ಅನುಮಾನಪಟ್ಟವರ ಬಗ್ಗೆ ಪ್ರತಿಕ್ರಿಯೆ ನೀಡಿದ ಮಿಸಸ್ ರಾಮಾಚಾರಿ
Recommended Video
ನಟ ಯಶ್ ಪತ್ನಿ, ನಟಿ ರಾಧಿಕಾ ಪಂಡಿತ್ ಎಂದಿಗೂ ವಿವಾದ ಮಾಡಿಕೊಂಡವರಲ್ಲ. ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾಗ ಬೇಡದ ವಿಷಯಗಳಿಗೆ ರಾಧಿಕಾ ಯಾವತ್ತು ಸುದ್ದಿ ಆಗಿರಲಿಲ್ಲ. ಆದರೆ, ಇತ್ತೀಚಿಗೆ ಕೆಲವು ಸಣ್ಣ ಪುಟ್ಟ ಘಟನೆಗಳಿಂದ ಅಭಿಮಾನಿಗಳು ಅವರ ಮೇಲೆ ಬೇಸರಗೊಂಡಿದ್ದಾರೆ.
ರಾಧಿಕಾ ಪಂಡಿತ್ ತಮ್ಮ ಪುತ್ರಿ ಐರಾ ಫೋಟೋಗಳನ್ನು, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹಂಚಿಕೊಳ್ಳುತ್ತಿದ್ದಾರೆ. ಮಗಳ ಬದುಕಿನ ವಿಶೇಷ ಘಟನೆಗಳನ್ನು ಸೆರೆ ಹಿಡಿಯುತ್ತಾರೆ. ಆದರೆ, ಇದೀಗ ಐರಾಳ ಒಂದು ವಿಡಿಯೋ ಅನೇಕರ ಅಸಮಾಧಾನಕ್ಕೆ ಕಾರಣ ಆಗಿದೆ.
ಮಗಳ ಜೊತೆಗೆ ಕೊಂಕಣಿ ಮಾತನಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ರಾಧಿಕಾ ಪಂಡಿತ್ ನಿನ್ನೆ (ಅಕ್ಟೋಬರ್ 2) ಹಂಚಿಕೊಂಡಿದ್ದರು. ಆದರೆ, ಈ ವಿಡಿಯೋ ಅನೇಕರ ಅಸಮಾದಾನಕ್ಕೆ ಕಾರಣ ಆಗಿತ್ತು. ಇದೀಗ ಈ ಘಟನೆಯ ಬಗ್ಗೆ ರಾಧಿಕಾ ಪಂಡಿತ್ ಪ್ರತಿಕ್ರಿಯೆ ನೀಡಿದ್ದಾರೆ.

ತಂದೆ ಭಾಷೆ ಕನ್ನಡ, ತಾಯಿ ಭಾಷೆ ಕೊಂಕಣಿ
ಮಗಳ ಜೊತೆಗೆ ಕೊಂಕಣಿ ಮಾತನಾಡಿದ ವಿಡಿಯೋ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ''ಐರಾ ತನ್ನ ತಂದೆಯ ಮಾತೃಭಾಷೆ ಕನ್ನಡ ಹಾಗೂ ತಾಯಿಯ ಮಾತೃಭಾಷೆ ಕೊಂಕಣಿ ಎರಡಕ್ಕೂ ತುಂಬ ಚೆನ್ನಾಗಿಯೇ ಪ್ರತಿಕ್ರಿಯೆ ನೀಡುತ್ತಾಳೆ. ತಮ್ಮ ಮೇಲೆ ಅನುಮಾನ ಪಡುವವರಿಗೆ ಈ ಮಾತು.'' ಎಂದು ಬರೆದುಕೊಂಡಿದ್ದಾರೆ.

