twitter
    For Quick Alerts
    ALLOW NOTIFICATIONS  
    For Daily Alerts

    ಕುಟುಂಬದ ಸದಸ್ಯರೊಬ್ಬರನ್ನು ರಾಧಿಕಾ ಪಂಡಿತ್ ಪರಿಚಯಿಸಿದ್ದು ಹೀಗೆ...

    |

    ನಟಿ ರಾಧಿಕಾ ಪಂಡಿತ್ ತಮ್ಮ ಮನೆಯ ಸದಸ್ಯರೊಬ್ಬರು ಪರಿಚಯಿಸಿದ್ದಾರೆ. ಅವರಿಗಾಗಿ ತಯಾರಿಸಿದ್ದ ಬರ್ಥಡೇ ಕೇಕ್ ಜತೆಗಿರುವ ಫೋಟೊ ಹಂಚಿಕೊಂಡಿರುವ ರಾಧಿಕಾ, ಅವರು ತಮಗೆ ಎಷ್ಟು ಆಪ್ತರು ಮತ್ತು ಅವರನ್ನು ಎಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತೇವೆ ಎಂಬುದನ್ನು ವಿವರಿಸಿದ್ದಾರೆ.

    Recommended Video

    Shivanna in Farm House,ಚಿಕ್ಕಬಳ್ಳಾಪುರದ ಕೇಶವಾರ ಗ್ರಾಮಕ್ಕೆ ಭೇಟಿ ಕೊಟ್ಟ ಶಿವರಾಜ್ ಕುಮಾರ್ ದಂಪತಿ

    ಅಂದಹಾಗೆ, ರಾಧಿಕಾ ಪಂಡಿತ್ ಹಂಚಿಕೊಂಡಿರುವ ಫೋಟೊದಲ್ಲಿರುವವರು ಅವರ ಮನೆಗೆಲಸದ ಸಹಾಯ ಮಾಡುತ್ತಿರುವ ಗೀತಾ ಎಂಬುವವರು. ಎಂಟು ವರ್ಷದಿಂದ ಅವರು ಮನೆಗೆಲಸದ ಸಹಾಯ ಮಾಡುತ್ತಿದ್ದಾರೆ ಎಂದಿರುವ ರಾಧಿಕಾ, ಅವರು ತಮ್ಮ ಮನೆಯ ಸದಸ್ಯರೇ ಆಗಿದ್ದಾರೆ ಎಂದಿದ್ದಾರೆ. ವಿಶೇಷವೆಂದರೆ ಅವರ ಜನ್ಮದಿನದಂದು ಇತ್ತೀಚೆಗೆ ಕೇಕ್ ಕೂಡ ತಯಾರಿಸಿ ಅವರಿಂದ ಕಟ್ ಮಾಡಿಸಿ, ಮನೆಯಲ್ಲಿಯೇ ಬರ್ಥಡೇ ಸಂಭ್ರಮ ಆಚರಿಸಿದ್ದರು.

    3ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ರಾಕಿಂಗ್ ಸ್ಟಾರ್ ದಂಪತಿ? ಈ ಬಗ್ಗೆ ರಾಧಿಕಾ ಪಂಡಿತ್ ಹೇಳಿದ್ದೇನು?3ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ರಾಕಿಂಗ್ ಸ್ಟಾರ್ ದಂಪತಿ? ಈ ಬಗ್ಗೆ ರಾಧಿಕಾ ಪಂಡಿತ್ ಹೇಳಿದ್ದೇನು?

    ನಾವೂ ಕಾಳಜಿ ತೋರಿಸಬೇಕು

    ನಾವೂ ಕಾಳಜಿ ತೋರಿಸಬೇಕು

    ಈ ಫೋಟೊದ ಜತೆಗೆ ರಾಧಿಕಾ ಮಹತ್ವದ ಸಂದೇಶವನ್ನೂ ಹಂಚಿಕೊಂಡಿದ್ದಾರೆ. ಅದು ನಾವು ಮಾಡಬೇಕಾದ ಕರ್ತವ್ಯದ ಕುರಿತು. ಮನೆ ಕೆಲಸದ ಸಹಾಯದ ನೌಕರಿಗೆ ಸೇರಿಕೊಂಡಿರುವವರು ನಮ್ಮನ್ನು ಬಹಳ ಚೆನ್ನಾಗಿ ಆರೈಕೆ ಮಾಡುತ್ತಾರೆ. ಅದಕ್ಕೆ ಪ್ರತಿಯಾಗಿ ನಾವೂ ಅವರ ಕಾಳಜಿ ಮಾಡಬೇಕು ಎಂದು ಹೇಳಿದ್ದಾರೆ.

