ರಾಧಿಕಾ ಪಂಡಿತ್ ಹೊಸ ಜರ್ನಿ; ಪುತ್ರ ಯಥರ್ವ್ ಬರ್ತ್‌ಡೇ ಝಲಕ್ ಜೊತೆ ಶುರು

ಮದುವೆ ಬಳಿಕ ನಟಿ ರಾಧಿಕಾ ಪಂಡಿತ್ ಸಿನಿಮಾಗಳಿಂದ ವಿರಾಮ ಪಡೆದಿದ್ದಾರೆ. ಮದುವೆ ಬಳಿಕ ಆಕೆ ನಟಿಸಿದ ಏಕೈಕ ಸಿನಿಮಾ 'ಆದಿಲಕ್ಷ್ಮಿ ಪುರಾಣ'. ಸದ್ಯ ಮಕ್ಕಳ ಲಾಲಾನೆ ಪಾಲನೆಯಲ್ಲಿ ರಾಧಿಕಾ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗೆ ಯಥರ್ವ್ ಬರ್ತ್‌ಡೇ ಪಾರ್ಟಿಯಲ್ಲಿ ರಾಕಿಂಗ್ ಜೋಡಿ ಬಿಂದಾಸ್ ಆಗಿ ಕಾಣಿಸಿಕೊಂಡಿದ್ದರು.

ಅಕ್ಟೋಬರ್ 30ರಂದು ಯಥರ್ವ್ 5ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿತ್ತು. ಖಾಸಗಿ ಹೋಟೆಲ್‌ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಯಶ್ ಸ್ನೇಹಿತರು, ಕುಟುಂಬ ಸದಸ್ಯರು ಪಾರ್ಟಿಯಲ್ಲಿ ಭಾಗಿ ಆಗಿ ಎಂಜಾಯ್ ಮಾಡಿದ್ದಾರೆ. ಪ್ರತಿವರ್ಷ ಮಕ್ಕಳ ಹುಟ್ಟುಹಬ್ಬವನ್ನು ಬೇರೆ ಬೇರೆ ಥೀಮ್‌ನಲ್ಲಿ ಯಶ್‌-ರಾಧಿಕಾ ಆಚರಿಸುತ್ತಾ ಬರ್ತಿದ್ದಾರೆ. ಈ 'ಫಾಸ್ಟ್ ಅಂಡ್ ಫ್ಯೂರಿಯಸ್' ಥೀಮ್‌ನಲ್ಲಿ ಯಥರ್ವ್ ಬರ್ತ್‌ಡೇ ಪಾರ್ಟಿ ಕಳೆಕಟ್ಟಿತ್ತು.

Radhika pandit launches her YouTube channel and post son yatharv birthday video

ರಾಧಿಕಾ ಪಂಡಿತ್ ಪೋಷಕರು, ಕೆವಿಎನ್ ಚಿತ್ರದ ನಿರ್ಮಾಣ ಸಂಸ್ಥೆಯ ವೆಂಕಟ್ ಕೋನಂಕಿ ಸೇರಿದಂತೆ ಹಲವರು ಪಾರ್ಟಿಗೆ ಹಾಜರಾಗಿದ್ದರು. ಐರಾ- ಯಥರ್ವ್ ಸ್ನೇಹಿತರ ಜೊತೆ ಆಟ ಆಡಿ ಕುಣಿದು ಸಂಭ್ರಮಿಸಿರುವುದನ್ನು ನೋಡಬಹುದು. ಜೀನ್ಸ್- ಟೀಶರ್ಟ್‌ನಲ್ಲಿ ಯಶ್‌- ರಾಧಿಕಾ ದಂಪತಿ ಮಿಂಚಿದ್ದಾರೆ.

ಪಾರ್ಟಿಯಲ್ಲಿ 'ಟಗರು ಬಂತು ಟಗರು' ಹಾಡಿಗೆ ಯಶ್ ಬಿಂದಾಸ್ ಸ್ಟೆಪ್ಸ್ ಹಾಕಿದ್ದ ವೀಡಿಯೋ ಕಳೆದೊಂದು ವಾರದಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದೀಗ ಇಡೀ ಪಾರ್ಟಿಯ ಸುಂದರ ಕ್ಷಣಗಳ ಝಲಕ್ ಅನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ತಮ್ಮದೇ ಹೊಸ ಯೂಟ್ಯೂಬ್ ಚಾನಲ್ ತೆರೆದು ವೀಡಿಯೋ ಶೇರ್ ಮಾಡಿದ್ದಾರೆ. ಸದ್ಯ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.

ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮಾಡಿ ಯಥರ್ವ್ ಬರ್ತ್‌ಡೇ ವಿಡಿಯೋಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕೆಲವರು ಯಶ್ ಅವರ ಪೋಷಕರು ಎಲ್ಲಿ? ಪಾರ್ಟಿಯಲ್ಲಿ ಕಾಣಿಸ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಮ್‌ನಲ್ಲಿ ಮಾತ್ರ ಹೆಚ್ಚು ಆಕ್ಟೀವ್ ಆಗಿದ್ದರು. ಇದೀಗ ದಿಢೀರನೆ ಯೂಟ್ಯೂಬ್ ಚಾನಲ್ ತೆರೆದಿರುವುದು ಅಚ್ಚರಿ ಮೂಡಿಸಿದೆ.

Radhika pandit launches her YouTube channel and post son yatharv birthday video

ಇನ್ನು ಮುಂದೆ ತಮ್ಮ ದೈನಂದಿಕ ಜೀವನದ ಇಂಟ್ರೆಸ್ಟಿಂಗ್ ಸಂಗತಿಗಳ ಬಗ್ಗೆ ವೀಡಿಯೋ ಮಾಡಿ ಹಂಚಿಕೊಳ್ಳುತ್ತಾರಾ ಕಾದು ನೋಡಬೇಕಿದೆ. ಒಟ್ಟಾರೆ ಯೂಟ್ಯೂಬ್ ಮೂಲಕ ಅಭಿಮಾನಿಗಳಿಗೆ ಸ್ಯಾಂಡಲ್‌ವುಡ್ ಸಿಂಡ್ರೆಲಾ ಮತ್ತಷ್ಟು ಹತ್ತರವಾಗುವ ಸುಳಿವು ಸಿಗುತ್ತಿದೆ. ಇನ್ನು ಯಥರ್ವ್ ಬರ್ತ್‌ಡೇ ಸೆಲೆಬ್ರೇಷನ್ ಬೆನ್ನಲ್ಲೇ ಯಶ್ ಮುಂಬೂಗೆ ಪಯಣ ಬೆಳೆಸಿದ್ದಾರೆ.

ಸದ್ಯ ವಾಣಿಜ್ಯ ನಗರಿಯಲ್ಲಿ 'ಟಾಕ್ಸಿಕ್' ಚಿತ್ರದ ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ಶುರುವಾಗಿದೆ. ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಯಶ್ ಜೊತೆ ಬಾಲಿವುಡ್ ನಟಿ ಕಿಯಾರಾ ಅದ್ವಾನಿ ಕೂಡ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಸ್ವತಃ ಯಶ್ 'ಟಾಕ್ಸಿಕ್' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ನಯನತಾರಾ, ಕಿಯಾರಾ ಅದ್ವಾನಿ, ತಾರಾ ಸುತಾರಿಯಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಮುಂದಿನ ವರ್ಷ ಕೊನೆಗೆ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ಮತ್ತೊಂದು ಕಡೆ 'ರಾಮಾಯಣ' ಚಿತ್ರವನ್ನು ಯಶ್ ನಿರ್ಮಿಸಿ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

'ಟಾಕ್ಸಿಕ್' ಚಿತ್ರದ ಸೆಕೆಂಡ್ ಶೆಡ್ಯೂಲ್‌ನಲ್ಲಿ ಬಹಳ ಕ್ರೂಷಿಯಲ್ ಸನ್ನಿವೇಶಗಳನ್ನು ಸೆರೆಹಿಡಿಯಲಾಗುತ್ತಿದೆ. 'ಅವತಾರ್' ರೀತಿಯ ಹಾಲಿವುಡ್ ಚಿತ್ರಗಳಿಗೆ ಕೆಲಸ ಮಾಡಿರುವ ಸ್ಟಂಟ್ ಡೈರೆಕ್ಟರ್ ಜೆಜೆ ಪೆರ್ರಿ 'ಟಾಕ್ಸಿಕ್' ತಂಡ ಸೇರಿಕೊಂಡಿದ್ದಾರೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೂಡ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ.

ಏಪ್ರಿಲ್ 10ಕ್ಕೆ 'ಟಾಕ್ಸಿಕ್' ಸಿನಿಮಾ ರಿಲೀಸ್ ಎಂದು ಹಿಂದೆ ಘೋಷಿಸಲಾಗಿತ್ತು. ಆದರೆ ಚಿತ್ರೀಕರಣ ತಡವಾಗಿ ಆರಂಭವಾಯಿತು. ಹಾಗಾಗಿ ಸಹಜವಾಗಿಯೇ ರಿಲೀಸ್ ದಿನಾಂಕ ಮುಂದೂಡಲಾಗುತ್ತಿದೆ.

More from Filmibeat

English summary
Actress Radhika pandit shares A glimpse into Yatharv's birthday video in her YouTube channel;
Read more about: yash radhika pandit toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X