For Quick Alerts
  ALLOW NOTIFICATIONS  
  For Daily Alerts

  ಮಗಳ ಜೊತೆ ರಾಧಿಕಾ ಕುಮಾರಸ್ವಾಮಿ ಜಾಲಿ ರೈಡ್

  By Pavithra
  |
  ಜಾಲಿ ಮೂಡ್‌ನಲ್ಲಿ ರಾಧಿಕಾ ಕುಮಾರಸ್ವಾಮಿ..! | Filmibeat Kannada

  ರಾಧಿಕಾ ಕುಮಾರಸ್ವಾಮಿ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎನ್ನುವ ವಿಚಾರ ಯಾರಿಗೂ ಗೊತ್ತೆ ಇಲ್ಲ. 'ಸ್ವೀಟಿ', 'ರುದ್ರತಾಂಡವ' ಚಿತ್ರಗಳ ನಂತರ ಅದ್ಯಾಕೋ ರಾಧಿಕಾ ಚಿತ್ರರಂಗದಲ್ಲಿಯೂ ಸಕ್ರೀಯವಾಗಿ ಕಾಣಿಸಿಕೊಳ್ಳುತ್ತಿಲ್ಲ.

  ಇನ್ನು ಸಿನಿಮಾರಂಗದ ಸಮಾರಂಭಗಳಲ್ಲಿಯೂ ರಾಧಿಕಾ ಕುಮಾರಸ್ವಾಮಿ ಅವರನ್ನು ನೋಡಿದ್ದು ಕಡಿಮೆ. ಆದರೆ ಸದ್ದಿಲ್ಲದೆ 'ಭೈರಾದೇವಿ' ಎನ್ನುವ ಸಿನಿಮಾವನ್ನು ತಮ್ಮ ಹೋಂ ಬ್ಯಾನರ್ ಅಡಿಯಲ್ಲಿ ಆರಂಭ ಮಾಡಿದ್ರು. ಅದರ ನಂತರ ಈ ಹಿಂದೆ ಒಪ್ಪಿಗೆ ಕೊಟ್ಟಿದ್ದ ಸಿನಿಮಾಗಳಲ್ಲಿ ಅಭಿನಯ ಮಾಡಲು ಗ್ರೀನ್ ಸಿಗ್ನಲ್ ಕೊಟ್ರು.

  'ದಮಯಂತಿ'ಯಾಗಿ ಬದಲಾದ ರಾಧಿಕಾ ಕುಮಾರಸ್ವಾಮಿ !'ದಮಯಂತಿ'ಯಾಗಿ ಬದಲಾದ ರಾಧಿಕಾ ಕುಮಾರಸ್ವಾಮಿ !

  ರವಿಚಂದ್ರನ್ ಜೊತೆ ಸಿನಿಮಾ ಮಾಡ್ತಿದ್ದಾರೆ. ಹೊಸ ಸಿನಿಮಾ ಕಥೆ ಕೇಳುತ್ತಿದ್ದಾರೆ ಎನ್ನುವುದನ್ನು ಬಿಟ್ಟರೆ, ಸ್ವೀಟಿ ಅಭಿಮಾನಿಗಳ ಜೊತೆಯೂ ಕಾಣಿಸಿಕೊಂಡಿಲ್ಲ. ಸದ್ಯ ರಾಧಿಕಾ ತಮ್ಮ ಮಗಳಿಗಾಗಿ ಸಮಯ ಕೊಡುತ್ತಿದ್ದಾರೆ. ಈ ವಿಚಾರ ಅವರ ಇನ್‌ಸ್ಟಾಗ್ರಾಂ ಹೇಳುತ್ತಿದೆ. ಹೌದು ರಾಧಿಕಾ ತಮ್ಮ ಮಗಳ ಜೊತೆಯಲ್ಲಿ ಮೆಟ್ರೋ ಟ್ರೈನ್ ನಲ್ಲಿ ಜಾಲಿ ರೈಡ್ ಹೋಗಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.

  Radhika Kumaraswamy uploaded a photo with her daughter Shamika

  ಹುಟ್ಟುಹಬ್ಬದ ಸಂದರ್ಭದಲ್ಲಿ ಶಮಿಕಾ ಫೋಟೋಗಳನ್ನು ಫೇಸ್ ಬುಕ್ ನಲ್ಲಿ ವೈರಲ್ ಆಗಿತ್ತು. ನಂತರ ಎಲ್ಲಿಯೂ ಶಮಿಕಾ ಫೋಟೋಗಳನ್ನು ಹಾಕದ ರಾಧಿಕಾ ಇತ್ತೀಚಿಗಷ್ಟೆ ಮೆಟ್ರೋನಲ್ಲಿ ಪ್ರಯಾಣ ಮಾಡಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

  English summary
  Kannada actress Radhika Kumaraswamy uploaded a photo with her daughter Shamika in Instagram. A photo taken on Metro Train is currently viral on the social network.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X