'ಶೇಕ್ ಇಟ್ ಪುಷ್ಪವತಿ' ಎಂದು ಸಹನಟನಿಗೆ ಒದ್ದ ರಾಧಿಕಾ ಕುಮಾರಸ್ವಾಮಿ: ನಿಜಾನಾ? ತಮಾಷೆನಾ?

ಒಂದು ಮಗುವಿನ ತಾಯಿಯಾದರೂ ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಕಾಣುವ ಚೆಲುವೆ ರಾಧಿಕಾ ಕುಮಾರಸ್ವಾಮಿ. ಅದ್ಯಾಕೋ ಸ್ಯಾಂಡಲ್‌ವುಡ್ ಸ್ವೀಟಿ ನಟನೆಯ ಸಿನಿಮಾಗಳು ಇತ್ತೀಚೆಗೆ ಅಷ್ಟಾಗಿ ಸದ್ದು ಮಾಡ್ತಿಲ್ಲ. ಸದ್ಯ 'ಅಜಾಗ್ರತ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಶೂಟಿಂಗ್ ವೇಳೆ ಬಿಡುವಿನ ಸಮಯದಲ್ಲಿ ಸಹ ಕಲಾವಿದರು, ತಂತ್ರಜ್ಞರ ಜೊತೆ ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಕೊನೆಯದಾಗಿ ರವಿಚಂದ್ರನ್ ನಿರ್ದೇಶಿಸಿ, ನಟಿಸಿದ 'ರವಿಬೋಪಣ್ಣ' ಚಿತ್ರದಲ್ಲಿ ನಟಿಸಿದ್ದರು. ಆದರೆ ಸಿನಿಮಾ ಪ್ರಮೋಷನ್‌ನಲ್ಲಿ ಭಾಗಿ ಆಗಲಿಲ್ಲ. ಸದ್ಯ ಎಂ. ಶಶಿಧರ್ ನಿರ್ದೇಶನದ ಸೈಕಲಾಜಿಕಲ್ ಥ್ರಿಲ್ಲರ್ 'ಅಜಾಗ್ರತ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಬರೋಬ್ಬರಿ 7 ಭಾಷೆಗಳಲ್ಲಿ ತೆರೆಗೆ ಬರಲು ಸಿದ್ಧವಾಗುತ್ತಿದೆ. ಸಮುದ್ರ ಖನಿ, ಜಯಪ್ರಕಾಶ್, ಸ್ಪರ್ಶ ರೇಖಾ, ದೇವರಾಜ್, ಸುಚೇಂದ್ರ ಪ್ರಸಾದ್, ಮತ್ತು ವಿನಯ್ ಪ್ರಸಾದ್ ನಟಿಸಿದ್ದಾರೆ. ಹೈದರಾಬಾದ್, ಬೆಂಗಳೂರು ಮತ್ತು ಮುಂಬೈನಲ್ಲಿ ಚಿತ್ರೀಕರಣ ನಡೀತಿದೆ. ಕಳೆದ ತಿಂಗಳು ಹೈದರಾಬಾದ್‌ನಲ್ಲಿ ಸಿನಿಮಾ ಮುಹೂರ್ತ ಸಮಾರಂಭ ನೆರವೇರಿತ್ತು.

Radhika Kumaraswamys shake it pushpavathi reel goes viral with shreyas talpade

ಬಾಲಿವುಡ್‌ ನಟ ಶ್ರೇಯಸ್ ತಲ್ಪಾಡೆ 'ಅಜಾಗ್ರತ' ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ನಾಯಕಿಯಾಗಿ ರಾಧಿಕಾ ಕುಮಾರಸ್ವಾಮಿ ಮಿಂಚಿದ್ದಾರೆ. ಸ್ವತಃ ರಾಧಿಕಾ ಸಹೋದರ ರವಿರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಂದೀಪ್ ವಲ್ಲೂರಿ ಛಾಯಾಗ್ರಹಣ, ಶ್ರೀಹರಿ ಸಂಗೀತ ನಿರ್ದೇಶನ ಹಾಗೂ ರವಿವರ್ಮ ಸ್ಟಂಟ್ಸ್ ಚಿತ್ರಕ್ಕಿದೆ. ಸದ್ಯ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದೆಲ್ಲದರ ನಡುವೆ 'ಕ್ರಾಂತಿ' ಚಿತ್ರದ ಹಾಡಿಗೆ ರಾಧಿಕಾ ಹೆಜ್ಜೆ ಹಾಕಿದ್ದಾರೆ.

'ಶೇಕ್ ಇಟ್ ಪುಷ್ಪವತಿ' ಎಂದ ರಾಧಿಕಾ

ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಆಲ್ಬಮ್ ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಅದರಲ್ಲೂ ಚಿತ್ರದ ಸ್ಪೆಷಲ್ ಸಾಂಗ್ 'ಶೇಕ್ ಇಟ್ ಪುಷ್ಪವತಿ' ಕೊಂಚ ಹೆಚ್ಚೇ ಸದ್ದು ಮಾಡಿತು. ಈ ಸಾಂಗ್‌ನ ಹುಕ್ ಸ್ಟೆಪ್ ರೀಲ್ಸ್ ಅಂತೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಗಣೇಶ್ ಮಾಸ್ಟರ್ ಹೇಳಿಕೊಟ್ಟ ಸ್ಪೆಪ್ಸ್‌ನ ದರ್ಶನ್ ಹಾಗೂ ನಿಮಿಕಾ ರತ್ನಕರ್ ಸೊಗಸಾಗಿ ಹಾಕಿ ರಂಗೇರಿಸಿದ್ದರು. ಇದೇ ಬೀಟ್‌ಗೆ ಇದೀಗ ರಾಧಿಕಾ ಕುಮಾರಸ್ವಾಮಿ ಕುಣಿದಿದ್ದಾರೆ.

