»   » ತವರು ಮನೆಯಲ್ಲಿ ಫ್ಯಾನ್ಸ್ ಜೊತೆಗೆ ಹುಟ್ಟುಹಬ್ಬ ಆಚರಿಸಿದ ರಾಧಿಕಾ ಪಂಡಿತ್

ತವರು ಮನೆಯಲ್ಲಿ ಫ್ಯಾನ್ಸ್ ಜೊತೆಗೆ ಹುಟ್ಟುಹಬ್ಬ ಆಚರಿಸಿದ ರಾಧಿಕಾ ಪಂಡಿತ್

Posted By:
Subscribe to Filmibeat Kannada
ರಾಧಿಕಾ ಪಂಡಿತ್ ಈ ಬಾರಿ ಹುಟ್ಟು ಹಬ್ಬ ಹೇಗೆ ಆಚರಿಸಿಕೊಂಡರು ಗೊತ್ತಾ ? | Filmibeat Kannada

ನಟಿ ರಾಧಿಕಾ ಪಂಡಿತ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಪ್ರತಿ ವರ್ಷ ಈ ದಿನವನ್ನು ರಾಧಿಕಾ ಅವರ ಅಭಿಮಾನಿಗಳಿಗಾಗಿ ಮಿಸಲಿಡುತ್ತಾರೆ ಈ ವರ್ಷ ಕೂಡ ತಮ್ಮ ಫ್ಯಾನ್ಸ್ ಜೊತೆಗೆ ರಾಧಿಕಾ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ.

ನಿನ್ನೆ ರಾತ್ರಿಯೇ ಅನೇಕ ಸಂಖ್ಯೆಯ ಅಭಿಮಾನಿಗಳು ಮಲ್ಲೇಶ್ವರಂ ಬಳಿ ಇರುವ ರಾಧಿಕಾ ಪಂಡಿತ್ ನಿವಾಸಕ್ಕೆ ಆಗಮಿಸಿದ್ದರು. ಅಭಿಮಾನಿಗಳು ತಂದಿರುವ ಕೇಕ್ ಕತ್ತರಿಸಿ, ಅವರ ಪೋಟೋಗೆ ಪೋಸ್ ಕೊಟ್ಟು ರಾಧಿಕಾ ಸಂತೋಷಪಟ್ಟರು. ಇನ್ನು ರಾಧಿಕಾ ಪ್ರೀತಿಯ ಪತಿ ರಾಕಿಂಗ್ ಸ್ಟಾರ್ ಯಶ್ ಕೂಡ ಈ ವೇಳೆ ಜೊತೆಗಿದ್ದರು. ತಮ್ಮ ಪತ್ನಿಯ ಸಂತೋಷದ ಕ್ಷಣದಲ್ಲಿ ಯಶ್ ಭಾಗಿಯಾಗಿದ್ದರು.

ಪ್ರತಿ ವರ್ಷದಂತೆ ಈ ವರ್ಷ ಸಹ ತಮ್ಮ ತಂದೆ ತಾಯಿಯ ಜೊತೆಗೆ ರಾಧಿಕಾ ಹುಟ್ಟುಹಬ್ಬ ಆಚರಿಸಿಕೊಂಡರು. ಮದುವೆಯ ನಂತರವೂ ರಾಧಿಕಾ ತಮ್ಮ ತವರು ಮನೆಯಲ್ಲಿ ಬರ್ತ್ ಡೇ ಸೆಲೆಬ್ರೇಟ್ ಮಾಡುತ್ತಿರುವುದು ವಿಶೇಷವಾಗಿತ್ತು.

Radhika Pandit celebrated her birthday with her fans

ಸದ್ಯ ಮದುವೆಯ ಬಳಿಕ ರಾಧಿಕಾ ಹೊಸ ಸಿನಿಮಾ ಮಾಡುತ್ತಿದ್ದಾರೆ. ರಾಕ್ ಲೈನ್ ವೆಂಕಟೇಶ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಿರೂಪ್ ಭಂಡರಿ ಚಿತ್ರದ ನಾಯಕನಾಗಿದ್ದು, ತಮಿಳು ನಿರ್ದೇಶಕಿ ಪ್ರಿಯಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಶುರು ಆಗಿದ್ದು, ಸದ್ಯಕ್ಕೆ ಸಿನಿಮಾದ ಟೈಟಲ್ ಫಿಕ್ಸ್ ಆಗಿಲ್ಲ.

English summary
Kannada actress Radhika Pandit celebrated her birthday with her fans today.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada