»   » ಮದುವೆ ಬಳಿಕ ರಾಧಿಕಾ ಪಂಡಿತ್ ಬರೋಬ್ಬರಿ 20 ಕಥೆಗಳನ್ನ ಕೇಳಿದ್ದರಂತೆ.!

ಮದುವೆ ಬಳಿಕ ರಾಧಿಕಾ ಪಂಡಿತ್ ಬರೋಬ್ಬರಿ 20 ಕಥೆಗಳನ್ನ ಕೇಳಿದ್ದರಂತೆ.!

Posted By:
Subscribe to Filmibeat Kannada

ಕನ್ನಡದ ಪ್ರತಿಭಾವಂತ ನಟಿ ರಾಧಿಕಾ ಪಂಡಿತ್ ಮದುವೆಯ ಬಳಿಕ ಸಿನಿಮಾಗಳಿಂದ ಸ್ವಲ್ಪ ದೂರ ಉಳಿದಿದ್ದರು. ಗಂಡ, ಮನೆ, ಸಂಸಾರ ಅಂತ ಇದ್ದ ರಾಧಿಕಾ ಅವರನ್ನು ಅಭಿಮಾನಿಗಳು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದರು. ಆದ್ರೀಗ, ರಾಧಿಕಾ ಮತ್ತೆ ಸಿನಿಮಾ ಮಾಡುತ್ತಿದ್ದಾರೆ.

ಹೊಸ ಮನೆ ಖರೀದಿಸಿದ ಯಶ್ - ರಾಧಿಕಾ ಪಂಡಿತ್ ಜೋಡಿ

ರಾಧಿಕಾ ಪಂಡಿತ್ ಮದುವೆಯ ಬಳಿಕ ಒಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ವಿಶೇಷ ಅಂದರೆ ಈ ಚಿತ್ರಕ್ಕೂ ಮುಂಚೆ ರಾಧಿಕಾ ಕೇಳಿದ ಕಥೆಗಳ ಸಂಖ್ಯೆ ಬರೋಬ್ಬರಿ 20ಕ್ಕೂ ಹೆಚ್ಚಂತೆ. ಯಾವಾಗಲು ಕಥೆ ಮತ್ತು ಪಾತ್ರ ಎರಡನ್ನೇ ನೋಡಿ ಸಿನಿಮಾ ಆಯ್ಕೆ ಮಾಡುವ ರಾಧಿಕಾ ಪಂಡಿತ್ ಮದುವೆ ಬಳಿಕ ಕೂಡ ಅದನ್ನೇ ಮುಂದುವರೆಸಿದ್ದಾರೆ.

Radhika Pandit listen to 20 stories after her marriage.

ಅಷ್ಟೊಂದು ಕಥೆ ಕೇಳಿದ್ದರು ಅದರಲ್ಲಿ ಯಾವುದೆ ಕಥೆಗಳು ಸಿನಿಮಾ ಮಾಡುವಷ್ಟು ಥ್ರಿಲ್ ನೀಡುತ್ತಿರಲಿಲ್ಲವಂತೆ. ಬಳಿಕ ಮಣಿರತ್ನಂ ಶಿಷ್ಯೆ ನಿರ್ದೇಶಕಿ ಪ್ರಿಯಾ ಅವರ ಕಥೆ ರಾಧಿಕಾಗೆ ತುಂಬ ಇಷ್ಟವಾಗಿದ್ದು, ಈ ಚಿತ್ರದಲ್ಲಿ ನಟಿಸುವ ಮನಸ್ಸು ಮಾಡಿದ್ದಾರೆ.

'ಯಶ್ ಜೊತೆ ಮದುವೆ ಆಗ್ಲಾ' ಎಂದ ಯುವತಿಗೆ ರಾಧಿಕಾ ಕೊಟ್ಟ ಉತ್ತರ

Radhika Pandit listen to 20 stories after her marriage.

ಅಂದ್ಹಾಗೆ, ರಾಧಿಕಾ ಪಂಡಿತ್ ಅವರ ಈ ಹೊಸ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಾಧಿಕಾಗೆ ನಟ ನಿರೂಪ್ ಭಂಡಾರಿ ಜೋಡಿಯಾಗಿದ್ದು, ಸಪ್ಟೆಂಬರ್ 15ಕ್ಕೆ ಚಿತ್ರದ ಮುಹೂರ್ತ ನಡೆಯಲಿದೆ.

English summary
Kannada Actress Radhika Pandit listen to 20 stories after her marriage.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada