ಯಶ್ ದಂಪತಿ ಸುದ್ದಿಗೋಷ್ಠಿ: ಮಗುವಿಗೆ ರಾಧಿಕಾ ಮೊದಲೇ ಹೆಸರಿಟ್ಟಿದ್ದರಂತೆ
Recommended Video

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗೆ ಡಿಸೆಂಬರ್ 2 ರಂದು ಹೆಣ್ಣು ಮಗು ಜನಿಸಿತ್ತು. ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ರಾಧಿಕಾ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಒಂದು ವಾರದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ರಾಧಿಕಾ ಪಂಡಿತ್ ತಮ್ಮ ಪತಿ ಯಶ್ ಜೊತೆ ಸೇರಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ತಮ್ಮ ಹಾಗೂ ಮಗುವಿನ ಆರೋಗ್ಯ, ಆರೈಕೆ ಹಾಗೂ ಕನಸಿನ ಬಗ್ಗೆ ಮಾತನಾಡಿದರು.
ಇನ್ನು ಮಗುವಿಗೆ ಯಾವ ಹೆಸರು ಇಡಲಾಗುತ್ತಿದೆ, ಮುಂದಿನ ಪ್ಲಾನ್ ಏನು, ಡಿಸೆಂಬರ್ ತಿಂಗಳ ಸಂಭ್ರಮ ಹೇಗಿರುತ್ತೆ ಎಂಬ ಹಲವು ಇಂಟ್ರೆಸ್ಟಿಂಗ್ ವಿಷ್ಯಗಳನ್ನ ಹಂಚಿಕೊಂಡರು. ವಿಶೇಷ ಅಂದ್ರೆ ಇದೇ ದಿನ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಎರಡನೇ ವರ್ಷದ ವಾರ್ಷಿಕೋತ್ಸವ ಸಂಭ್ರಮವಾಗಿದೆ. ಹಾಗಿದ್ರೆ, ಯಶ್ ದಂಪತಿ ಏನು ಹೇಳಿದ್ರು.? ಮುಂದೆ ಓದಿ.....

ನನ್ನ ಆಸೆ ಈಡೇರಿತು
''ನನಗೆ ಹೆಣ್ಣು ಮಗು ಆಗ್ಬೇಕು ಅಂತ ಇಷ್ಟಪಟ್ಟಿದ್ದೆ. ರಾಧಿಕಾ ಗಂಡು ಮಗು ಆಗ್ಬೇಕು ಅಂತ ಆಸೆ ಪಟ್ಟಿದ್ರು. ಆದ್ರೆ, ನನ್ನ ಆಸೆಯಂತೆ ಹೆಣ್ಣು ಆಗಿದೆ, ತುಂಬಾ ಖುಷಿ ಆಗ್ತಿದೆ. ರಾಧಿಕಾಗೂ ತುಂಬಾ ಖುಷಿ ಇದೆ'' ಎಂದು ಯಶ್ ತಮ್ಮ ಸಂತಸವನ್ನ ಹಂಚಿಕೊಂಡರು.

ಹೆಸರು ನಿರ್ಧಾರ ಮಾಡಬೇಕು
''ರಾಧಿಕಾ ಈಗಾಗಲೇ ಗಂಡು ಮಗುವಿಗೆ ಒಂದು ಹೆಸರು ನಿರ್ಧರಿಸಿಬಿಟ್ಟಿದ್ದರು, ಬಟ್ ಹೆಣ್ಣು ಮಗು ಅಂತ ನಾನು ಒಂದು ಹೆಸರು ಮೊದಲೇ ಫಿಕ್ಸ್ ಮಾಡಬೇಕಿತ್ತು. ಆದ್ರೆ, ಸ್ವಲ್ಪ ಬ್ಯುಸಿ ಇದ್ದ ಕಾರಣ ಆಗಿಲ್ಲ. ಈಗ ಹೆಸರು ಇಡಬೇಕು. ಎಲ್ಲ ಸಂಪ್ರದಾಯದ ಪ್ರಕಾರ ನಿರ್ಧಾರ ಮಾಡ್ತೀವಿ'' ಎಂದು ಯಶ್ ತಿಳಿಸಿದರು.

ಡಿಸೆಂಬರ್ ಸ್ಪೆಷಲ್
ಡಿಸೆಂಬರ್ ಯಶ್ ಪಾಲಿಗೆ ತುಂಬಾ ಸ್ಪೆಷಲ್. ಕೆಜಿಎಫ್ ಸಿನಿಮಾ ರಿಲೀಸ್ ಆಗ್ತಿದೆ. ಯಶ್ ಅವರ ಮದುವೆ ವಾರ್ಷಿಕೋತ್ಸವವೂ ಇದೆ ತಿಂಗಳು (ಡಿಸೆಂಬರ್ 9). ಇನ್ನು ಮಗು ಕೂಡ ಇದೇ ತಿಂಗಳು ಜನಿಸಿದೆ. ''ಇದನ್ನೆಲ್ಲ ಗಮನಿಸಿದ್ರೆ ಡಿಸೆಂಬರ್ ತಿಂಗಳು ನನಗೆ ಸ್ಪೆಷಲ್ ಅಂತ ಈಗ ನಂಬ್ತೀನಿ'' ಎಂದು ಯಶ್ ಹೇಳಿದರು.

ತಂದೆಯಂತೆ ಮಗಳು ಇದ್ದಾಳೆ
ಎಲ್ಲರಿಗೂ ಒಂದು ರೀತಿ ಕೂತುಹಲವಿತ್ತು. ಮಗು ಯಶ್ ರೀತಿ ಇದೆಯಾ ಅಥವಾ ರಾಧಿಕಾ ಪಂಡಿತ್ ರೀತಿ ಕಾಣುತ್ತಾ ಎಂದು. ಈ ಬಗ್ಗೆ ರಾಧಿಕಾ ಮಾತನಾಡಿದ್ದು, ''ಮಗು ಸೇಮ್ ಟು ಸೇಮ್ ಯಶ್ ರೀತಿನೇ ಇದೆ, ನನ್ನ ಲಕ್ಷಣ ಒಂದೂ ಇಲ್ಲ'' ಎಂದು ಖುಷಿ ಹಂಚಿಕೊಂಡರು. ಇನ್ನು ನನ್ನ ಬಗ್ಗೆ ಕಾಳಜಿ ತೋರಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

ಮಗಳ ಜೊತೆ ವಾರ್ಷಿಕೋತ್ಸವ ಸಂಭ್ರಮ
ಇಂದಿದೆ (ಡಿಸೆಂಬರ್ 9) ಯಶ್ ಮತ್ತು ರಾಧಿಕಾ ಮದುವೆ ಆಗಿ ಎರಡು ವರ್ಷ ತುಂಬಿದೆ. ಇಂದಿನ ವಾರ್ಷಿಕೋತ್ಸವವನ್ನ ನಾವು ನಮ್ಮ ಮಗುವಿನ ಜೊತೆ ಸಂಭ್ರಮಿಸುತ್ತಿದ್ದೇವೆ. ಯಶ್ ಕೆಜಿಎಫ್ ಪ್ರಚಾರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ'' ಎಂದು ರಾಧಿಕಾ


Click it and Unblock the Notifications











