»   » ಅಪ್ಪಟ್ಟ ಕನ್ನಡತಿ ರಾಧಿಕಾ ಪಂಡಿತ್ ಕನ್ನಡ ಪ್ರೇಮ ನಿಜಕ್ಕೂ ಮೆಚ್ಚುವಂಥದ್ದು!

ಅಪ್ಪಟ್ಟ ಕನ್ನಡತಿ ರಾಧಿಕಾ ಪಂಡಿತ್ ಕನ್ನಡ ಪ್ರೇಮ ನಿಜಕ್ಕೂ ಮೆಚ್ಚುವಂಥದ್ದು!

Posted By:
Subscribe to Filmibeat Kannada

ಸಿನಿಮಾ ನಟಿಯರಿಗೆ ಇಂಗ್ಲೀಷ್ ಅಂಟಿಕೊಂಡೇ ಇರುತ್ತದೆ. ಕನ್ನಡದ ನಟಿಯರೇ ಆದರೂ ಮಾತನಾಡುವಾಗ ಅವಶ್ಯಕ ಇಲ್ಲದಿದ್ದರೂ ಇಂಗ್ಲೀಷ್ ಬಳಸಿ ಸ್ಕೋಪ್ ತೆಗೆದುಕೊಳ್ಳುವ ನಟಿಯರು ಈಗ ಹೆಚ್ಚಿದ್ದಾರೆ. ಇಂತಹ ನಟಿಯರ ನಡುವೆಯೂ ನಟಿ ರಾಧಿಕಾ ಪಂಡಿತ್ ತಾನು ಅಪ್ಪಟ್ಟ ಕನ್ನಡತಿ ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ.

ಮದುವೆ ಬಳಿಕ ರಾಧಿಕಾ ಪಂಡಿತ್ ಬರೋಬ್ಬರಿ 20 ಕಥೆಗಳನ್ನ ಕೇಳಿದ್ದರಂತೆ.!

ರಾಧಿಕಾ ಪಂಡಿತ್ ಕನ್ನಡ ಪ್ರೇಮಕ್ಕೆ ಸಾಕ್ಷಿ ಬೇಕು ಅಂದ್ರೆ ಅವರ 'ಸಹಿ' ಕಡೆ ಸ್ವಲ್ಪ ಗಮನ ಕೊಡಿ.

Radhika Pandit autograph in kannada.

ಒಂದ್ವೇಳೆ, ನೀವು ರಾಧಿಕಾ ಪಂಡಿತ್ ಅವರ ಬಳಿ ಈಗಾಗಲೇ 'ಆಟೋಗ್ರಾಫ್' ತೆಗೆದುಕೊಂಡಿದ್ದರೆ ಅದನ್ನ ಇನ್ನೊಮ್ಮೆ ಗಮನಿಸಿ. ಯಾಕಂದ್ರೆ ಅದು ಖಂಡಿತ ಕನ್ನಡದಲ್ಲಿಯೇ ಇರುತ್ತದೆ.

ಹೊಸ ಮನೆ ಖರೀದಿಸಿದ ಯಶ್ - ರಾಧಿಕಾ ಪಂಡಿತ್ ಜೋಡಿ

ಹೌದು.. ರಾಧಿಕಾ ಪಂಡಿತ್ ಯಾರಿಗೇ ಆಟೋಗ್ರಾಫ್ ನೀಡಿದರೂ, ತಮ್ಮ ಹೆಸರನ್ನು ಕನ್ನಡದಲ್ಲಿಯೇ ಬರೆಯುತ್ತಾರಂತೆ. ರಾಧಿಕಾ ಶುರುವಿನಿಂದಲೇ ಈ ರೀತಿಯ ಅಭ್ಯಾಸವನ್ನು ಮಾಡಿಕೊಂಡು ಬಂದಿದ್ದಾರೆ.

Radhika Pandit autograph in kannada.
Radhika Pandit come back to kannada cinema after a long break | Filmibeat kannada

ಪ್ರತಿಭಾವಂತ ನಟಿಯಾಗಿ ಹೆಸರು ಮಾಡಿರುವ ಮಿಸಸ್ ರಾಮಾಚಾರಿ ರಾಧಿಕಾ ಪಂಡಿತ್ ಈ ರೀತಿ ತಮ್ಮ ಕನ್ನಡ ಅಭಿಮಾನವನ್ನು ತೋರಿಸುತ್ತಿದ್ದಾರೆ.

English summary
Kannada Actress Radhika Pandit's love towards Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada