'ಮನೆ ಮಾರಾಟಕ್ಕಿಟ್ಟ' ನಿರ್ದೇಶಕನ ಜೊತೆಗೆ ರಾಧಿಕಾ ಕುಮಾರಸ್ವಾಮಿ ಸಿನಿಮಾ.!
'ಅನಾಥರು', 'ನವಶಕ್ತಿ ವೈಭವ' ಸಿನಿಮಾ ಆದ್ಮೇಲೆ ಐದು ವರ್ಷಗಳ ಕಾಲ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡ ರಾಧಿಕಾ ಕುಮಾರಸ್ವಾಮಿ, 'ಸ್ವೀಟಿ ನನ್ ಜೋಡಿ' ಮೂಲಕ ಕಮ್ ಬ್ಯಾಕ್ ಮಾಡಿದರು. ಅಲ್ಲಿಂದ ಚ್ಯೂಸಿ ಆಗಿರುವ ರಾಧಿಕಾ ಕುಮಾರಸ್ವಾಮಿ, ತಮ್ಮ ಪಾತ್ರಗಳನ್ನು ಅಳೆದು ತೂಗಿ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
'ರುದ್ರತಾಂಡವ', 'ದಮಯಂತಿ', 'ಭೈರಾ ದೇವಿ', 'ರಾಜೇಂದ್ರ ಪೊನ್ನಪ್ಪ', 'ಕಾಂಟ್ರ್ಯಾಕ್ಟ್' ಚಿತ್ರಗಳಲ್ಲಿ ನಟಿಸಿರುವ ರಾಧಿಕಾ ಕುಮಾರಸ್ವಾಮಿ ಇದೀಗ ಹೊಸ ಪ್ರಾಜೆಕ್ಟ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಮಂಜು ಸ್ವರಾಜ್ ನಿರ್ದೇಶನದ ಹೊಸ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಳ್ಳಲಿದ್ದಾರೆ. 'ಶಿಶಿರ', 'ಶ್ರಾವಣಿ ಸುಬ್ರಮಣ್ಯ', 'ಶ್ರೀಕಂಠ', 'ಪಟಾಕಿ', 'ಮನೆ ಮಾರಟಕ್ಕಿದೆ' ಚಿತ್ರಗಳನ್ನು ನಿರ್ದೇಶನ ಮಾಡಿರುವ ಮಂಜು ಸ್ವರಾಜ್, ಈಗ ಹೊಸ ಸಿನಿಮಾಗೆ ಕೈಹಾಕಿದ್ದಾರೆ.

ಇನ್ನೂ ಹೆಸರಿಡದ ಈ ಚಿತ್ರ ಔಟ್ ಅಂಡ್ ಔಟ್ ಕಮರ್ಶಿಯಲ್ ಆಗಿದ್ದು, ಹೀರೋಯಿನ್ ಪಾತ್ರಕ್ಕೆ ರಾಧಿಕಾ ಕುಮಾರಸ್ವಾಮಿ ಪರ್ಫೆಕ್ಟ್ ಆಗಿ ಸೂಟ್ ಆಗ್ತಾರಂತೆ.
ಈಗಾಗಲೇ ಕಥೆ ಕೇಳಿರುವ ರಾಧಿಕಾ ಕುಮಾರಸ್ವಾಮಿ, ಈ ಚಿತ್ರವನ್ನ ನಿರ್ಮಾಣ ಮಾಡುವ ಯೋಜನೆಯನ್ನೂ ಹಾಕಿಕೊಂಡಿದ್ದಾರಂತೆ. ಮಂಜು ಸ್ವರಾಜ್-ರಾಧಿಕಾ ಕುಮಾರಸ್ವಾಮಿ ಕಾಂಬಿನೇಶನ್ ನಲ್ಲಿ ಮುಂದಿನ ವರ್ಷ ಈ ಸಿನಿಮಾ ಸೆಟ್ಟೇರಲಿದೆ.


Click it and Unblock the Notifications











