ಮಿನಿ ಡ್ರೆಸ್‌ನಲ್ಲಿ ಕೇಕ್ ಕತ್ತರಿಸಿ ಕ್ರಿಸ್‌ಮಸ್ ಆಚರಿಸಿದ ಸ್ವೀಟಿ ರಾಧಿಕಾ: ಜೀವಂತ ಉಡುಗೊರೆ ಕಂಡು ಪುಳಕ

ನಟಿ ರಾಧಿಕಾ ಕುಮಾರಸ್ವಾಮಿ ಸ್ಯಾಂಡಲ್‌ವುಡ್‌ನಲ್ಲಿ ಪದೇ ಪದೆ ಮಿಂಚಿ ಮರೆಯಾಗಿ ಬಿಡುತ್ತಾರೆ. ತಮ್ಮ ಸಿನಿಮಾ ಮುಹೂರ್ತ, ರಿಲೀಸ್, ಪ್ರಮೋಷನ್ ವೇಳೆ ಮಾತ್ರ ಕಾಣಿಸಿಕೊಳ್ಳುತ್ತಾರೆ. ಇನ್ನುಳಿದಂತೆ ಸೈಲೆಂಟ್ ಆಗಿಬಿಡುತ್ತಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಆಗಾಗ್ಗೆ ದರ್ಶನ ಕೊಡುತ್ತಿರುತ್ತಾರೆ. ಸದ್ಯ ಸ್ವೀಟಿ ಕ್ರಿಸ್‌ಮಸ್ ಆಚರಣೆ ವಿಡಿಯೋ ವೈರಲ್ ಆಗ್ತಿದೆ.

ಕನ್ನಡ ಹಿರಿತೆರೆ ಹಾಗೂ ಕಿರುತೆರೆ ನಟಿಯರ ಕ್ರಿಸ್‌ಮಸ್‌ ಆಚರಣೆಯ ಫೋಟೊಗಳು ಸಖತ್ ವೈರಲ್ ಆಗಿತ್ತು. ಅಮೃತಾ ಅಯ್ಯಂಗಾರ್, ರುಕ್ಮಿಣಿ ವಸಂತ್, ಮೇಘನಾ ರಾಜ್, ಮೇಘಾ ಶೆಟ್ಟಿ, ಶ್ರೀಮುರಳಿ, ರಾಧಿಕಾ ಪಂಡಿತ್ ಕ್ರಿಸ್‌ಮಸ್ ಸೆಲೆಬ್ರೇಷನ್‌ಗೆ ಸಂಬಂಧಿಸಿದ ಫೋಟೊಗಳನ್ನು ಹಂಚಿಕೊಂಡಿದ್ದರು. ಇದೀಗ ರಾಧಿಕಾ ಕುಮಾರಸ್ವಾಮಿ ಮನೆಯ ಕ್ರಿಸ್‌ಮಸ್ ಆಚರಣೆ ಝಲಕ್ ಸಖತ್ ಸದ್ದು ಮಾಡ್ತಿದೆ.

Radhika Kumaraswamys christmas celebration video goes viral

ಮನೆಯಲ್ಲಿ ಕ್ರಿಸ್‌ಮಸ್ ಟ್ರೀ, ಗೋದಲಿ ಎಲ್ಲವನ್ನು ರಾಧಿಕಾ ತಾವೇ ಸಿದ್ಧಪಡಿಸಿದ್ದಾರೆ. ಇನ್ನು ಕೆಂಪು ಬಣ್ಣದ ಮಿನಿ ಡ್ರೆಸ್‌ನಲ್ಲಿ ಕಂಗೊಳಿಸಿರುವ ಸ್ವೀಟಿ ಕೇಕ್ ಕಟ್ ಮಾಡಿ ಖುಷಿಪಟ್ಟಿದ್ದಾರೆ. ಪುಟಾಣಿ ಸಾಂತಕ್ಲಾಸ್ ವಿಶೇಷ ಗಿಫ್ಟ್ ಹೊತ್ತು ತಂದು ಕೊಟ್ಟಿದ್ದಾನೆ. ಬಹಳ ಕುತೂಹಲದಿಂದ ಗಿಫ್ಟ್‌ ಬಾಕ್ಸ್ ತೆಗೆದು ನೋಡಿದ ರಾಧಿಕಾಗೆ ಸರ್‌ಪ್ರೈಸ್ ಕಾದಿತ್ತು. ಬಿಳಿ ಬಣ್ಣದ ಬೆಕ್ಕನ್ನು ಉಡುಗೊರೆಯಾಗಿ ನೀಡಲಾಗಿತ್ತು. ಅದನ್ನು ನೋಡಿ ಪುಳಕಗೊಂಡ ಸ್ವೀಟಿ ಹಿರಿ ಹಿರಿ ಹಿಗ್ಗಿದ್ದಾರೆ.

ಬಳಿಕ ಆ ಪುಟಾಣಿ ಸಾಂತಕ್ಲಾಸ್ ಜೊತೆ ರಾಧಿಕಾ ಕುಮಾರಸ್ವಾಮಿ ಡ್ಯಾನ್ಸ್ ಮಾಡಿ ಖುಷಿಪಟ್ಟಿದ್ದಾರೆ. ನಂತರ ಕೇಕ್ ಕತ್ತರಿಸಿದ್ದಾರೆ. ಈ ವಿಡಿಯೋ ಶೇರ್ ಮಾಡಿ ಕ್ರಿಸ್‌ಮಸ್ ಶುಭಾಶಯ ಕೋರಿದ್ದರು. ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಸಾವಿರಾರು ಲೈಕ್ಸ್, ಕಾಮೆಂಟ್ಸ್ ಪಡೆದುಕೊಂಡಿದೆ.

ಕೊನೆಯದಾಗಿ ರಾಧಿಕಾ ಕುಮಾರಸ್ವಾಮಿ ನಟನೆಯ 'ದಮಯಂತಿ', 'ಕಾಂಟ್ರಾಕ್ಟ್' ಹಾಗೂ 'ರವಿ ಬೋಪಣ್ಣ' ಸಿನಿಮಾಗಳು ಬಿಡುಗಡೆಯಾಗಿದ್ದವು. 'ದಮಯಂತಿ' ಸಿನಿಮಾ ಪ್ರಚಾರದ ವೇಳೆ ರಾಧಿಕಾ ಕಾಣಿಸಿಕೊಂಡಿದ್ದರು. ಇನ್ನು ಬಹಳ ದಿನಗಳಿಂದ ಸ್ವೀಟಿ ನಟನೆಯ 'ಭೈರಾದೇವಿ' ಸಿನಿಮಾ ನಿರ್ಮಾಣವಾಗುತ್ತಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. ಇನ್ನುಳಿದಂತೆ 'ಅಜಾಗ್ರತ' ಎನ್ನುವ ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ರಾಧಿಕಾ ಬಣ್ಣ ಹಚ್ಚಿದ್ದಾರೆ.

More from Filmibeat

English summary
Radhika Kumaraswamy shares her christmas celebration video;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X