For Quick Alerts
  ALLOW NOTIFICATIONS  
  For Daily Alerts

  ಕ್ರಿಕೆಟಿಗ ಶ್ರೇಯಸ್ ಗೋಪಾಲ್‌ಗೆ ಈ ನಟಿ ಮೇಲೆ ಕ್ರಶ್ ಅಂತೆ

  |

  ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಪರವಾಗಿ ಆಡುತ್ತಿರುವ ಕನ್ನಡಿಗ ಶ್ರೇಯಸ್ ಗೋಪಾಲ್ ತಮ್ಮ ನೆಚ್ಚಿನ ನಟಿ ಯಾರೆಂದು ಹೇಳಿಕೊಂಡಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ವಾಹಿನಿ ನಡೆಸಿರುವ ಚುಟುಕು ಸಂದರ್ಶನದಲ್ಲಿ ನೆಚ್ಚಿನ ನಟಿಯ ಹೆಸರು ತಿಳಿಸಿದ್ದಾರೆ.

  ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನನ್ನ ಬಾಲ್ಯದ ಕ್ರಶ್ ಅಂತಾ ಹೇಳಿಕೊಂಡಿದ್ದಾರೆ. ಕತ್ರಿಕಾ ಕೈಫ್ ಮತ್ತು ದೀಪಿಕಾ ಇಬ್ಬರಲ್ಲಿ ಯಾರು ಇಷ್ಟ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೇಯಸ್ ಗೋಪಾಲ್ ''ನನಗೆ ದೀಪಿಕಾ ಅಂದ್ರೆ ತುಂಬಾ ಇಷ್ಟ. ಚಿಕ್ಕ ವಯಸ್ಸಿನ ಕ್ರಶ್'' ಎಂದಿದ್ದಾರೆ.

  ಐಪಿಎಲ್ ಬಗ್ಗೆ ಬೇಸರ ವ್ಯಕ್ತಪಡಿಸಿದ ನಿರ್ದೇಶಕ ಸಿಂಪಲ್ ಸುನಿ

  ಇನ್ನು ಕನ್ನಡದಲ್ಲಿ ಯಾರು ಇಷ್ಟ, ರಾಧಿಕಾ ಪಂಡಿತ್ ಅಥವಾ ರಶ್ಮಿಕಾ ಮಂದಣ್ಣನಾ ಎಂದು ಕೇಳಿದ್ದಕ್ಕೆ ರಾಧಿಕಾ ಪಂದಿತ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

  ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ಯಾವುದು ಇಷ್ಟ ಎಂದು ಕೇಳಿದ ಪ್ರಶ್ನೆಗೆ, ನಾನು ಸ್ಯಾಂಡಲ್ ವುಡ್ ಹೆಚ್ಚು ಫಾಲೋ ಮಾಡಲ್ಲ, ನನಗೆ ಸ್ಯಾಂಡಲ್ ವುಡ್ ಇಷ್ಟ'' ಎಂದಿದ್ದಾರೆ.

  ಶ್ರೇಯಸ್ ಗೋಪಾಲ್ ಅವರ ಸಂದರ್ಶನವನ್ನು ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿ ಹಂಚಿಕೊಂಡಿದ್ದು, ನೆಟ್ಟಿಗರಿಂದ ವಿರೋಧ ಸಹ ಎದುರಾಗಿದೆ. ಕನ್ನಡಿಗನಾಗಿ ಉತ್ತರ ಭಾರದ ಊಟ ಇಷ್ಟ, ಬಾಲಿವುಡ್ ಇಷ್ಟ ಎಂದು ಇಂಗ್ಲೀಷ್‌ನಲ್ಲಿ ಮಾತನಾಡಿರುವುದಕ್ಕೆ ಟೀಕೆ ಸಹ ವ್ಯಕ್ತಪಡಿಸಿದ್ದಾರೆ.

  English summary
  Radhika Pandit and Deepika Padukone are my favourite heroines says Cricketer Shreyas Gopal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X