For Quick Alerts
  ALLOW NOTIFICATIONS  
  For Daily Alerts

  ಪಂಡಿತ್ ಕುಟುಂಬದ ಹೊಸ ಸದಸ್ಯನನ್ನು ಪರಿಚಯಿಸಿದ ನಟಿ ರಾಧಿಕಾ ಪಂಡಿತ್

  |

  ರಾಧಿಕ ಪಂಡಿತ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಯಶ್ ರಾಧಿಕಾ ಮಕ್ಕಳ ಜೊತೆಗೆ ರಾಧಿಕಾ ಸಹೋದರನ ಮಕ್ಕಳು ಸಹ ಮನೆಯಲ್ಲಿ ಸಂಭ್ರಮ ಹೆಚ್ಚಿಸಿದ್ದಾರೆ. ಇತ್ತೀಚಿಗಷ್ಟೆ ರಾಧಿಕಾ ಸಹೋದರ ಗೌರಂಗ್ ಪಂಡಿತ್ ಮತ್ತು ಪತ್ನಿ ಸಹನಾ ಎರಡನೇ ಮಗುವನ್ನು ಸ್ವಾಗತಿಸಿದ್ದರು. ಇದೀಗ ರಾಧಿಕಾ ತನ್ನ ಅಳಿಯನನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

  2021 ಫೆಬ್ರವರಿ ಕೊನೆಯ ವಾರದಲ್ಲಿ ಗೌರಂಗ್ ಪಂಡಿತ್ ಎರಡನೇ ಮಗುವಿನ ತಂದೆಯಾಗಿದ್ದರು. ತಂದೆಯಾದ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈಗಾಗಲೇ ಗೌರಂಗ್ ಪಂಡಿತ್ ಮತ್ತು ಪತ್ನಿ ಸಹನಾ ದಂಪತಿಗೆ ಹೆಣ್ಣು ಮಗಳಿದ್ದಾಳೆ. ಇದೀಗ ಗಂಡು ಮಗು ಆಗಮಿಸಿರುವುದು ಮನೆಯಲ್ಲಿ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ.

  ಫೋಟೋ ಜೊತೆಗೆ ಭರವಸೆಯ ಮಾತು ಹಂಚಿಕೊಂಡ ನಟಿ ರಾಧಿಕಾ ಪಂಡಿತ್ಫೋಟೋ ಜೊತೆಗೆ ಭರವಸೆಯ ಮಾತು ಹಂಚಿಕೊಂಡ ನಟಿ ರಾಧಿಕಾ ಪಂಡಿತ್

  ಮೊದಲ ಮಗಳಿಗೆ ರಿಯಾ ಎಂದು ಹೆಸರಿಡಲಾಗಿದೆ. ಗೌರಂಗ್ ಎರಡನೇ ಮಗುವಿಗೆ ಆರವ್ ಎಂದು ನಾಮಕರಣ ಮಾಡಲಾಗಿದೆ. ರಾಧಿಕಾ ತನ್ನ ಮುದ್ದು ಅಳಿಯ ಆರವ್ ಪಂಡಿತ್ ನಗುತ್ತಿರುವ ಫೋಟೋವನ್ನು ಹಂಚಿಕೊಳ್ಳುವ ಜೊತೆಗೆ ಎಲ್ಲರೂ ಹೆಲೋ ಹೇಳಿ ಎಂದು ರಾಧಿಕಾ ಬರೆದುಕೊಂಡಿದ್ದಾರೆ.

  "ಪಂಡಿತ್ ಕುಟುಂಬದ ಪುಟ್ಟ ಮನುಷ್ಯನನ್ನು ಪರಿಚಯಿಸುತ್ತಿದ್ದೀನಿ. 4 ತಿಂಗಳ ಮಗು. ನನ್ನ ಲಿಲ್ ಸಹೋದರ ಗೌರಂಗ್ ಅವರ ಲಿಲ್ ಮಗ. ಗೊಲ್ಲು ಕೂಡ ಇಷ್ಟು ಮುದ್ದಾಗಿ ಇರಲಿಲ್ಲ. ಆರವ್ ಗೆ ಹೆಲೋ ಹೇಳಿ. ನಾವು ತುಂಬಾ ಇಷ್ಟಪಡುತ್ತೀವಿ" ಎಂದು ಹೇಳಿದ್ದಾರೆ.

  Radhika Pandit Introduce her brother son Aarav Pandit
  ಇಂದಿರಾಗಾಂಧಿ ಕುರಿತ ಚಿತ್ರವನ್ನು ನನ್ನಷ್ಟು ಯಾರೂ ಚೆನ್ನಾಗಿ ಡೈರೆಕ್ಟ್ ಮಾಡಲ್ಲ | Filmibeat Kannada

  ರಾಧಿಕಾ ಸಹೋದರ ಗೌರಂಗ್ ಮತ್ತು ಸಹನಾ ದಂಪತಿ ವಿದೇಶದಲ್ಲಿ ನೆಲೆಸಿದ್ದಾರೆ. ಇತ್ತೀಚಿಗೆ ಅಲ್ಲಿಯೇ ಮಗುವಿನ ತೊಟ್ಟಿಲ ಶಾಸ್ತ್ರ ಮಾಡಿದ್ದರು. ಮಗನ ತೊಟ್ಟಿಲ ಶಾಸ್ತ್ರದ ವಿಡಿಯೋವನ್ನು ಸಹನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

  English summary
  Actress Radhika Pandit Introduce her brother' son Aarav Pandit.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X