ಯಶ್-ರಾಧಿಕಾ ಪಾಲಿಗೆ ಇಂದು ವಿಶೇಷ ದಿನ: ಡ್ಯಾನ್ಸ್ ವಿಡಿಯೋ ಶೇರ್ ಮಾಡಿದ ದಂಪತಿ

Recommended Video

ಯಶ್-ರಾಧಿಕಾ ಪಾಲಿಗೆ ಇಂದು ವಿಶೇಷ ದಿನ: ಡ್ಯಾನ್ಸ್ ವಿಡಿಯೋ ಶೇರ್ ಮಾಡಿದ ದಂಪತಿ

ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್ ಅವರಿಗೆ ಇಂದು ತುಂಬಾ ವಿಶೇಷವಾದ ದಿನ. ಕೆಜಿಎಫ್ ಚಿತ್ರದ ಮೊದಲ ಭಾಗದ ಸಕ್ಸಸ್ ನಲ್ಲಿರುವ ರಾಕಿ ಬಾಯ್, ಈಗ ಚಾಪ್ಟರ್-2 ನಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಮನೆಗೆ ಮುದ್ದಾದ ಮಗಳು ಕೂಡ ಆಗಮಿಸಿದ್ದಾರೆ.

ಇದರ ಜೊತೆಗೆ ರಾಧಿಕಾ ಎರಡನೆ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಸಂಭ್ರಮದಲ್ಲಿರುವ ರಾಧಿಕಾ ಮತ್ತು ಯಶ್ ಗೆ ಪಾಲಿಗೆ ಇಂದು ಮರೆಯಲಾಗದ ದಿನ. ಅಂದ್ಹಾಗೆ ಏನಪ್ಪ ಅಂತಹ ವಿಶೇಷ ಅಂತೀರಾ.

ಇಂದು ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ಯಶ್ ಮತ್ತು ರಾಧಿಕಾ ಅವರ ನಿಶ್ಚಿತಾರ್ಥದ ವಾರ್ಷಿಕೋತ್ಸವ. ಇದೇ ದಿನ 2016ರಂದು ಯಶ್ ಮತ್ತು ರಾಧಿಕಾ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದರು.

ಆಗಸ್ಟ್ 12-2016

ಆಗಸ್ಟ್ 12-2016

2016 ಆಗಸ್ಟ್ 12 ಯಶ್ ಮತ್ತು ರಾಧಿಕಾ ಪ್ರೀತಿಯ ಬಂಧಕ್ಕೆ ನಿಶ್ಚಿತಾರ್ಥದ ಮುದ್ರೆ ಬೀಳುವ ಮೂಲಕ ಅಧಿಕೃತವಾಗಿ ಇಬ್ಬರು ಎಂಗೇಜ್ ಆದ ದಿನ. ಗೋವದಲ್ಲಿ ನಡೆದ ಅದ್ದೂರಿ ಎಂಗೇಜ್ ಮೆಂಟ್ ಕಾರ್ಯಕ್ರಮದಲ್ಲಿ ಯಶ್ ಮತ್ತು ರಾಧಿಕಾ ಜೋಡಿ ಉಂಗುರ ಬದಲಾಯಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು ಮತ್ತು ಕುಟುಂಬದವರು ಮಾತ್ರ ಹಾಜರಿದ್ದರು.

ಡ್ಯಾನ್ಸ್ ವಿಡಿಯೋ ಶೇರ್ ಮಾಡಿದ ರಾಧಿಕಾ

ಡ್ಯಾನ್ಸ್ ವಿಡಿಯೋ ಶೇರ್ ಮಾಡಿದ ರಾಧಿಕಾ

ಇಂದು ಈ ವಿಶೇಷವಾದ ದಿನದ ಪ್ರಯುಕ್ತ ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಯಶ್ ಜೊತೆ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಯಶ್ ಅಭಿನಯದ ಕೆಜಿಎಫ್ ಚಿತ್ರದ "ಗಲಿ ಗಲಿ.." ಹಾಡಿಗೆ ಇಬ್ಬರು ಹೆಜ್ಜೆ ಹಾಕಿದ್ದಾರೆ. ಪತ್ನಿಯ ಕೈ ಹಿಡಿದು ಯಶ್ ಡ್ಯಾನ್ಸ್ ಮಾಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಮುದ್ದಾದ ಜೋಡಿಯ ಡ್ಯಾನ್ಸ್ ಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೆ ಹರಿದು ಬರುತ್ತಿದೆ.

ಯಶೋಮಾರ್ಗ ಮೂಲಕ ಸಂತ್ರಸ್ತರಿಗೆ ಸಹಾಯ

ಯಶೋಮಾರ್ಗ ಮೂಲಕ ಸಂತ್ರಸ್ತರಿಗೆ ಸಹಾಯ

ಯಶ್ ದಂಪತಿ ಖುಷಿಯ ನಡುವೆ ಉತ್ತರ ಕರ್ನಾಟಕ ಜನರ ಕಷ್ಟವನ್ನು ಮರೆತಿಲ್ಲ. ಪ್ರವಾಹದಿಂದ ಸಂಕಷ್ಟದಲ್ಲಿರುವ ಜನರ ನೆರವಿಗೆ ಯಶ್ ಅವರ ಯಶೋಮಾರ್ಗ ಧಾವಿಸಿದ್ದಾರೆ. ಯಶೋಮಾರ್ಗ ಸಂಸ್ಥೆಯ ಮೂಲಕ ಸಂಕಷ್ಟದಲ್ಲಿರುವ ಜನರಿಗೆ ಆಗತ್ಯ ವಸ್ತುಗಳನ್ನು ಸರಬರಾಜು ಮಾಡಲಾತ್ತಿದೆ.

ಕೆಜಿಎಫ್-2 ನಲ್ಲಿ ಯಶ್

ಕೆಜಿಎಫ್-2 ನಲ್ಲಿ ಯಶ್

ಯಶ್ ಸದ್ಯ ಕೆಜಿಎಫ್-2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಚಿತ್ರೀಕರಣ ಪ್ರಾರಂಭವಾಗಿದ್ದು ಮೈಸೂರು, ಬೆಂಗಳೂರು ಮತ್ತು ಕೋಲಾರದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಚಿತ್ರಕ್ಕಾಗಿ ಈಗಾಗಲೆ ಬೆಂಗಳೂರು ಮತ್ತು ಕೋಲಾರದಲ್ಲಿ ಅದ್ದೂರಿ ಸೆಟ್ ನಿರ್ಮಾಣ ಮಾಡಲಾಗಿದೆ. ಕೆಜಿಎಫ್ ಮೊದಲ ಭಾಗಕ್ಕಿಂತ ಎರಡನೆ ಭಾಗ ಮತ್ತಷ್ಟು ರೋಚಕವಾಗಿ ಇರಲಿದ್ದು ಬಾಲಿವುಜ್ ನಟ ಸಂಜಯ್ ದತ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Kannada actress Radhika Pandit Shares a dance video for their engagement day special.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X