For Quick Alerts
  ALLOW NOTIFICATIONS  
  For Daily Alerts

  'ಅತ್ತೆ' ಆಗುತ್ತಿರುವ ಯಶ್ ತಂಗಿ ನಂದಿನಿ ಸಂತಸಕ್ಕೆ ಪಾರವೇ ಇಲ್ಲ.!

  By Harshitha
  |
  ಯಶ್ ರಾಧಿಕಾ ಪಂಡಿತ್ ಕೊಟ್ಟ ಗುಡ್ ನ್ಯೂಸ್ ಗೆ ಯಶ್ ತಂಗಿ ಫುಲ್ ಖುಷ್ | Filmibeat Kannada

  ಮನೆಗೊಂದು ಪುಟ್ಟ ಕಂದಮ್ಮನ ಆಗಮನ ಆಗುತ್ತೆ ಅಂದ್ರೆ ಯಾರಿಗ್ತಾನೆ ಖುಷಿ ಆಗಲ್ಲ ಹೇಳಿ...

  ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಸಿಹಿ ಸುದ್ದಿ ಕೊಟ್ಟಿರುವುದರಿಂದ ಇಡೀ ಯಶ್ ಕುಟುಂಬ ಇಂದು ಸಂತಸ.. ಸಡಗರ.. ಸಂಭ್ರಮದಲ್ಲಿ ತೇಲಾಡುತ್ತಿದೆ.

  ಒಂದುವರೆ ವರ್ಷಗಳ ಹಿಂದೆ... ಅಂದ್ರೆ 2016 ಡಿಸೆಂಬರ್ ತಿಂಗಳಲ್ಲಿ ಮದುವೆ ಆಗಿದ್ದ ರಾಕಿಂಗ್ ಸ್ಟಾರ್ ಯಶ್-ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ಇದೀಗ ಗುಡ್ ನ್ಯೂಸ್ ಕೊಟ್ಟಿದ್ದಾರೆ.

  'KGF' ಕಥೆ ಬಿಟ್ಟಾಕಿ 'YGF' ಆದ ರಾಕಿಂಗ್ ಸ್ಟಾರ್'KGF' ಕಥೆ ಬಿಟ್ಟಾಕಿ 'YGF' ಆದ ರಾಕಿಂಗ್ ಸ್ಟಾರ್

  ತಾಯಿ ಆಗುತ್ತಿರುವ ವಿಚಾರವನ್ನ ನಟಿ ರಾಧಿಕಾ ಪಂಡಿತ್ ಫೇಸ್ ಬುಕ್ ನಲ್ಲಿ ಖಚಿತ ಪಡಿಸಿದ್ದಾರೆ. 'ನಾವೀಗ ಮೂವರು' ಎನ್ನುವ ಮೂಲಕ ಗರ್ಭಿಣಿ ಆಗಿರುವ ವಿಷಯವನ್ನ ನಟಿ ರಾಧಿಕಾ ಪಂಡಿತ್ ಬಹಿರಂಗ ಪಡಿಸಿದ್ದಾರೆ.

  ಇದು ಸಹಜವಾಗಿ ಯಶ್ ಸಹೋದರಿ ನಂದಿನಿಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ. 'ಅತ್ತೆ' ಆಗುತ್ತಿರುವ ಸಂತಸವನ್ನ ನಂದಿನಿ ರಾಹುಲ್ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

  Radhika Pandit is expecting her first child: Yash sister Nandini is super happy

  ಅಮ್ಮ ಆಗ್ತಿದ್ದಾರೆ ಯಶ್ ಮಡದಿ ರಾಧಿಕಾ ಪಂಡಿತ್ಅಮ್ಮ ಆಗ್ತಿದ್ದಾರೆ ಯಶ್ ಮಡದಿ ರಾಧಿಕಾ ಪಂಡಿತ್

  ''ನಾನು 'ಅತ್ತೆ' ಆಗುತ್ತಿರುವೆ. ನನ್ನ ಸಂತಸವನ್ನ ಪದಗಳಿಂದ ವರ್ಣಿಸಲು ಅಸಾಧ್ಯ. ಅಣ್ಣ ಹಾಗೂ ಅತ್ತಿಗೆಗೆ ನನ್ನ ಶುಭಾಶಯಗಳು'' ಅಂತ ನಂದಿನಿ ರಾಹುಲ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

  ಸದ್ಯ ನಾಲ್ಕು ತಿಂಗಳ ಗರ್ಭಿಣಿ ಆಗಿರುವ ರಾಧಿಕಾ ಪಂಡಿತ್ ಗೆ ಡಿಸೆಂಬರ್ ನಲ್ಲಿ ಹೆರಿಗೆ ಆಗುವ ಸಾಧ್ಯತೆ ಇದೆ. ಹಾಗಂತ ಯಶ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕನ್ಫರ್ಮ್ ಮಾಡಿದ್ದಾರೆ.

  ಯಶ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿರುವುದು ಅಭಿಮಾನಿಗಳಿಗೂ ಹರ್ಷ ನೀಡಿದೆ. ಯಶ್ ಹಾಗೂ ರಾಧಿಕಾ ಪಂಡಿತ್ ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

  English summary
  Kannada Actress Radhika Pandit is expecting her first child: Yash sister Nandini is super happy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X