ಜೂನಿಯರ್ ಯಶ್ ನ ಬರಮಾಡಿಕೊಂಡ ರಾಕಿಂಗ್ ದಂಪತಿ
ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಇಂದು ಮುಂಜಾನೆ ಖಾಸಗಿ ಆಸ್ಪತ್ರೆಗೆ ದಾಖಲಾದ ರಾಧಿಕಾ ಪಂಡಿತ್ ಗಂಡು ಮಗುವಿಗೆ ತಾಯಿ ಆಗಿದ್ದಾರೆ.
ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಜೂನಿಯರ್ ಯಶ್ ಆಗಮನದಿಂದ ಕುಟುಂಬಸ್ಥರು ಮತ್ತು ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.
ಕಳೆದ ವರ್ಷದ ಡಿಸೆಂಬರ್ ನಲ್ಲಿ ರಾಧಿಕಾ ಪಂಡಿತ್ ಗೆ ಹೆಣ್ಣು ಮಗು ಜನಿಸಿತ್ತು. ಪ್ರೀತಿಯ ಪುತ್ರಿಗೆ ರಾಕಿಂಗ್ ದಂಪತಿ ಐರಾ ಎಂದು ನಾಮಕರಣ ಮಾಡಿದ್ದರು. ಐರಾಗೆ ವರ್ಷ ತುಂಬುವ ಮುನ್ನವೇ 'ತಮ್ಮ' ಎಂಟ್ರಿಕೊಟ್ಟಿದ್ದಾನೆ.

ಇತ್ತೀಚೆಗೆಷ್ಟೇ ಖಾಸಗಿ ಹೋಟೆಲ್ ನಲ್ಲಿ ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮ ನಡೆದಿತ್ತು. ಸೀಮಂತ ಕಾರ್ಯಕ್ರಮವನ್ನು ರಾಧಿಕಾ ಪಂಡಿತ್ ಸ್ನೇಹಿತರು ಆಯೋಜಿಸಿದ್ದರು. ಇದೀಗ ರಾಧಿಕಾ ಪಂಡಿತ್ ಗೆ ಎರಡನೇ ಹೆರಿಗೆ ಆಗಿದೆ.
ಡಿಸೆಂಬರ್ 9, 2016 ರಂದು ಯಶ್ ಮತ್ತು ರಾಧಿಕಾ ಪಂಡಿತ್ ವಿವಾಹ ನಡೆದಿತ್ತು. ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ನಲ್ಲಿ ಶಾಸ್ತ್ರೋಕ್ತವಾಗಿ ರಾಧಿಕಾ ಪಂಡಿತ್ ಕೊರಳಿಗೆ ಯಶ್ ತಾಳಿ ಕಟ್ಟಿದ್ದರು. ಮದುವೆ ಆದ ಮೂರು ವರ್ಷಗಳಲ್ಲಿ ಜೂನಿಯರ್ ರಾಧಿಕಾ ಮತ್ತು ಜೂನಿಯರ್ ಯಶ್ ನ ರಾಕಿಂಗ್ ದಂಪತಿ ಬರಮಾಡಿಕೊಂಡಿದೆ.


Click it and Unblock the Notifications