ಅಪ್ಪ, ಅಮ್ಮನ ಫೋಟೋ ಗುರುತಿಸುವ ಐರಾ
ನಿನ್ನೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಾಧಿಕಾ ಪಂಡಿತ್ ಮಗಳ ವಿಡಿಯೋವನ್ನು ಹಂಚಿಕೊಂಡಿದ್ದರು. ಅದರಲ್ಲಿ ರಾಧಿಕಾ ಕೊಂಕಣಿಯಲ್ಲಿ ಅಪ್ಪ ಎಲ್ಲಿದ್ದಾರೆ?, ಅಮ್ಮ ಎಲ್ಲಿದ್ದಾರೆ? ಎಂದರೆ ಐರಾ ಫೋಟೋದಲ್ಲಿ ಸರಿಯಾಗಿ ಗುರುತಿಸುತ್ತಿದ್ದಳು. ಈ ವಿಡಿಯೋ ತುಂಬ ಕ್ಯೂಟ್ ಆಗಿ ಇತ್ತು. ಆದರೆ, ಮಗಳ ಜೊತೆಗೆ ಕನ್ನಡದ ಬದಲು, ಕೊಂಕಣಿ ಮಾತನಾಡಿದ್ದ ರಾಧಿಕಾ ಮೇಲೆ ಸಾಕಷ್ಟು ಮಂದಿ ಬೇಸರ ವ್ಯಕ್ತ ಪಡಿಸುತ್ತಿದ್ದರು.

ಕ್ಯೂಟ್ ವಿಡಿಯೋವನ್ನು ಮೆಚ್ಚಿಕೊಂಡ ನಟಿಯರು
ಅಭಿಮಾನಿಗಳ ಪಾಸಿಟಿವ್, ನೆಗೆಟಿವ್ ಕಾಮೆಂಟ್ಸ್ ಗಳು ಒಂದು ಕಡೆ ಬಂದರೆ, ಮತ್ತೊಂದು ಕಡೆ ಸ್ಯಾಂಡಲ್ ವುಡ್ ನಟಿಯರು ಕೂಡ ಈ ವಿಡಿಯೋ ಮೆಚ್ಚಿಕೊಂಡಿದ್ದಾರೆ. ಐರಾ ಕ್ಯೂಟ್ ವಿಡಿಯೋಗೆ 'ಕೆಜಿಎಫ್' ನಟಿ ಶ್ರೀನಿಧಿ ಶೆಟ್ಟಿ ಹಾಗೂ ಆಶಿಕಾ ರಂಗನಾಥ್ ಕಾಮೆಂಟ್ ಮಾಡಿದ್ದು, 'ಸೋ ಕ್ಯೂಟ್' ಎಂದಿದ್ದಾರೆ.

ಅಂದು ಇಂಗ್ಲೀಷ್, ಇಂದು ಕೊಂಕಣಿ
ಈ ಹಿಂದೆ ಮಗಳಿಗೆ ಸಿಕ್ಕ ವಿಶೇಷವಾದ ಉಡುಗೊರೆಯನ್ನು ಹಿಡಿದು ರಾಕಿಂಗ್ ಸ್ಟಾರ್ ದಂಪತಿ ಫುಲ್ ಇಂಗ್ಲೀಷ್ ನಲ್ಲಿ ವಿವರಣೆ ನೀಡಿದ್ದರು. ಇದನ್ನು ನೋಡಿ ಅಭಿಮಾನಿಗಳು ರಾಕಿಂಗ್ ದಂಪತಿ ಬೇಸರಗೊಂಡಿದ್ದರು. ಕಾರಣ ಒಂದೇ ಒಂದು ಪದವನ್ನು ಕನ್ನಡದಲ್ಲಿ ಮಾತನಾಡದೆ ವಿಡಿಯೋ ಪೂರ್ತಿ ಇಂಗ್ಲೀಷ್ ನಲ್ಲಿ ಮಾತನಾಡಿದ್ದರು ಯಶ್ ದಂಪತಿ. ಆಗ ಇಂಗ್ಲೀಷ್ ಹಾಗೂ ಈಗ ಕೊಂಕಣಿ ರಾಧಿಕಾರಿಗೆ ಇಕ್ಕಟ್ಟಿನಲ್ಲಿ ಸಿಗಿಸಿದೆ.


Click it and Unblock the Notifications











