ತುಂಬು ಗರ್ಭಿಣಿ ಆಗಿದ್ದರೂ ಸಿನಿಮಾ ಕೆಲಸವನ್ನ ಮುಗಿಸಿದ ರಾಧಿಕಾ

Recommended Video

ರಾಧಿಕಾ ಪಂಡಿತ್‌ಗೆ ಸಿನಿಮಾ ಮೇಲೆ ಎಷ್ಟು ಒಲವು ನೋಡಿ..! | Filmibeat Kannada

ನಟಿ ರಾಧಿಕಾ ಪಂಡಿತ್ ಈಗ ತುಂಬು ಗರ್ಭಿಣಿ ಆಗಿದ್ದಾರೆ. ಡಿಸೆಂಬರ್ ವೇಳೆಗೆ ಯಶ್ - ರಾಧಿಕಾ ಪಂಡಿತ್ ತಂದೆ ತಾಯಿ ಆಗಲಿದ್ದಾರೆ. ಗರ್ಭಿಣಿ ಆಗಿದ್ದೇನೆ ಎಂದು ಮನೆಯಲ್ಲಿ ಸುಮ್ಮನೆ ಕೂರದೆ ಸಿನಿಮಾ ಕೆಲಸದಲ್ಲಿ ಅವರು ತೊಡಗಿದ್ದಾರೆ.

ಹೌದು, ತುಂಬು ಗರ್ಭಿಣಿ ಆಗಿರುವ ರಾಧಿಕಾ ಪಂಡಿತ್ ಸದ್ಯ ಡಬ್ಬಿಂಗ್ ಮಾಡಿದ್ದಾರೆ. ಅವರ ಹೊಸ ಸಿನಿಮಾ 'ಆದಿ ಲಕ್ಷ್ಮಿ ಪುರಾಣ' ಚಿತ್ರದ ಡಬ್ಬಿಂಗ್ ಕೆಲಸಗಳು ಬಾಕಿ ಇದ್ದು, ಅದನ್ನು ಈಗ ಮುಗಿಸಿ ಬಂದಿದ್ದಾರೆ.

radhika pandit dubbing for aadi lakshmi purana movie

ಈ ವಿಷಯವನ್ನು ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ರಾಧಿಕಾ ''ನನ್ನ ಮೊದಲ ಸಿನಿಮಾದಿಂದ ಇಲ್ಲಿಯವರೆಗೆ ನನ್ನ ಚಿತ್ರಗಳಿಗೆ ನಾನು ಡಬ್ ಮಾಡಿದ್ದೇನೆ. ಆದರೆ, ಈ ಬಾರಿ ಡಬ್ಬಿಂಗ್ ಮಾಡಿದ್ದು ಸ್ವಲ್ಪ ವಿಭಿನ್ನವಾಗಿತ್ತು. ಅದು ಏನು ಎಂಬುದನ್ನು ನೀವೇ ಊಹೆ ಮಾಡಿ.'' ಎಂದು ಬರೆದುಕೊಂಡಿದ್ದಾರೆ.

ಕನ್ನಡದ ಬಹುತೇಕ ನಾಯಕಿಯರಿಗೆ ಬೇರೆಯವರು ಡಬ್ಬಿಂಗ್ ಮಾಡುತ್ತಾರೆ. ಆದರೆ, ರಾಧಿಕಾ ಪಂಡಿತ್ ಮೊದಲಿಂದ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡುತ್ತಾರೆ. ಅದು 'ಆದಿ ಲಕ್ಷ್ಮಿ ಪುರಾಣ' ಚಿತ್ರದಲ್ಲಿಯೂ ಇದು ಮುಂದುವರೆದಿದೆ.

radhika pandit dubbing for aadi lakshmi purana movie

'ಆದಿ ಲಕ್ಷ್ಮಿ ಪುರಾಣ' ರಾಧಿಕಾ ಪಂಡಿತ್ ಹಾಗೆ ನಿರೂಪ್ ಭಂಡಾರಿ ಅಭಿನಯದ ಹೊಸ ಸಿನಿಮಾವಾಗಿದೆ. ರಾಕ್ ಲೈನ್ ವೆಂಕಟೇಶ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ಪ್ರಿಯಾ ನಿರ್ದೇಶನ ಮಾಡುತ್ತಿದ್ದಾರೆ.

More from Filmibeat

English summary
Kannada actress Radhika Pandit for 'Aadi Lakshmi Purana' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X