ಕೊರೊನಾ ಲಾಕ್ ಡೌನ್ ನಿಂದ ರಾಧಿಕಾ ಪಂಡಿತ್ ಇದೆಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ

ಕೊರೊನಾ ಲಾಕ್ ಡೌನ್ ನಿಂದ ಎಲ್ಲರೂ ಮನೆಯಲ್ಲಿಯೇ ಇರುವಂತಾಗಿದೆ. ಪ್ರವಾಸ, ಟ್ರಕ್ಕಿಂಗ್, ಸ್ನೇಹಿತರ ಭೇಟಿಯಾಗುವುದು, ಪಾರ್ಟಿ ಸೇರಿದ್ದಂತೆ ಸಾಕಷ್ಟನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಲಾಕ್ ಡೌನ್ ಸಡಿಲಿಕೆಯಾದರೂ ಕೊರೊನಾ ಭಯ ದೂರವಾಗಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

Recommended Video

ಅಭಿಮಾನಿಗಳೊಂದಿಗೆ ಖುಷಿ ವಿಚಾರ ಹಂಚಿಕೊಂಡ ಸುಮಲತಾ | Filmibeat Kannada

ಇನ್ನೂ ಸಿನಿ ಲೆಸೆಬ್ರಿಟಿಗಳು ಶೂಟಿಂಗ್, ಔಟಿಂಗ್ ಅಂತ ಮನೆಯಿಂದ ಹೊರಗೆಯೇ ಇರುತ್ತಿದ್ದರು. ಆದರೀಗ ನಾಲ್ಕು ತಿಂಗಳಿಂದ ಮನೆಯಲ್ಲಿ ಇರುವಂತಾಗಿದೆ. ಸ್ಯಾಂಡಲ್ ವುಡ್ ನಟಿ ರಾಧಿಕಾ ಪಂಡಿತ್ ಸಹ ಸಾಕಷ್ಟು ವಿಷಯವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ರಾಧಿಕಾ ಏನೆ ಮಿಸ್ ಮಾಡಿಕೊಳ್ಳುತ್ತಿದ್ದಾರೆ ನೋಡಿ

ರಾಧಿಕಾ ಏನೆ ಮಿಸ್ ಮಾಡಿಕೊಳ್ಳುತ್ತಿದ್ದಾರೆ ನೋಡಿ

"ನಾನು ಸಮುದ್ರವನ್ನು ಮಿಸ್ ಮಾಡಿಕೊಳ್ಳುತ್ತಿದ್ದೀನಿ. ಮಕ್ಕಳನ್ನು ಆಟವಾಡಲು ಪಾರ್ಕ್ ಗೆ ಕರೆದುಕೊಂಡು ಹೋಗುವುದನ್ನು ಮಿಸ್ ಮಡಿಕೊಳ್ಳುತ್ತಿದ್ದೀನಿ, ಸ್ನೇಹಿತರನ್ನು ಭೇಟಿಯಾಗುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೀನಿ. ಇನ್ನೂ ಸಾಕಷ್ಟು ವಿಷಯಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೀನಿ. ಆದರೆ ಈ ಸಮಯದಲ್ಲಿ ನಾವು ಸುರಕ್ಷಿತವಾಗಿರಬೇಕು ಮತ್ತು ಜವಾಬ್ದಾರಿಯುತವಾಗಿರಬೇಕು. ಜೀವನ ಸಹಜಸ್ಥಿತಿಗೆ ಬಂದ ನಂತರ ನಾವು ಇದನ್ನೆಲ್ಲ ಮಾಡಬಹುದು. ನೀವು ಏನು ಮಿಸ್ ಮಾಡಿಕೊಳ್ಳುತ್ತಿದ್ದೀರಿ?" ಎಂದು ಅಭಿಮಾನಿಗಳಿಗೆ ಕೇಳಿದ್ದಾರೆ.

ರಾಧಿಕಾ ಪ್ರಶ್ನೆಗೆ ಅಭಿಮಾನಿಗಳ ಉತ್ತರ

ರಾಧಿಕಾ ಪ್ರಶ್ನೆಗೆ ಅಭಿಮಾನಿಗಳ ಉತ್ತರ

ರಾಧಿಕಾ ಪಂಡಿತ್ ಪ್ರಶ್ನೆಗೆ ಅಭಿಮಾನಿಗಳು ಐರಾ ಫೋಟೋ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಆದಷ್ಟು ಬೇಗ ಐರಾ ಫೋಟೋ ಶೇರ್ ಮಾಡಿ ಎಂದು ಹೇಳುತ್ತಿದ್ದಾರೆ. ಇನ್ನೂ ಜೂ.ಯಶ್ ಫೋಟೋ ಹಾಕಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಕೆಲವರು ಕೆಜಿಎಫ್-2 ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ ರಾಧಿಕಾ

ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ ರಾಧಿಕಾ

ರಾಧಿಕಾ ಪಂಡಿತ್ ಏನೆಲ್ಲ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳುವ ಜೊತೆಗೆ ಒಂದಿಷ್ಟು ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಮುದ್ರ ತೀರದಲ್ಲಿರುವ ಫೋಟೋ, ಮಗಳ ಜೊತೆ ಆಡುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ. ಆಗಾಗ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಮಕ್ಕಳ ಫೋಟೋ ಶೇರ್ ಮಾಡುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗುತ್ತೆ.

ಸದ್ಯದಲ್ಲೇ ಬಣ್ಣಹಚ್ಚಲಿದ್ದಾರೆ ರಾಧಿಕಾ

ಸದ್ಯದಲ್ಲೇ ಬಣ್ಣಹಚ್ಚಲಿದ್ದಾರೆ ರಾಧಿಕಾ

ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ರಾಧಿಕಾ, ಯಾವಾಗ ಬಣ್ಣಹಚ್ಚುತ್ತೀರಿ ಎಂದು ಕೇಳಿದ ಪ್ರಶ್ನೆಗೆ, ಸದ್ಯದಲ್ಲೇ ಚಿತ್ರರಂಗಕ್ಕೆ ಮರಳುವುದಾಗಿ ಹೇಳಿದ್ದಾರೆ. ಇನ್ನೂ ರಾಧಿಕಾ ಮೂರನೆ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಎನ್ನುವ ಅನುಮಾನ ಕಾಡಿತ್ತು. ಆದರೆ ಅಭಿಮಾನಿಗಳ ಅನುಮಾನಕ್ಕೆ ಉತ್ತರ ನೀಡಿ ಗಾಳಿ ಸುದ್ದಿಗೆ ಬ್ರೇಕ್ ಹಾಕಿದ್ದರು.

More from Filmibeat

English summary
Actress Radhika Pandit says 'missing the ocean, taking my baby's out to the park to play, and so much more'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X