ರಾಧಿಕಾ ಪಂಡಿತ್ ಬರ್ತ್‌ಡೇ ಸೆಲೆಬ್ರೇಷನ್ ಹೇಗಿತ್ತು? ವೀಡಿಯೋ ವೈರಲ್

ನಟಿ ರಾಧಿಕಾ ಪಂಡಿತ್ ನಿನ್ನೆ(ಮಾರ್ಚ್ 7) ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ನೆಚ್ಚಿನ ನಟಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಪತಿ ಯಶ್ ಹಾಗೂ ಕೆಲವೇ ಆಪ್ತರ ಜೊತೆ ರಾಧಿಕಾ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ನೀಲಿ ಬಣ್ಣದ ಡೆನಿಮ್ ಗೌನ್ ಧರಿಸಿ ರಾಧಿಕಾ ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದರು. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಹುಟ್ಟುಹಬ್ಬದ ಶುಭಾಶಯಗಳು ಅತ್ತಿಗೆ ಎಂದು ಸಾಕಷ್ಟು ಜನ ಆ ಪೋಸ್ಟ್‌ ಕಾಮೆಂಟ್ ಬಾಕ್ಸ್‌ನಲ್ಲಿ ಶುಭ ಕೋರಿದ್ದರು. ಒಂದ್ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿದ ರಾಧಿಕಾ ಸದ್ಯ ಸಿನಿಮಾಗಳಿಂದ ಬಿಡುವು ಪಡೆದುಕೊಂಡಿದ್ದಾರೆ.

Radhika Pandit celebrates her birthday with husband yash and friends

ಪುಟ್ಟ ಮಕ್ಕಳನ್ನು ಸಾಕಿ ಸಲಹಲು ಕೆಲ ವರ್ಷಗಳ ಕಾಲ ಚಿತ್ರರಂಗದಿಂದ ದೂರ ಇರಲು ರಾಧಿಕಾ ಪಂಡಿತ್ ನಿರ್ಧರಿಸಿದಂತೆ ಕಾಣುತ್ತದೆ. ಮತ್ತೆ ಕಂಬ್ಯಾಕ್ ಮಾಡುವಂತೆ ಅಭಿಮಾನಿಗಳು ಕೇಳುತ್ತಲೇ ಇರುತ್ತಾರೆ. ಕಂಡಿತ ವಾಪಸ್ ಬರ್ತೀನಿ ಎಂದು ರಾಧಿಕಾ ಕೂಡ ಹೇಳುತ್ತಾ ಬರ್ತಿದ್ದಾರೆ. ಸದ್ಯ ಯಶ್ ನಟನಾಗಿ ಮಾತ್ರವಲ್ಲದೇ ನಿರ್ಮಾಪಕರಾಗಿಯೂ ಬ್ಯುಸಿಯಾಗಿದ್ದಾರೆ. 'ಟಾಕ್ಸಿಕ್' ಹಾಗೂ 'ರಾಮಾಯಣ' ರೀತಿಯ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಹಾಗಾಗಿ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ರಾಧಿಕಾ ವಹಿಸಿಕೊಂಡಿದ್ದಾರೆ. ಫ್ಯಾಮಿಲಿಗೂ ಟೈಮ್ ಕೊಡುತ್ತಿರುತ್ತಾರೆ.

ರಾಧಿಕಾ ಪಂಡಿತ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿ ಸಂಘದಿಂದ ಒಂದಷ್ಟು ಸಮಾಜಮುಖಿ ಕೆಲಸಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘದಿಂದ SNR ಆಸ್ಪತ್ರೆಯ ಆವರಣದಲ್ಲಿ ಅನ್ನದಾನ ಕಾರ್ಯಕ್ರಮ ಆಯೋಜಿಸಿದ್ದರು.

ಮನೆ ಬಳಿ ಕೂಡ ಒಂದಷ್ಟು ಅಭಿಮಾನಿಗಳು ಹೋಗಿ ರಾಧಿಕಾ ಪಂಡಿತ್ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ. ಅಭಿಮಾನಿಗಳ ಜೊತೆ ರಾಧಿಕಾ ಫೋಟೊಗಳಿಗೆ ಪೋಸ್ ಕೊಟ್ಟಿದ್ದಾರೆ. ಒಟ್ಟಾರೆ ಸ್ಯಾಂಡಲ್‌ವುಡ್ ಸಿಂಡ್ರೆಲಾ ಹುಟ್ಟುಹಬ್ಬ ಈ ವರ್ಷ ಜೋರಾಗಿಯೇ ನಡೆದಿದೆ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ರಾಧಿಕಾ ಕಿರುತೆರೆಯಲ್ಲಿ ಮೊದಲಿಗೆ ಅವಕಾಶ ಗಿಟ್ಟಿಸಿದ್ದರು. ಬಳಿಕ ಚಿತ್ರರಂಗಕ್ಕೂ ಬಂದು ಗೆದ್ದಿದ್ದರು.

