For Quick Alerts
  ALLOW NOTIFICATIONS  
  For Daily Alerts

  ಗಣೇಶ ಹಬ್ಬಕ್ಕೆ ಯಶ್-ರಾಧಿಕಾ ಕಡೆಯಿಂದ ಅಭಿಮಾನಿಗಳಿಗೆ ವಿಶ್

  By Suneetha
  |

  ಕನ್ನಡ ಚಿತ್ರರಂಗದ ಸುಂದರ ಹಾಗೂ ಎಲ್ಲರಿಗೂ ಇಷ್ಟವಾಗುವ ತಾರಾ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್, ನಿಶ್ಚಿತಾರ್ಥ ನೆರವೇರಿಸಿಕೊಂಡ ನಂತರ ಇದೀಗ ತಮ್ಮ ಮುಂಬರುವ ಸಿನಿಮಾ 'ಸಂತು Straight Forward' ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.

  ಬಹುತೇಕ ಚಿತ್ರೀಕರಣ ಮುಗಿಸಿರುವ 'ಸಂತು Straight Forward' ಇದೀಗ ಕೊನೆಯ ಭಾಗದ ಚಿತ್ರೀಕರಣವನ್ನು ಮುಗಿಸುವ ತರಾ-ತುರಿಯಲ್ಲಿದೆ. ಕೊನೆಯದಾಗಿ ಒಂದು ಹಾಡು ಮತ್ತು ಕ್ಲೈಮ್ಯಾಕ್ಸ್ ನಲ್ಲಿ ಮದುವೆ ದೃಶ್ಯದ ಚಿತ್ರೀಕರಣ ನಡೆಸಲು ಚಿತ್ರತಂಡ ತಯಾರಿ ನಡೆಸಿದೆ.['ದೊಡ್ಮನೆ ಹುಡ್ಗಿ' ರಾಧಿಕಾ ಪಂಡಿತ್ ಜೊತೆ ಎಕ್ಸ್ ಕ್ಲೂಸಿವ್ ಚಿಟ್ ಚಾಟ್]

  ಅಂದಹಾಗೆ ಅದ್ದೂರಿ ಸೆಟ್ ನಲ್ಲಿ ವಿಶೇಷ ಹಾಡಿನ ಶೂಟಿಂಗ್ ನಡೆಯಲಿದ್ದು, ಯಶ್ ಮತ್ತು ರಾಧಿಕಾ ಪಂಡಿತ್ ಅವರು ಕೂಡ ಕಲರ್ ಫುಲ್ ಆಗಿ ತಯಾರಾಗಿದ್ದಾರೆ. ಇದೀಗ ಶೂಟಿಂಗ್ ಗ್ಯಾಪ್ ನಲ್ಲಿ ಯಶ್ ಮತ್ತು ರಾಧಿಕಾ ಜೊತೆಯಾಗಿ ನಿಂತ ಸುಂದರ ಫೋಟೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.[ಫೋಟೋ ಆಲ್ಬಂ: ರಾಜ-ರಾಣಿಯ ನಿಶ್ಚಿತಾರ್ಥದ ಅದ್ಭುತ ಕ್ಷಣಗಳು]

  Radhika Pandit and Yash wishes fans on 'Ganesh Chaturthi'

  ಈ ಫೋಟೋ ಜೊತೆಗೆ ತಮ್ಮೆಲ್ಲಾ ಅಭಿಮಾನಿ ಬಳಗದವರಿಗೂ ಗಣೇಶ ಚತುರ್ಥಿ ಶುಭಾಶಯ ಕೋರಿದ್ದಾರೆ. ಇನ್ನು ನಿಶ್ಚಿತಾರ್ಥದ ನಂತರ ಪತ್ರಿಕಾಗೋಷ್ಠಿ ಒಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದು ಬಿಟ್ಟರೆ, ಈ ತಾರಾ ಜೋಡಿ ಈಗಲೇ ಈ ತರ ಫೋಸ್ ಕೊಟ್ಟಿರೋದು.

  ಮಾತ್ರವಲ್ಲದೇ ಅಟ್ಲಾಂಟದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲೂ ಯಶ್ ಮತ್ತು ರಾಧಿಕಾ ಭಾಗವಹಿಸಿದ್ದರು. ಅಲ್ಲಿ ಕೂಡ ಈ ತಾರಾ ಜೋಡಿ ಎಲ್ಲರ ಕೇಂದ್ರ ಬಿಂದುವಾಗಿದ್ದರು.

  ಇನ್ನು ತಮ್ಮ ನೆಚ್ಚಿನ ನಟ-ನಟಿ ಆಗಾಗ ಹೀಗೆ ಒಂದೊಂದು ಫೋಟೋ ಶೇರ್ ಮಾಡುತ್ತಿದ್ದರೆ, ಅಭಿಮಾನಿಗಳು ಕೂಡ ಲೈಕ್-ಶೇರ್ ಮಾಡುತ್ತಾ ಫುಲ್ ಖುಷ್ ಆಗಿ ಇರುತ್ತಾರೆ. ಅಂತೂ ಗೌರಿ-ಗಣೇಶ ಹಬ್ಬಕ್ಕೆ ಅಭಿಮಾನಿಗಳಿಗೆ ಯಶ್-ರಾಧಿಕಾ ಕಡೆಯಿಂದ ಕಲರ್ ಫುಲ್ ಫೋಟೋ ಒಂದು ಗಿಫ್ಟ್ ಸಿಕ್ಕಂತಾಗಿದೆ.

  English summary
  Kannada Actress Radhika Pandit and Kannada Actor Yash celebrated the festival of Ganesh Chaturthi on Monday. The Actress wished his fans on the occasion through a tweet on the micro-blogging website Twitter. Currently Actor Yash and Actress Radhika Pandit is busy shooting for 'Santhu Straight Forward'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X