ವಿಡಿಯೋ: ಹೊಸ ಗೆಳತಿಗೆ ಹಾಯ್ ಹೇಳಿದ ಐರಾ, ಮಗಳ ಮುದ್ದಾಟ ಕಂಡು ನಕ್ಕ ರಾಧಿಕಾ
ಯಶ್-ರಾಧಿಕಾ ಪಂಡಿತ್ ದಂಪತಿಯ ಮಗಳು ಐರಾ, ಪುಟ್ಟ-ಪುಟ್ಟ ಹೆಜ್ಜೆಗಳನ್ನಿಡುತ್ತಾ ನಡೆಯಲು ಆರಂಭಿಸಿದ್ದಾಳೆ. ಮಗಳ ಬೆಳವಣಿಗೆ ನೋಡುತ್ತಾ ಖುಷಿ ಪಡುತ್ತಿದ್ದಾರೆ ಈ ದಂಪತಿ.
ರಾಧಿಕಾ ಪಂಡಿತ್ ಇಂದು ತಮ್ಮ ಮಗಳ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಪುಟ್ಟ ಮಗು ಐರಾಳ ಮುಗ್ದತೆ ಕಂಡು ಮನಸ್ಸು ತುಂಬಿಬರುತ್ತದೆ.
ಪುಟ್ಟ-ಪುಟ್ಟ ಹೆಜ್ಜೆಗಳನ್ನಿಟ್ಟು ನಡೆಯುತ್ತಿರುವ ಐರಾ ತನ್ನ ನೆರಳು ನೋಡಿ ಅದಕ್ಕೆ ಹಾಯ್ ಹೇಳುತ್ತಿದ್ದಾಳೆ. ತನ್ನ ನೆರಳನ್ನು ಯಾರೊ ವ್ಯಕ್ತಿಯ ಅಥವಾ ತನ್ನಂತೆ ಪುಟ್ಟ ಮಗುವೆಂದು ಭಾವಿಸಿ ನೆರಳಿಗೆ ಹಾಯ್ ಹೇಳಿ, ನೆರಳನ್ನು ಮಾತನಾಡಿಸಲು ಯತ್ನಿಸುತ್ತಿದ್ದಾಳೆ ಐರಾ.

ರಾಧಿಕಾ ಹಂಚಿಕೊಂಡಿರುವ ಈ ಮುದ್ದಾದ ವಿಡಿಯೋಕ್ಕೆ ಹಲವಾರು ಲೈಕ್‌ಗಳು ಬಂದಿವೆ. ಸಾಕಷ್ಟು ಮಂದಿ ಐರಾಳ ಮುಗ್ದತೆಗೆ ಮನಸೋತು ಕಮೆಂಟ್ ಮಾಡಿದ್ದಾರೆ.
'ಐರಾ ವಾಕ್ ಮಾಡುವಾಗ ಆಕೆಗೆ ಹೊಸ ಗೆಳತಿ ಸಿಕ್ಕಿದ್ದಾಳೆ (ಅವಳದ್ದೇ ನೆರಳು). ಮಕ್ಕಳ ಬಗೆಗಿನ ಅದ್ಭುತ ಸಂಗತಿಯೆಂದರೆ ಅವರು ಎಲ್ಲರ ಬಗ್ಗೆಯೂ ಒಂದೇ ರೀತಿಯ ಮುಗ್ದ ಭಾವನೆ ಹೊಂದಿರುತ್ತಾರೆ. ಮಕ್ಕಳು ಯಾರನ್ನೂ ಜಡ್ಜ್ ಮಾಡುವುದಿಲ್ಲ' ಎಂದಿದ್ದಾರೆ ರಾಧಿಕಾ.
ಯಶ್-ರಾಧಿಕಾಗೆ ಇಬ್ಬರು ಮಕ್ಕಳು, ಐರಾ ಗೆ ಪುಟ್ಟ ತಮ್ಮ ಸಹ ಇದ್ದಾನೆ. ಸ್ಯಾಂಡಲ್‌ವುಡ್ ಕ್ಯೂಟ್ ಜೋಡಿಗಳಲ್ಲಿ ಒಂದು ಯಶ್-ರಾಧಿಕಾ ಜೋಡಿ.


Click it and Unblock the Notifications











