For Quick Alerts
  ALLOW NOTIFICATIONS  
  For Daily Alerts

  ರಾಧಿಕಾ-ಯಶ್ ರ ಮುದ್ದು ಮಕ್ಕಳಿಗೆ ಇಂದು ಮಹತ್ವದ ದಿನ

  |

  ರಾಧಿಕಾ ಪಂಡಿತ್-ನಟ ಯಶ್ ಅವರ ಮುದ್ದು ಮಕ್ಕಳಿಬ್ಬರಿಗೆ ಇಂದು (ಆಗಸ್ಟ್ 03) ಮಹತ್ವದ ದಿನ.

  ರನ್ನನ ರಕ್ಷಾಬಂದನ. | Kiccha Sudeep Raksha Bhandan Wishes | Filmibeat Kannada

  ಹೌದು, ಮಗಳು ಐರಾ ಮತ್ತು ಮಗನಿಗೆ ಇಂದು ಮಹತ್ವದ ದಿನವಾಗಿದೆ, ಹಾಗೆಂದು ಸ್ವತಃ ತಾಯಿ ರಾಧಿಕಾ ಪಂಡಿತ್ ಹೇಳಿದ್ದಾರೆ.

  ಇಂದು ಆಗಸ್ಟ್ 03 ರಕ್ಷಾ ಬಂಧನದ ದಿನ. ಐರಾ ಮತ್ತು ಆಕೆಯ ತಮ್ಮನಿಗೆ ಇದು ಜೀವನದ ಮೊತ್ತ ಮೊದಲ ರಕ್ಷಾ ಬಂಧನ. ಈ ಮೊದಲ ರಕ್ಷಾ ಬಂಧನವನ್ನು ಅಮ್ಮನ ಮಾರ್ಗದರ್ಶನದಲ್ಲಿ ಆಚರಿಸಿದ್ದಾವೆ ಆ ಪುಟ್ಟು ಮುದ್ದು ಕಂದಗಳು.

  ತಮ್ಮ ಮಕ್ಕಳಿಬ್ಬರು ತಮ್ಮ ಮೊತ್ತ ಮೊದಲ ರಕ್ಷಾ ಬಂಧನ ಆಚರಿಸಿರುವ ಚಿತ್ರಗಳನ್ನು ರಾಧಿಕಾ ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

  ತಮ್ಮನಿಗೆ ರಾಖಿ ಕಟ್ಟಿದ ಐರಾ

  ತಮ್ಮನಿಗೆ ರಾಖಿ ಕಟ್ಟಿದ ಐರಾ

  ಮುದ್ದು ಪುಟಾಣಿ ಐರಾ ವರ್ಷ ತುಂಬದ ಮುದ್ದು ತಮ್ಮನ ಕೈಗೆ ರಾಖಿ ಕಟ್ಟಿದ್ದಾಳೆ. ಅಷ್ಟೆ ಅಲ್ಲ ರಾಖಿ ಕಟ್ಟಿ ಸಿಹಿ ಮುತ್ತನ್ನು ಸಹ ಕೊಟ್ಟಿದ್ದಾಳೆ.

  ತಮ್ಮನಿಗೆ ಆರತಿ ಮಾಡಿದ ಐರಾ

  ತಮ್ಮನಿಗೆ ಆರತಿ ಮಾಡಿದ ಐರಾ

  ಅಕ್ಕ ಐರಾ ತಮ್ಮನಿಗೆ ರಾಖಿ ಕಟ್ಟಿ ಆರತಿ ಮಾಡಿದ್ದಾಳೆ. ಈ ಎಲ್ಲಾ ಚಿತ್ರಗಳನ್ನು ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದು, ರಾಖಿ ಹಬ್ಬಕ್ಕೆ ಈ ಚಿತ್ರಗಳು ಇನ್ನಷ್ಟು ಕಳೆ ತಂದಿವೆ.

  ಯಶ್‌ರಿಂದ ರಾಖಿ ಹಬ್ಬ ಆಚರಣೆ

  ಯಶ್‌ರಿಂದ ರಾಖಿ ಹಬ್ಬ ಆಚರಣೆ

  ನಟ ಯಶ್ ಅವರೂ ಸಹ ಇಂದು ರಾಖಿ ಹಬ್ಬ ಆಚರಣೆ ಮಾಡಿದರು. ಯಶ್ ಅವರ ಪ್ರೀತಿಯ ಸಹೋದರಿ ನಂದಿನಿ ಯಶ್ ಅವರಿಗೆ ರಾಖಿ ಕಟ್ಟಿದರು. ರಾಖಿ ಆಚರಣೆಯನ್ನು ಯಶ್ ಮಿಸ್ ಮಾಡುವುದಿಲ್ಲ. ತಂದೆಯ ಗುಣ ಮಕ್ಕಳಿಗೂ ಬಂದಿದೆ ಎನ್ನಬಹುದು.

  ಮಕ್ಕಳ ತುಂಟಾಟ ದಾಖಲಿಸುವ ರಾಧಿಕಾ

  ಮಕ್ಕಳ ತುಂಟಾಟ ದಾಖಲಿಸುವ ರಾಧಿಕಾ

  ರಾಧಿಕಾ ಪಂಡಿತ್ ತಮ್ಮ ಮಕ್ಕಳ ವಿವಿಧ ಚಟುವಟಿಕೆಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೆ ಮಗಳು ಐರಾ ಕಾಮಿಕ್ಸ್ ಪುಸ್ತಕ ಓದುತ್ತಿರುವ ಚಿತ್ರ ಹಾಕಿದ್ದರು. ಪುಸ್ತಕಗಳನ್ನು ಕೊಟ್ಟಿದ್ದು ಅನುಪ್ರಭಾಕರ್ ಮತ್ತು ರಘು ಮುಖರ್ಜಿ ದಂಪತಿ ಎಂದು ಸಹ ಹೇಳಿದ್ದರು.

  English summary
  Radhika Pandit and Yash babies celebrate their first ever Raksha Bandan. Radhika shares adorable pictures.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X