ರಾಧಿಕಾ ಪಂಡಿತ್-ನಿರೂಪ್ ಭಂಡಾರಿ ಅಭಿನಯದ ಚಿತ್ರಕ್ಕೆ ಹೆಸರು ಇಟ್ಟಾಯ್ತು.!

By Harshitha

ರಾಕಿಂಗ್ ಸ್ಟಾರ್ ಯಶ್ ರನ್ನ ಮದುವೆ ಆದ್ಮೇಲೆ ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್, ನಟ ನಿರೂಪ್ ಭಂಡಾರಿ ಜೊತೆಗೆ ತೆರೆ ಹಂಚಿಕೊಂಡರು. ಸದ್ದಿಲ್ಲದೆ, ರಾಧಿಕಾ ಪಂಡಿತ್-ನಿರೂಪ್ ಭಂಡಾರಿ ಅಭಿನಯದ ಚಿತ್ರದ ಶೂಟಿಂಗ್ ಕೂಡ ಮುಗಿದು ಹೋಗಿದೆ.

ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇರುವ ಈ ಚಿತ್ರಕ್ಕೆ ಇದೀಗ ಹೆಸರಿಡಲಾಗಿದೆ. ರಾಧಿಕಾ ಪಂಡಿತ್-ನಿರೂಪ್ ಭಂಡಾರಿ ಕಾಂಬಿನೇಶನ್ ಇರುವ ಈ ಸಿನಿಮಾಗೆ 'ಆದಿ ಲಕ್ಷ್ಮಿ ಪುರಾಣ' ಅಂತ ಶೀರ್ಷಿಕೆ ಇಡಲಾಗಿದೆ.

ಚಿತ್ರದ ಕಥೆಗೆ 'ಆದಿ ಲಕ್ಷ್ಮಿ ಪುರಾಣ' ಟೈಟಲ್ ಸೂಟ್ ಆಗುವುದರಿಂದ ಅದನ್ನೇ ಫಿಕ್ಸ್ ಮಾಡಲಾಗಿದೆ ಅಂತಾರೆ ನಿರ್ದೇಶಕಿ ವಿ.ಪ್ರಿಯಾ. ಮಣಿರತ್ನಂ ಹಾಗೂ ಸುಹಾಸಿನಿ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದ ವಿ.ಪ್ರಿಯಾ, ಈಗಾಗಲೇ ತಮಿಳಿನಲ್ಲಿ ಎರಡು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.

ಈಗ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿರುವ ವಿ.ಪ್ರಿಯಾ, ಕಥೆ-ಚಿತ್ರಕಥೆ ಬರೆದು 'ಆದಿ ಲಕ್ಷ್ಮಿ ಪುರಾಣ' ಚಿತ್ರವನ್ನ ನಿರ್ದೇಶಿಸಿದ್ದಾರೆ. ಇದೊಂದು ಲವ್ ಸ್ಟೋರಿ ಆಗಿದ್ದು, ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ನಿರ್ದೇಶಕಿ ವಿ.ಪ್ರಿಯಾ.

Radhika Pandit-Nirup Bhandari movie titled as Aadi Lakshmi Purana

ರಾಧಿಕಾ ಪಂಡಿತ್, ನಿರೂಪ್ ಭಂಡಾರಿ ಜೊತೆಗೆ ಸೌಮ್ಯ ಜಗನ್ ಮೂರ್ತಿ, ಜೋ ಸೈಮನ್, ಯಶವಂತ್ ಶೆಟ್ಟಿ, ಭರತ್ ಕಲ್ಯಾಣ್ ಸೇರಿದಂತೆ ರಂಗಭೂಮಿ ಕಲಾವಿದರ ದಂಡು 'ಆದಿ ಲಕ್ಷ್ಮಿ ಪುರಾಣ' ಚಿತ್ರದಲ್ಲಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇರುವ ಈ ಚಿತ್ರದ ಬಿಡುಗಡೆ ದಿನಾಂಕ ಇನ್ನೂ ನಿಗದಿ ಆಗಿಲ್ಲ.

More from Filmibeat

English summary
Radhika Pandit-Nirup Bhandari movie titled as 'Aadi Lakshmi Purana'. The film is directed by V.Priya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X