ತಂದೆಯಾದ ಯಶ್ : ಮನೆಗೆ ಬಂದ ಮಹಾಲಕ್ಷ್ಮಿ
ಇಂದು ಸ್ಯಾಂಡಲ್ ವುಡ್ ನ ಲವ್ಲಿ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಜೀವನದ ಮಹತ್ವದ ದಿನ. ಕಾರಣ ಈ ತಾರಾ ಜೋಡಿ ಈಗ ಅಪ್ಪ ಅಮ್ಮನಾಗಿದ್ದಾರೆ.
ನಟಿ ರಾಧಿಕ ಪಂಡಿತ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಯಶ್ ಮನೆಗೆ ಮಹಾಲಕ್ಷ್ಮಿಯ ಆಗಮನವಾಗಿದೆ. ಇಂದು ಬೆಳಗ್ಗೆ 6.20ರ ಸುಮಾರಿಗೆ ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯಲ್ಲಿ ಮಗುವಿನ ಜನನ ಆಗಿದೆ.
ಯಶ್ ಅವರಿಗೆ ಹೆಣ್ಣು ಮಗು ಬೇಕು ಎಂಬ ಆಸೆ ಇದ್ದರೆ, ರಾಧಿಕಾಗೆ ಗಂಡು ಮಗು ಬೇಕು ಎಂಬ ಬಯಕೆ ಇತ್ತು. ಆದರೆ, ಇದರಲ್ಲಿ ಅಣ್ತಮ್ಮ ಗೆದ್ದಿದ್ದಾರೆ. ಈ ಜೋಡಿ ಹೆಣ್ಣು ಕೂಸಿಗೆ ತಂದೆ ತಾಯಿ ಆಗಿದ್ದಾರೆ. ಜೂನಿಯರ್ ರಾಧಿಕಾ ಪಂಡಿತ್ ಆಗಮನವಾಗಿದೆ.

ಯಶ್ ಅಭಿಮಾನಿಗಳು 'ಕೆಜಿಎಫ್' ಸಿನಿಮಾದ ಬರುವಿಕೆಗಾಗಿ ಕಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈಗ ಮತ್ತೊಂದು ಸಿಹಿ ಸುದ್ದಿ ಅವರಿಗೆ ಸಿಕ್ಕಿದೆ. ಅಂದಹಾಗೆ, ಯಶ್ ಬದುಕಿನ ಮಹತ್ವದ ಸಿನಿಮಾ 'ಕೆಜಿಎಫ್' ಡಿಸೆಂಬರ್ 21ರಂದು ಬಿಡುಗಡೆಯಾಗುತ್ತಿದೆ.
English summary
Kannada actress Radhika Pandit give birth to baby girl.


Click it and Unblock the Notifications