twitter
    For Quick Alerts
    ALLOW NOTIFICATIONS  
    For Daily Alerts

    ಯಶ್ ದಂಪತಿ ಸುದ್ದಿಗೋಷ್ಠಿ: ಮಗುವಿಗೆ ರಾಧಿಕಾ ಮೊದಲೇ ಹೆಸರಿಟ್ಟಿದ್ದರಂತೆ

    |

    Recommended Video

    ರಾಧಿಕಾ ಪಂಡಿತ್ ಫೋರ್ಟಿಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ | ಮಗು ಬಗ್ಗೆ ಯಶ್ ಹೇಳಿದ್ದು ಹೀಗೆ |FILMIBEAT KANNADA

    ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗೆ ಡಿಸೆಂಬರ್ 2 ರಂದು ಹೆಣ್ಣು ಮಗು ಜನಿಸಿತ್ತು. ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ರಾಧಿಕಾ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಒಂದು ವಾರದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ರಾಧಿಕಾ ಪಂಡಿತ್ ತಮ್ಮ ಪತಿ ಯಶ್ ಜೊತೆ ಸೇರಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ತಮ್ಮ ಹಾಗೂ ಮಗುವಿನ ಆರೋಗ್ಯ, ಆರೈಕೆ ಹಾಗೂ ಕನಸಿನ ಬಗ್ಗೆ ಮಾತನಾಡಿದರು.

    ಯಶ್ ಮಗಳ ಜಾತಕದಲ್ಲಿ 'ಸಿಂಹಾಸನ ಯೋಗ': ಮಗಳ ಭವಿಷ್ಯ ಹೇಗಿದೆ? ಯಶ್ ಮಗಳ ಜಾತಕದಲ್ಲಿ 'ಸಿಂಹಾಸನ ಯೋಗ': ಮಗಳ ಭವಿಷ್ಯ ಹೇಗಿದೆ?

    ಇನ್ನು ಮಗುವಿಗೆ ಯಾವ ಹೆಸರು ಇಡಲಾಗುತ್ತಿದೆ, ಮುಂದಿನ ಪ್ಲಾನ್ ಏನು, ಡಿಸೆಂಬರ್ ತಿಂಗಳ ಸಂಭ್ರಮ ಹೇಗಿರುತ್ತೆ ಎಂಬ ಹಲವು ಇಂಟ್ರೆಸ್ಟಿಂಗ್ ವಿಷ್ಯಗಳನ್ನ ಹಂಚಿಕೊಂಡರು. ವಿಶೇಷ ಅಂದ್ರೆ ಇದೇ ದಿನ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಎರಡನೇ ವರ್ಷದ ವಾರ್ಷಿಕೋತ್ಸವ ಸಂಭ್ರಮವಾಗಿದೆ. ಹಾಗಿದ್ರೆ, ಯಶ್ ದಂಪತಿ ಏನು ಹೇಳಿದ್ರು.? ಮುಂದೆ ಓದಿ.....

    ನನ್ನ ಆಸೆ ಈಡೇರಿತು

    ನನ್ನ ಆಸೆ ಈಡೇರಿತು

    ''ನನಗೆ ಹೆಣ್ಣು ಮಗು ಆಗ್ಬೇಕು ಅಂತ ಇಷ್ಟಪಟ್ಟಿದ್ದೆ. ರಾಧಿಕಾ ಗಂಡು ಮಗು ಆಗ್ಬೇಕು ಅಂತ ಆಸೆ ಪಟ್ಟಿದ್ರು. ಆದ್ರೆ, ನನ್ನ ಆಸೆಯಂತೆ ಹೆಣ್ಣು ಆಗಿದೆ, ತುಂಬಾ ಖುಷಿ ಆಗ್ತಿದೆ. ರಾಧಿಕಾಗೂ ತುಂಬಾ ಖುಷಿ ಇದೆ'' ಎಂದು ಯಶ್ ತಮ್ಮ ಸಂತಸವನ್ನ ಹಂಚಿಕೊಂಡರು.

    ಪುಟ್ಟ ಕಂದನನ್ನು ಪ್ರೀತಿಯಿಂದ ಬರಮಾಡಿಕೊಂಡ ಸ್ಯಾಂಡಲ್ ವುಡ್ಪುಟ್ಟ ಕಂದನನ್ನು ಪ್ರೀತಿಯಿಂದ ಬರಮಾಡಿಕೊಂಡ ಸ್ಯಾಂಡಲ್ ವುಡ್

    ಹೆಸರು ನಿರ್ಧಾರ ಮಾಡಬೇಕು

    ಹೆಸರು ನಿರ್ಧಾರ ಮಾಡಬೇಕು

    ''ರಾಧಿಕಾ ಈಗಾಗಲೇ ಗಂಡು ಮಗುವಿಗೆ ಒಂದು ಹೆಸರು ನಿರ್ಧರಿಸಿಬಿಟ್ಟಿದ್ದರು, ಬಟ್ ಹೆಣ್ಣು ಮಗು ಅಂತ ನಾನು ಒಂದು ಹೆಸರು ಮೊದಲೇ ಫಿಕ್ಸ್ ಮಾಡಬೇಕಿತ್ತು. ಆದ್ರೆ, ಸ್ವಲ್ಪ ಬ್ಯುಸಿ ಇದ್ದ ಕಾರಣ ಆಗಿಲ್ಲ. ಈಗ ಹೆಸರು ಇಡಬೇಕು. ಎಲ್ಲ ಸಂಪ್ರದಾಯದ ಪ್ರಕಾರ ನಿರ್ಧಾರ ಮಾಡ್ತೀವಿ'' ಎಂದು ಯಶ್ ತಿಳಿಸಿದರು.