    ನಿರ್ಲಕ್ಷ್ಯ ಮಾಡಬೇಡಿ

    ನಿರ್ಲಕ್ಷ್ಯ ಮಾಡಬೇಡಿ

    ಕೊರೊನಾ ವೈರಸ್ ಲಾಕ್ ಡೌನ್ ಸಮಯದಲ್ಲಿ ಅನೇಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. 'ಈಗ ಈ ಕಠಿಣ ಸಮಯದಲ್ಲಿ ನಾವು ಅವರ ಕುರಿತು ತುಸು ಹೆಚ್ಚು ಕಾಳಜಿ ತೋರಿಸಬೇಕು. ನೀವು ಅವರ ಬಗ್ಗೆ ನಿರ್ಲಕ್ಷ್ಯ ತೋರಿಸುವುದು ಅಥವಾ ಮರೆಯುವುದನ್ನು ಮಾಡಬೇಡಿ. ಅದರಲ್ಲಿಯೂ ಈ ಸಂದರ್ಭದಲ್ಲಿ. ಅವರೂ ಬಹಳ ಮೌಲ್ಯವುಳ್ಳವರು ಎಂದು ರಾಧಿಕಾ ಮನವಿ ಮಾಡಿದ್ದಾರೆ.

    'ನಮ್ಮ ಹೋರಾಟ ಇನ್ನೂ ಮುಗಿದಿಲ್ಲ' ಎನ್ನುತ ಮಾಸ್ಕ್ ಧರಿಸಿ ಪೋಸ್ ನೀಡಿದ ಐರಾ ಯಶ್'ನಮ್ಮ ಹೋರಾಟ ಇನ್ನೂ ಮುಗಿದಿಲ್ಲ' ಎನ್ನುತ ಮಾಸ್ಕ್ ಧರಿಸಿ ಪೋಸ್ ನೀಡಿದ ಐರಾ ಯಶ್

    ಬರ್ಥಡೇ ಕೇಕ್

    ಬರ್ಥಡೇ ಕೇಕ್

    ಈ ಫೋಟೊದೊಂದಿಗೆ ಸುಂದರವಾದ ಕೇಕ್ ಅನ್ನೂ ರಾಧಿಕಾ ಪ್ರದರ್ಶಿಸಿದ್ದಾರೆ. ಇದು ಕೆಲವು ದಿನಗಳ ಹಿಂದೆ ಗೀತಾ ಅವರ ಹುಟ್ಟುಹಬ್ಬಕ್ಕಾಗಿ ತಾವೇ ತಯಾರಿಸಿದ್ದ ಕೇಕ್ ಎಂದು ತಿಳಿಸಿದ್ದಾರೆ. ಈ ಮೂಲಕ ತಮ್ಮ ಮನೆಯ ಸಹಾಯಕರನ್ನು ಸಹ ಕುಟುಂಬದವರಲ್ಲಿ ಒಬ್ಬರಂತೆ ನೋಡಿಕೊಳ್ಳುತ್ತಿರುವ ಖುಷಿ ಹಂಚಿಕೊಂಡಿದ್ದಾರೆ.

    ಅಭಿಮಾನಿಗಳ ಮೆಚ್ಚುಗೆ

    ಅಭಿಮಾನಿಗಳ ಮೆಚ್ಚುಗೆ

    ರಾಧಿಕಾ ಅವರ ಈ ಪ್ರೀತಿ ಮತ್ತು ಕಾಳಜಿಯನ್ನು ಎಲ್ಲರೂ ಶ್ಲಾಘಿಸಿದ್ದಾರೆ. ನಿಮ್ಮ ಮನಸು ತುಂಬಾ ಒಳ್ಳೆಯದು. ಎಲ್ಲರೂ ಈ ರೀತಿಯ ಮನೋಭಾವ ಹೊಂದಿರುವುದಿಲ್ಲ. ಕೆಲಸದವರನ್ನು ಕೀಳಾಗಿ ನೋಡುವವರೇ ಹೆಚ್ಚು.ಅವರಿಗಾಗಿ ಕೇಕ್ ತಯಾರಿಸಿ ಈ ರೀತಿ ಕಾಳಜಿಯಿಂದ ನೋಡಿಕೊಳ್ಳುವವರು ತೀರಾ ಕಡಿಮೆ. ಅವರೆಲ್ಲರಿಗೂ ನೀವು ಮಾದರಿಯಾಗಿದ್ದೀರಿ ಎಂದು ಮೆಚ್ಚಿಕೊಂಡಿದ್ದಾರೆ.

    ಹೃದಯ ಹಿಂಡುವಂತೆ ಮಾಡುತ್ತದೆ ಚಿರು ಸರ್ಜಾ ಬರೆದಿದ್ದ ಈ ಕಾಮೆಂಟ್ಹೃದಯ ಹಿಂಡುವಂತೆ ಮಾಡುತ್ತದೆ ಚಿರು ಸರ್ಜಾ ಬರೆದಿದ್ದ ಈ ಕಾಮೆಂಟ್

    English summary
    Actress Radhika Pandit has shared a photo with house help and requested all to care housemaids more during these tough times.
    Friday, July 3, 2020, 9:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X