For Quick Alerts
  ALLOW NOTIFICATIONS  
  For Daily Alerts

  ರಾಧಿಕಾ ಪಂಡಿತ್ ಮಡಿಲಿಗೆ ಶಿವಣ್ಣ, ಸೂರಿ ಕಡ್ಡಿಪುಡಿ

  |

  ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿರುವ 'ಅಣ್ಣಾ ಬಾಂಡ್' ನಂತರ ನಿರ್ದೇಶಕ ಸೂರಿ, ತಮ್ಮ ಮುಂದಿನ ಪ್ರಾಜೆಕ್ಟ್ 'ಕಡ್ಡಿಪುಡಿ' ಚಿತ್ರೀಕರಣಕ್ಕೆ ಸಿದ್ಧರಾಗಿದ್ದಾರೆ. ಈ ಮೊದಲು ಸುದ್ದಿ ಹಬ್ಬಿದಂತೆ ಕಟ್ಟಿಪುಡಿ ನಾಯಕಿ ರಮ್ಯಾ ಅಥವಾ ಯಾವುದೋ ಬಾಲಿವುಡ್ ನಾಯಕಿ ಅಲ್ಲ, ಅಚ್ಚಕನ್ನಡತಿ ರಾಧಿಕಾ ಪಂಡಿತ್. ಸದ್ಯಕ್ಕೆ ಯಶ್ ಜೊತೆ ಡ್ರಾಮಾದಲ್ಲಿ ಬಿಜಿಯಾಗಿರುವ ರಾಧಿಕಾ, ನಂತರ ಕಡ್ಡಿಪುಡಿಗೆ ಕೈಯೊಡ್ಡಲಿದ್ದಾರೆ.

  ಈ ಚಿತ್ರದ ಮುಹೂರ್ತದ ದಿನಾಂಕವಿನ್ನೂ ಪಕ್ಕಾ ಆಗಿಲ್ಲ. ಆದರೆ, ಜೂನ್ ಅಥವಾ ಜುಲೈನಲ್ಲಿ ನಡೆಯಲಿದೆ ಎಂದಿದ್ದಾರೆ ಸೂರಿ. ಅವರೀಗ ಸಿದ್ಧವಾಗಿರುವ ಕಡ್ಡಿಪುಡಿಗೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುವುದರಲ್ಲಿ ನಿರತರಾಗಿದ್ದಾರೆ. ಶಿವರಾಜ್ ಕುಮಾರ್ ನಾಯಕತ್ವ ಪಕ್ಕಾ ಆಗಿರುವ ಈ ಚಿತ್ರಕ್ಕೀಗ ನಾಯಕಿ ರಾಧಿಕಾ ಪಂಡಿತ್ ಕೂಡ ಪಕ್ಕಾ ಆಗಿದ್ದಾರೆ. ಇನ್ನು ಸೂರಿ ಚಿತ್ರದ ಶಾಶ್ವತ ನಟ ರಂಗಾಯಣ ರಘು ಇದ್ದೇ ಇರುತ್ತಾರೆ.

  ಶಿವಣ್ಣನಂತಹ ಹಿರಿಯ ನಟರನ್ನು ಮೊದಲಬಾರಿಗೆ ನಿರ್ದೇಶಿಸುತ್ತಿರುವ ಸೂರಿಗೆ ಸಹಜವಾಗಿಯೇ ಜವಾಬ್ಧಾರಿ ಹೆಚ್ಚಾಗಿದೆ. ದರ್ಶನ್ ನಾಯಕರಾಗಿ ನಟಿಸಬೇಕಿದ್ದ ಕೆಂಡ ಸಂಪಿಗೆ ಅದ್ಯಾಕೋ ಸೈಡ್ ಗೆ ಮಲಗಿದೆ. ಇದೀಗ ಸ್ವಯಂವರ ಚಂದ್ರು ನಿರ್ಮಾಣದಲ್ಲಿ ಸೂರಿಯ ಕಡ್ಡಿಪುಡಿ ಚಿತ್ರ ಸದಯದಲ್ಲೇ ಸೆಟ್ಟೇರಲಿದೆ. ಎಂದಿನಂತೆ ಹರಿಕೃಷ್ಣ ಸಂಗೀತ ಹಾಗೂ ಎಸ್. ಕೃಷ್ಣ ಛಾಯಾಗ್ರಾಹಣದಿಂದ 'ಕಡ್ಡಿಪುಡಿ' ಆಗಲಿದೆ. (ಒನ್ ಇಂಡಿಯಾ ಕನ್ನಡ)

  English summary
  Actress Radhika Pandit selected as Heroine for Duniya Soori upcoming movie Kaddipudi. Hattrick Hero Shivarajkumar is Hero for this. This is yhe first time, radhika acts with Shivanna and Soori directs Seniors like Shivarajkumar. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X