    ಯಶ್-ರಾಧಿಕಾ ಮಗುವಿಗೆ ಅಂಬರೀಶ್ ಬುಕ್ ಮಾಡಿದ್ರಂತೆ ಭರ್ಜರಿ ಗಿಫ್ಟ್.!ಯಶ್-ರಾಧಿಕಾ ಮಗುವಿಗೆ ಅಂಬರೀಶ್ ಬುಕ್ ಮಾಡಿದ್ರಂತೆ ಭರ್ಜರಿ ಗಿಫ್ಟ್.!

    ಡಿಸೆಂಬರ್ ಸ್ಪೆಷಲ್

    ಡಿಸೆಂಬರ್ ಸ್ಪೆಷಲ್

    ಡಿಸೆಂಬರ್ ಯಶ್ ಪಾಲಿಗೆ ತುಂಬಾ ಸ್ಪೆಷಲ್. ಕೆಜಿಎಫ್ ಸಿನಿಮಾ ರಿಲೀಸ್ ಆಗ್ತಿದೆ. ಯಶ್ ಅವರ ಮದುವೆ ವಾರ್ಷಿಕೋತ್ಸವವೂ ಇದೆ ತಿಂಗಳು (ಡಿಸೆಂಬರ್ 9). ಇನ್ನು ಮಗು ಕೂಡ ಇದೇ ತಿಂಗಳು ಜನಿಸಿದೆ. ''ಇದನ್ನೆಲ್ಲ ಗಮನಿಸಿದ್ರೆ ಡಿಸೆಂಬರ್ ತಿಂಗಳು ನನಗೆ ಸ್ಪೆಷಲ್ ಅಂತ ಈಗ ನಂಬ್ತೀನಿ'' ಎಂದು ಯಶ್ ಹೇಳಿದರು.

    ಯಶ್ ಆಸೆ ಈಡೇರಿತು : ಸಂತಸ ಹಂಚಿಕೊಂಡ ರಾಕಿಂಗ್ ಕುಟುಂಬಯಶ್ ಆಸೆ ಈಡೇರಿತು : ಸಂತಸ ಹಂಚಿಕೊಂಡ ರಾಕಿಂಗ್ ಕುಟುಂಬ

    ತಂದೆಯಂತೆ ಮಗಳು ಇದ್ದಾಳೆ

    ತಂದೆಯಂತೆ ಮಗಳು ಇದ್ದಾಳೆ

    ಎಲ್ಲರಿಗೂ ಒಂದು ರೀತಿ ಕೂತುಹಲವಿತ್ತು. ಮಗು ಯಶ್ ರೀತಿ ಇದೆಯಾ ಅಥವಾ ರಾಧಿಕಾ ಪಂಡಿತ್ ರೀತಿ ಕಾಣುತ್ತಾ ಎಂದು. ಈ ಬಗ್ಗೆ ರಾಧಿಕಾ ಮಾತನಾಡಿದ್ದು, ''ಮಗು ಸೇಮ್ ಟು ಸೇಮ್ ಯಶ್ ರೀತಿನೇ ಇದೆ, ನನ್ನ ಲಕ್ಷಣ ಒಂದೂ ಇಲ್ಲ'' ಎಂದು ಖುಷಿ ಹಂಚಿಕೊಂಡರು. ಇನ್ನು ನನ್ನ ಬಗ್ಗೆ ಕಾಳಜಿ ತೋರಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

    ತಂದೆಯಾದ ಯಶ್ : ಮನೆಗೆ ಬಂದ ಮಹಾಲಕ್ಷ್ಮಿತಂದೆಯಾದ ಯಶ್ : ಮನೆಗೆ ಬಂದ ಮಹಾಲಕ್ಷ್ಮಿ

    ಮಗಳ ಜೊತೆ ವಾರ್ಷಿಕೋತ್ಸವ ಸಂಭ್ರಮ

    ಮಗಳ ಜೊತೆ ವಾರ್ಷಿಕೋತ್ಸವ ಸಂಭ್ರಮ

    ಇಂದಿದೆ (ಡಿಸೆಂಬರ್ 9) ಯಶ್ ಮತ್ತು ರಾಧಿಕಾ ಮದುವೆ ಆಗಿ ಎರಡು ವರ್ಷ ತುಂಬಿದೆ. ಇಂದಿನ ವಾರ್ಷಿಕೋತ್ಸವವನ್ನ ನಾವು ನಮ್ಮ ಮಗುವಿನ ಜೊತೆ ಸಂಭ್ರಮಿಸುತ್ತಿದ್ದೇವೆ. ಯಶ್ ಕೆಜಿಎಫ್ ಪ್ರಚಾರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ'' ಎಂದು ರಾಧಿಕಾ

    English summary
    Kannada actors Yash and Radhika welcomed a baby girl at around 6 am on December 2. now, radhika pandit discharge from fortis hospital on today (december 9).
    Sunday, December 9, 2018, 12:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X