2008ರಲ್ಲಿ ಬಂದಿದ್ದ 'ಮೊಗ್ಗಿನ ಮನಸು' ಚಿತ್ರದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ರಾಧಿಕಾ ಪಂಡಿತ್ ನಟಿಸಿದ್ದರು. ಅದೇ ಚಿತ್ರದಲ್ಲಿ ಯಶ್ ಸಹ ಹೀರೊ ಆಗಿ ಪರಿಚಿತರಾಗಿದ್ದರು. ಅದಕ್ಕೂ ಮುನ್ನ ಇಬ್ಬರೂ 'ನಂದಗೋಕುಲ' ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಪರಿಚಯ, ಸ್ನೇಹ ಶುರುವಾಗಿತ್ತು. ಬಳಿಕ ಅದು ಪ್ರೀತಿಗೆ ತಿರುಗಿತ್ತು. 'ಡ್ರಾಮಾ' ಸಿನಿಮಾ ಚಿತ್ರೀಕರಣದ ವೇಳೆ ಯಶ್ ಪ್ರಪೋಸ್ ಮಾಡಿದ್ದರು. ಬಳಿಕ ಇಬ್ಬರೂ ಪೋಷಕರ ಒಪ್ಪಿಗೆ ಪಡೆದು ಹಸೆಮಣೆ ಏರಿದ್ದರು.

'ಲವ್ ಗುರು', 'ಕೃಷ್ಣನ್ ಲವ್‌ಸ್ಟೋರಿ', 'ಹುಡುಗರು', 'ಅದ್ಧೂರಿ', 'ಡ್ರಾಮಾ', 'ಕಡ್ಡಿಪುಡಿ', 'ಬಹದ್ದೂರ್', 'ಮಿ. & ಮಿ. ರಾಮಾಚಾರಿ', 'ದೊಡ್ಮನೆ ಹುಡ್ಗ' ರೀತಿಯ ಹಿಟ್ ಸಿನಿಮಾಗಳಲ್ಲಿ ರಾಧಿಕಾ ಪಂಡಿತ್ ನಟಿಸಿದ್ದರು. ಮದುವೆ ಬಳಿಕ 'ಆದಿಲಕ್ಷ್ಮಿ ಪುರಾಣ' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು. ಆ ಸಿನಿಮಾ ಗೆಲ್ಲಲಿಲ್ಲ. ತಾಯಿಯಾದ ಬಳಿಕ ಆಕೆ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ.

ಅಭಿಮಾನಿಗಳಂತೂ ನೆಚ್ಚಿನ ನಟಿಯನ್ನು ಮತ್ತೆ ತೆರೆಮೇಲೆ ನೋಡಲು ಕಾಯುತ್ತಿದ್ದಾರೆ. ರಾಧಿಕಾ ಪಂಡಿತ್ ಯಾವುದೇ ಪೋಸ್ಟ್ ಮಾಡಿದರೂ ಅದರ ಕಾಮೆಂಟ್ ಬಾಕ್ಸ್‌ನಲ್ಲಿ ಈ ಬಗ್ಗೆ ಪ್ರಶ್ನೆ ಎದುರಾಗುತ್ತದೆ. ಆಕೆ ಯಾವಾಗ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಡ್ತಾರೆ ಕಾದು ನೋಡಬೇಕು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ ಸಖತ್ ಆಕ್ಟೀವ್ ಆಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 40 ಲಕ್ಷಕ್ಕೂ ಅಧಿಕ ಫಾಲೋವರ್ಸ ಇದ್ದಾರೆ. ಯೂಟ್ಯೂಬ್ ಚಾನಲ್ ಸಹ ಆರಂಭಿಸಿದ್ದಾರೆ.

More from Filmibeat

English summary
Kannada actress Radhika Pandit celebrate Birthday in style with her close ones
Read more about: yash toxic radhika pandit
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X