ಕೊಕೊ ಹುಟ್ಟುಹಬ್ಬ ಆಚರಿಸಿದ ರಾಧಿಕಾ, ಐರಾ, ಯಥರ್ವ್; ಫೋಟೊಸ್ ವೈರಲ್

ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಪದೇ ಪದೆ ಸಂಭ್ರಮಾಚರಣೆ ನಡೆಯುತ್ತಲೇ ಇರುತ್ತದೆ. ಹಬ್ಬ ಹರಿದಿನಗಳನ್ನು ಜೋರಾಗಿಯೇ ಆಚರಿಸುತ್ತಾರೆ. ನಟ ಯಶ್ ಸಿನಿಮಾ ಕೆಲಸಗಳಲ್ಲಿ ಹೊರಗಡೆ ಬ್ಯುಸಿ ಇದ್ದರೂ ಮನೆಯಲ್ಲಿ ರಾಧಿಕಾ ಮಕ್ಕಳ ಜೊತೆಗೆ ಸಂಭ್ರಮಾಚರಣೆ ಮಾಡುತ್ತಾರೆ. ಇದೀಗ ತಮ್ಮ ಮುದ್ದಿನ ಕೊಕೊ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದಾರೆ.

ಮೊನ್ನೆ ಮೊನ್ನೆ ರಾಕಿಂಗ್ ದಂಪತಿ ತಮ್ಮ ಮುದ್ದಿನ ಮಗನ ಹುಟ್ಟುಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸಿದ್ದರು. ಖಾಸಗಿ ಹೋಟೆಲ್‌ನಲ್ಲಿ ಪ್ರಾಣಿ ಪ್ರಪಂಚವನ್ನೇ ಸೃಷ್ಟಿಸಿದ್ದರು. ಯಥರ್ವ್, ಐರಾ ಸ್ನೇಹಿತರು ಆ ಸಂಭ್ರಮಾಚಣೆಯಲ್ಲಿ ಭಾಗಿ ಆಗಿದ್ದರು. ಪ್ರಾಣಿ ದಿ ಪೆಟ್ ಸ್ಯಾಂನ್ಚುರಿಯಿಂದ ಸಾಕಷ್ಟು ಪ್ರಾಣಿ, ಪಕ್ಷಿಗಳನ್ನು ಅಲ್ಲಿಗೆ ತರಲಾಗಿತ್ತು. ಅದಕ್ಕೆ ಸಂಬಂಧಿಸಿದ ವೀಡಿಯೋ ಫುಲ್ ವೈರಲ್ ಆಗಿತ್ತು. ಯಶ್ ಕುಟುಂಬದ ಆಪ್ತರು ಈ ಸಂಭ್ರಮಾಚರಣೆಗೆ ಸಾಕ್ಷಿ ಆಗಿದ್ದರು.

Radhika Pandit Celebrates Pet Dog Coco s 2nd Birthday with Kids in a Heartwarming Family Bash

ಇದೀಗ ತಮ್ಮ ಮನೆಯ ಮುದ್ದಿನ ನಾಯಿಮರಿ ಕೊಕೊ 2ನೇ ಹುಟ್ಟುಹಬ್ಬವನ್ನು ರಾಧಿಕಾ ಆಚರಿಸಿದ್ದಾರೆ. ಐರಾ, ಐಥರ್ವ್ ಜೊತೆಗೆ ರಾಧಿಕಾ ಪೋಷಕರು ಹಾಗೂ ಸಿಬ್ಬಂದಿ ಈ ಸಂಭ್ರಮಾಚರಣೆಯಲ್ಲಿ ಭಾಗಿ ಆಗಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ರಾಧಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. "ಜಂಜಾಟದಿಂದ ತುಂಬಿರುವ ಜಗತ್ತಿನಲ್ಲಿ, ಅಚಲವಾದ ವಾತ್ಸಲ್ಯ ಹೇಗಿರುತ್ತದೆ ಎಂಬುದನ್ನು ಅವಳು ನಮಗೆ ನೆನಪಿಸುತ್ತಾಳೆ. ಹುಟ್ಟುಹಬ್ಬದ ಶುಭಾಶಯಗಳು, ಕೊಕೊ" ಎಂದು ಅದಕ್ಕೆ ಕ್ಯಾಪ್ಷನ್ ಕೊಟ್ಟಿದ್ದಾರೆ.

ಬರ್ತ್‌ಡೇ ಸೆಲೆಬ್ರೇಷನ್ ಫೋಟೊಗಳ ಜೊತೆಗೆ ಕೊಕೊ ಜೊತೆಗಿನ ಒಂದಷ್ಟು ಫೋಟೊಗಳನ್ನು ರಾಧಿಕಾ ಹಂಚಿಕೊಂಡಿದ್ದಾರೆ. ಒಂದು ಫೋಟೊದಲ್ಲಿ ಯಶ್ ಕೈಯಲ್ಲಿ ಕೊಕೊ ಇದ್ದು ರಾಧಿಕಾ ಸೆಲ್ಫಿ ಕ್ಲಿಕ್ಕಿಸಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು 'ಲಕ್ಕಿ' ಚಿತ್ರದ 'ನಾನೇನು ಮಾಡ್ಲಿ ಸ್ವಾಮಿ ನಮ್ ಹುಡ್ಗಿ ನಾಯಿಪ್ರೇಮಿ' ಹಾಡನ್ನು ನೆನಪಿಸಿಕೊಂಡಿದ್ದಾರೆ. ಕೆಲ ದಿನಗಳಿಂದ ಪೂಡ್ಲ್ ತಳಿಯ ನಾಯಿಮರಿ ಕೊಕೊ ಯಶ್ ಮನೆ ಸದಸ್ಯಳಾಗಿಬಿಟ್ಟಿದ್ದಾಳೆ. ಬರ್ತ್‌ಡೇ ಕೇಕ್ ಕೂಡ ಸಖತ್ ಸ್ಪೆಷಲ್ ಆಗಿದೆ.

ನಟ ಯಶ್ ಸದ್ಯ 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾ ಕೆಲಸದ ಓಡಾಟದಲ್ಲಿದ್ದಾರೆ. ರಾಧಿಕಾ ಪಂಡಿತ್ ಮನೆ ಹಾಗೂ ಮಕ್ಕಳ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. 'ಆದಿಲಕ್ಷ್ಮಿ ಪುರಾಣ' ಸಿನಿಮಾ ಬಳಿಕ ರಾಧಿಕಾ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ಅಭಿಮಾನಿಗಳು ಆಕೆಯನ್ನು ಮತ್ತೆ ತೆರೆಮೇಲೆ ನೋಡಲು ಕಾಯುತ್ತಿದ್ದಾರೆ.

ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದರೂ ರಾಧಿಕಾ ಪಂಡಿತ್ ಚಾರ್ಮ್ ಮಾತ್ರ ಕಮ್ಮಿ ಆಗಿಲ್ಲ. ಆಕೆ ಕೂಡ ಸದ್ಯ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದು ಮುಂದಿನ ದಿನಗಳಿಂದ ಮತ್ತೆ ಸಿನಿಮಾಗಳಲ್ಲಿ ನಟಿಸುವ ಸಾಧ್ಯತೆ ದಟ್ಟವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ರಾಧಿಕಾ ಆಗಾಗ್ಗೆ ಪೋಸ್ಟ್ ಮಾಡಿ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ.

ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗುತ್ತದೆ ಎನ್ನುವ ವದಂತಿಗಳಿಗೆ ಚಿತ್ರತಂಡ ತೆರೆ ಎಳೆದಿದೆ ಮಾರ್ಚ್ 19ಕ್ಕೆ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿದ್ದು ಶೀಘ್ರದಲ್ಲೇ ಟೀಸರ್ ರಿಲೀಸ್ ಪ್ರಯತ್ನ ನಡೀತಿದೆ.

ಯಶ್ ಜೊತೆಗೆ ಕಿಯಾರಾ ಅದ್ವಾನಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಸೇರಿ ದೊಡ್ಡ ತಾರಾಗಣ 'ಟಾಕ್ಸಿಕ್' ಚಿತ್ರದಲ್ಲಿದೆ. 'KGF- 2' ಬಳಿಕ ಮುಂದೇನು ಎನ್ನುವವರಿಗೆ ಉತ್ತರ ಕೊಡಲು ಯಶ್ ಈ ಚಿತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಚಿತ್ರದ ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಘಟಾನುಘಟಿ ತಂತ್ರಜ್ಞರು ಚಿತ್ರಕ್ಕಾಗಿ ಜೊತೆಯಾಗಿದ್ದಾರೆ.

More from Filmibeat

Read more about: yash radhika pandit toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X