ಶ್ರೇಯಸ್ ತಲ್ಪಾಡೆ ಜೊತೆ ಸ್ಟೆಪ್ಸ್

ಸಹ ನಟ ಶ್ರೇಯಸ್ ತಲ್ಪಾಡೆ ಜೊತೆ ರಾಧಿಕಾ ಕುಮಾರಸ್ವಾಮಿ 'ಶೇಕ್ ಇಟ್ ಪುಷ್ಪವತಿ' ಎಂದು ಕುಣಿದಿದ್ದಾರೆ. ಸ್ವೀಟಿಗೆ ಡ್ಯಾನ್ಸ್ ಕ್ರೇಜ್ ಜಾಸ್ತಿ. ತಮ್ಮ ಸಿನಿಮಾಗಳಲ್ಲಿ ಬಿಂದಾಸ್ ಡ್ಯಾನ್ಸ್ ಮಾಡಿ ಪ್ರೇಕ್ಷಕರನ್ನು ರಂಜಿಸುತ್ತಾ ಬರ್ತಿದ್ದಾರೆ. ಇದೀಗ 'ಕ್ರಾಂತಿ' ಚಿತ್ರದ ಹಾಡಿಗೆ ಸಖತ್ ಹೆಜ್ಜೆ ಹಾಕಿ ಖುಷಿಪಟ್ಟಿದ್ದಾರೆ. ದರ್ಶನ್ ಹಾಗೂ ನಿಮಿಕಾ ರೀತಿ ಇವರಿಬ್ಬರು ಹುಕ್ ಸ್ಟೆಪ್ ಮಾಡಿ ಮಿಂಚಿದ್ದಾರೆ. ಕೊನೆಗೆ ತಮಾಷೆಗಾಗಿ ಶ್ರೇಯಸ್‌ಗೆ ಒದ್ದಂತೆ ವಿಡಿಯೋ ಮಾಡಿದ್ದಾರೆ. ಸದ್ಯ ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿದ್ದು ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

Radhika Kumaraswamys shake it pushpavathi reel goes viral with shreyas talpade

ಸಾಂಗ್ ಸೂಪರ್ ಹಿಟ್

ಕಳೆದ ವರ್ಷ ರಿಲೀಸ್ ಆಗಿದ್ದ 'ಶೇಕ್ ಇಟ್ ಪುಷ್ಪವತಿ' ಸೂಪರ್ ಹಿಟ್ ಆಗಿತ್ತು. ವಿ. ಹರಿಕೃಷ್ಣ ಸಂಗೀತ ಹಾಗೂ ಯೋಗರಾಜ್‌ ಭಟ್ ಸಾಹಿತ್ಯ ಪ್ಲಸ್ ಆಗಿತ್ತು. ಐಶ್ವರ್ಯ ರಂಗರಾಜನ್ ಹಾಗೂ ಹರಿಕೃಷ್ಣ ವಾಯ್ಸ್‌ನಲ್ಲಿ ಸಾಂಗ್ ಮತ್ತಷ್ಟು ಕಿಕ್ ಕೊಟ್ಟಿತ್ತು. ಭಟ್ರು ಉತ್ತರಕನ್ನಡ ಶೈಲಿಯ ಸಾಹಿತ್ಯ ಬರೆದು ಗಮನ ಸೆಳೆದಿದ್ದರು. ಶೈಲಜಾ ನಾಗ್, ಬಿ. ಸುರೇಶ ದಂಪತಿ ನಿರ್ಮಾಣದ 'ಕ್ರಾಂತಿ' ಸಿನಿಮಾ ಜನವರಿ 26ಕ್ಕೆ ರಿಲೀಸ್ ಆಗಿತ್ತು. ಆದರೆ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು.

'ಬಹರ್ಲಾ ಹಾ ಮಧುಮಾಸ' ರೀಲ್ಸ್

ಸೋಶಿಯಲ್ ಮೀಡಿಯಾದಲ್ಲಿ ಇನ್‌ಸ್ಟಾ ರೀಲ್ಸ್ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಯುವತಿಯರಂತೂ ಸಿಕ್ಕಾಪಟ್ಟೆ ವಿಡಿಯೋ ಮಾಡಿ ಶೇರ್ ಮಾಡುತ್ತಿರುತ್ತಾರೆ. ಮರಾಠಿಯ 'ಬಹರ್ಲಾ ಹಾ ಮಧುಮಾಸ' ಸಾಂಗ್ ಬಿಟ್ ಕೂಡ ರೀಲ್ಸ್ ಮಾಡುವವರ ಹಾಟ್ ಫೇವರಿಟ್ ಎನಿಸಿಕೊಂಡಿದೆ. ಶ್ರೇಯಸ್ ಹಾಗೂ ರಾಧಿಕಾ ಕುಮಾರಸ್ವಾಮಿ ಈ ಹಾಡಿಗೂ ಬಿಂದಾಸ್ ಆಗಿ ಕುಣಿದಿದ್ದಾರೆ. ಆ ವಿಡಿಯೋ ಕೂಡ ಇತ್ತೀಚೆಗೆ ಸದ್ದು ಮಾಡಿತ್ತು.

More from Filmibeat

English summary
Radhika Kumaraswamy's shake it pushpavathi reel goes viral with shreyas talpade. They Both Working in pan-Indian film Ajagrata. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X