ರಾಧಿಕಾಗೆ ಯಶ್ ಜೊತೆ ಇಂತಹದೊಂದು ಸಿನಿಮಾ ಮಾಡುವ ಆಸೆ ಇದೆಯಂತೆ
Recommended Video

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿಯನ್ನ ಮತ್ತೆ ತೆರೆಮೇಲೆ ನೋಡಬೇಕು ಆಸೆ, ಕಾತುರ ಅವರ ಅಭಿಮಾನಿಗಳಿಗಿದೆ. ಮದುವೆಯ ನಂತರ ಯಾವ ಸಿನಿಮಾ ಮಾಡ್ತಾರೆ, ಯಾವಾಗ ಮಾಡ್ತಾರೆ ಎಂದು ಕಾಯ್ತಿದ್ದರು.
ಸದ್ಯಕ್ಕೆ ಅಭಿಮಾನಿಗಳ ಈ ಆಸೆ ಈಡೇರದೇ ಇರಬಹುದು. ಆದ್ರೆ, ಮುಂದಿನ ದಿನದಲ್ಲಿ ಇದು ಸಾಧ್ಯವೆಂದು ಸ್ವತಃ ರಾಕಿಂಗ್ ಸ್ಟಾರ್ ಯಶ್ ಅವರೇ ಹೇಳಿಕೊಂಡಿದ್ದಾರೆ.
ಈ ವಿಚಾರದಲ್ಲಿ ಯಶ್ ಪತ್ನಿ ರಾಧಿಕಾ ಪಂಡಿತ್ ಗೊಂದು ಆಸೆ ಇದೆಯಂತೆ. ಇಂತಹದೊಂದು ಸಿನಿಮಾ ಮಾಡ್ಬೇಕು ಅಂತ ಪದೇ ಪದೇ ಹೇಳ್ತಿದ್ದಾರಂತೆ. ಬಟ್, ಅದು ಯಾವಾಗ ಆಗುತ್ತೋ ಎಂಬುದು ಗೊತ್ತಿಲ್ಲ. ಅಷ್ಟಕ್ಕೂ, ರಾಧಿಕಾ ಪಂಡಿತ್ ಅವರ ಕನಸಿನ ಪ್ರಾಜೆಕ್ಟ್ ಯಾವುದು.? ಮುಂದೆ ಓದಿ....

ರಿಜೆಕ್ಟ್ ಆಗಿದ್ದ ಕಥೆಗಳೇ ಜಾಸ್ತಿ
'ಮದುವೆಗೂ ಮುಂಚೆಯೂ ನಾವು ಇಂತಹದೊಂದು ಮಾಡಬೇಕು ಅಂತ ಯಾವುದು ಮಾಡಿಲ್ಲ. ಅದು ಹಾಗೆ ಆಗಿದ್ದು. ನಾವು ಒಟ್ಟಿಗೆ ಮಾಡಿದ್ದು ನಾಲ್ಕು ಸಿನಿಮಾ. ರಿಜೆಕ್ಟ್ ಮಾಡಿದ್ದ ಸುಮಾರು 10 ಸಿನಿಮಾ. ಕಥೆ ನನಗೆ ಇಷ್ಟ ಆದ್ರೆ ರಾಧಿಕಾಗೆ ಇಷ್ಟ ಆಗ್ತಿರಲಿಲ್ಲ. ರಾಧಿಕಾಗೆ ಇಷ್ಟ ಆದ್ರೆ ನನಗೆ ಇಷ್ಟ ಆಗಿರಲಿಲ್ಲ'

ರಾಧಿಕಾಗೊಂದು ಆಸೆ
'ಆದ್ರೆ, ರಾಧಿಕಾ ಗೆ ಎಲ್ಲೋ ಒಂದು ಕಡೆ ಆಸೆ ಇದೆ. ಕೆಲವು ಸಲ ಹೇಳಿಕೊಂಡಿರುವ ನೆನಪು. Periodical ಸಿನಿಮಾ ಮಾಡಬೇಕು ಅನ್ನೋ ಮಾತು ಹೇಳ್ತಿದ್ರು. ಈ ರೀತಿ ಸಿನಿಮಾ ನಾವು ಮಾಡಿಲ್ಲ. ಯಾವಗಲಾದರೂ ಸಮಯ ಸಿಕ್ಕಾಗ ಈ ಶೈಲಿಯ ಸಿನಿಮಾವೊಂದು ಮಾಡೋಣ ಅಂತ ಹೇಳ್ತಾರೆ'

ಡೈರೆಕ್ಟರ್ ಬರಬೇಕು
'ನಾವಿಬ್ಬರು ಒಂದು ಸಿನಿಮಾ ಮಾಡ್ಬೇಕು ಅಂತ ನಾವು ಯಾವತ್ತು ಅಂದುಕೊಂಡಿಲ್ಲ. ಸಾಮಾನ್ಯವಾಗಿ ಜನ ಕೇಳ್ತಾರೆ. ಯಾರಾದರೂ ಡೈರೆಕ್ಟರ್ ಒಳ್ಳೆಯ ಕಥೆಯೊಂದಿಗೆ ಬಂದ್ರೆ ಖಂಡಿತಾ ಮಾಡ್ತೀವಿ'' ಎಂದು ನಟ ಯಶ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ'

ಒಟ್ಟಿಗೆ ನಾಲ್ಕು ಸಿನಿಮಾ
'ಇದುವರೆಗೂ ಮೊಗ್ಗಿನ ಮನಸ್ಸು, ಡ್ರಾಮಾ, ಮಿಸ್ಟರ್ ಮಿಸಸ್ ರಾಮಾಚಾರಿ, ಸಂತು ಸ್ಟ್ರೈಟ್ ಫಾರ್ವಾಡ್ ನಾಲ್ಕು ಚಿತ್ರಗಳಲ್ಲಿ ಯಶ್ ಮತ್ತು ರಾಧಿಕಾ ಅಭಿನಯಿಸಿದ್ದಾರೆ. ಸದ್ಯ ಯಶ್ 'ಕೆಜಿಎಫ್ ಚಾಪ್ಟರ್-1' ಮುಗಿಸಿ, 'ಮೈ ನೇಮ್ ಈಸ್ ಕಿರಾತಕ' ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಈ ಕಡೆ ರಾಧಿಕಾ 'ಆದಿ ಲಕ್ಷ್ಮಿ ಪುರಾಣ' ಸಿನಿಮಾದಲ್ಲಿ ನಟಿಸಿದ್ದಾರೆ. ಬಿಡುಗಡೆ ಮಾಡಬೇಕಿದೆ'


Click it and Unblock the Notifications











