ ಚಿತ್ರ ಮರುಬಿಡುಗಡೆ

  |

  ಸಿನಿಮಾ ಇಂಡಸ್ಟ್ರಿಯಲ್ಲಿ ಸಿನಿಮಾಗಳ ರಿ-ರಿಲೀಸ್ ಪರ್ವ ಆರಂಭವಾಗಿದೆ. ಕೊರೊನಾ ವೈರಸ್‌ನಿಂದ ಆರೇಳು ತಿಂಗಳು ಕಾಲ ಚಿತ್ರಮಂದಿರಗಳು ಮುಚ್ಚಿದ್ದವು. ಇದೀಗ, ಸಿನಿಮಾ ಥಿಯೇಟರ್ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಅಕ್ಟೋಬರ್ 15 ರಿಂದ ಸಿನಿಮಾ ಪ್ರದರ್ಶಿಸಬಹುದು.

  ಆದ್ರೆ, ಹೊಸ ಸಿನಿಮಾಗಳು ಯಾವುದು ಬಿಡುಗಡೆಯಾಗುತ್ತಿಲ್ಲ. ಈಗಾಗಲೇ ತೆರೆಕಂಡಿರುವ ಚಿತ್ರಗಳು ಇನ್ನೊಂದು ಅವಕಾಶ ಪಡೆದುಕೊಳ್ಳುತ್ತಿದೆ.

  'ದಮಯಂತಿ' ರಾಧಿಕಾ ಕುಮಾರಸ್ವಾಮಿ ಮತ್ತೆ ಸುದ್ದಿಯಲ್ಲಿರುವುದು ಇದೇ ಕಾರಣಕ್ಕೆ!

  ಇದೀಗ, ರಾಧಿಕಾ ಕುಮಾರಸ್ವಾಮಿ ನಟನೆಯ ದಮಯಂತಿ ಸಿನಿಮಾ ದಸರಾ ಹಬ್ಬದ ಪ್ರಯುಕ್ತ ಮತ್ತೆ ಚಿತ್ರಮಂದಿರಕ್ಕೆ ಬರ್ತಿದೆ. ಅಕ್ಟೋಬರ್ 23ರಂದು ದಮಯಂತಿ ಮರುಬಿಡುಗಡೆಯಾಗುತ್ತಿದೆ.

  ನವರಸನ್ ನಿರ್ದೇಶಿಸಿದ್ದ ಈ ಚಿತ್ರ 2019ರ ನವೆಂಬರ್ ತಿಂಗಳಲ್ಲಿ ತೆರೆಕಂಡಿತ್ತು. ರಾಧಿಕಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಈ ಚಿತ್ರದಲ್ಲಿ ಸೌರವ್ ಲೋಕೇಶ್, ಶರಣ್ ಉಲ್ಟಿ, ಸಾಧು ಕೋಕಿಲಾ, ತಬಲಾ ನಾಣಿ, ನವೀನ್ ಕೃಷ್ಣ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದರು.

  ಕನ್ನಡದ ಜೊತೆ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ದಮಯಂತಿ ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ರಾಧಿಕಾ ಕುಮಾರಸ್ವಾಮಿ ಅವರೇ ನಿರ್ಮಿಸಿದ್ದರು.

  English summary
  Kannada actress Radhika Kumaraswamy starrer Damayanthi Movie Re releasing on October 23.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X