ಯಶ್ ಸೊಂಟ ಏರಿದ ರಾಧಿಕಾ; ಮಡದಿಯನ್ನು ಮುದ್ದಾಡಿದ ರಾಕಿಂಗ್ ಸ್ಟಾರ್
ನಟ ಯಶ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ರಾಮಾಯಣ' ಹಾಗೂ 'ಟಾಕ್ಸಿಕ್' ಸಿನಿಮಾ ಕೆಲಸಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಆದರೂ ಕುಟುಂಬಕ್ಕೆ ಸಮಯ ಕೊಡುವುದನ್ನು ಮಾತ್ರ ಮಿಸ್ ಮಾಡುವುದಿಲ್ಲ. ಚಿತ್ರೀಕರಣದಿಂದ ಕೊಂಚ ಬಿಡುವು ಪಡೆದು ಫ್ಯಾಮಿಲಿ ಯಶ್ ವಿದೇಶಕ್ಕೆ ಹಾರಿದ್ದಾರೆ.
ನಟಿ ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಮ್‌ನಲ್ಲಿ ಕ್ಯೂಟ್ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. 'ರಾಮಾಯಣ' ಚಿತ್ರದ ಫಸ್ಟ್ ಗ್ಲಿಮ್ಸ್ ಬಿಡುಗಡೆಗೆ ವೇದಿಕೆ ಸಜ್ಜಾಗಿದೆ. ಇಂತಹ ಹೊತ್ತಲ್ಲೇ ಯಶ್ ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ. ಪತ್ನಿ ರಾಧಿಕಾ ಹಾಗೂ ಮಕ್ಕಳ ಸಮೇತ ಅಮೆರಿಕಾದಲ್ಲಿ ರಜೆಯನ್ನು ಕಳೆಯಲಿದ್ದಾರೆ. ಇನ್ನು ಮುಂಬೈನಲ್ಲಿ ಪತಿ ಯಶ್ ಅವರನ್ನು ಭೇಟಿ ಮಾಡಿದ ಸಂಭ್ರಮದಲ್ಲಿ ರಾಧಿಕಾ ಖುಷಿಯಾಗಿದ್ದಾರೆ. ಇಬ್ಬರೂ ಅಪ್ಪಿ ಕ್ಯಾಮರಾಗೆ ಪೋಸ್ ನೋಡಿದ್ದಾರೆ.

ಚಿಕ್ಕ ಮಗುವಿನ ರೀತಿ ರಾಧಿಕಾ ಪತಿ ಯಶ್ ಕಂಕುಳಲ್ಲಿ ಕಾಣಿಸಿಕೊಂಡಿದ್ದಾರೆ. ಪತಿಯನ್ನು ನೋಡಿ ಸೊಂಟದ ಮೇಲೆ ಕೂತಿದ್ದಾರೆ. ಈ ಫೋಟೊವನ್ನು ಬಹಳ ಮೆಚ್ಚಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.
'ಟಾಕ್ಸಿಕ್' ಹಾಗೂ 'ರಾಮಾಯಣ' ಟೈಟ್ ಶೆಡ್ಯೂಲ್ ಮುಗಿಸಿ ಯಶ್ ಪ್ರವಾಸಕ್ಕೆ ಹೋಗಿದ್ದಾರೆ. ಕೆಲ ದಿನಗಳ ಕಾಲ ಅಲ್ಲೇ ಉಳಿಯಲಿದ್ದಾರೆ. ಮಂಗಳವಾರ ರಾಕಿಂಗ್ ಫ್ಯಾಮಿಲಿ ಯುಎಸ್ ಫ್ಲೈಟ್ ಏರಿತ್ತು. ಈಗಾಗಲೇ ಅವರು ಅಲ್ಲಿಗೆ ತಲುಪಿದ್ದಾರೆ. ಶೀಘ್ರದಲ್ಲೇ ರಾಧಿಕಾ ಸೋಶಿಯಲ್ ಮೀಡಿಯಾದಲ್ಲಿ ಪ್ರವಾಸದ ಬಗ್ಗೆ ಅಪ್‌ಡೇಟ್ ಕೊಡುವ ಸಾಧ್ಯತೆಯಿದೆ.
ಕಿರುತೆರೆ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸುತ್ತಿದ್ದ ಯಶ್ ಹಾಗೂ ರಾಧಿಕಾ ಬಳಿಕ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಜೊತೆಯಾಗಿದ್ದರು. ನಂತರ ಒಂದೆರಡು ಸಿನಿಮಾಗಳಲ್ಲಿ ಇಬ್ಬರೂ ನಾಯಕ-ನಾಯಕಿಯಾಗಿ ಮಿಂಚಿದ್ದರು. ಅದೇ ವೇಳೆ ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಮದುವೆ ಬಳಿಕ ರಾಧಿಕಾ ಚಿತ್ರರಂಗದಿಂದ ಬಿಡುವು ಪಡೆದುಕೊಂಡಿದ್ದಾರೆ. ಮಕ್ಕಳ ಲಾಲನೆ ಪಾಲನೆಗೆ ಹೆಚ್ಚು ಸಮಯ ಕೊಡುತ್ತಿದ್ದಾರೆ.
ಮದುವೆ ಬಳಿಕ 'ಆದಿಲಕ್ಷ್ಮಿ ಪುರಾಣ' ಚಿತ್ರದಲ್ಲಿ ಮಾತ್ರ ರಾಧಿಕಾ ಪಂಡಿತ್ ನಟಿಸಿದ್ದರು. ಇನ್ನುಳಿದಂತೆ ಸಿನಿಮಾಗಳಿಂದ ದೂರವೇ ಉಳಿದಿದ್ದಾರೆ. ಪತಿಯ ಜೊತೆ ಆಗಾಗ್ಗೆ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಜೋಡಿ ಆಗಾಗ್ಗೆ ವಿದೇಶ ಪ್ರವಾಸ ಕೈಗೊಳ್ಳುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಕೆಲ ಜಾಹೀರಾತುಗಳಲ್ಲಿ ಮಾತ್ರ ನಟಿಸುತ್ತಿದ್ದಾರೆ.
ನೆಚ್ಚಿನ ನಟಿಯನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಶೀಘ್ರದಲ್ಲೇ ಈ ಬಗ್ಗೆ ಸಿಹಿಸುದ್ದಿ ಸಿಗಬಹುದು. ಮಕ್ಕಳು ಹಾಗೂ ಫ್ಯಾಮಿಲಿಗಾಗಿ ರಾಧಿಕಾ ಸಿನಿಮಾಗಳಿಂದ ದೂರ ಉಳಿದಿರಬಹುದು ಎನ್ನುವ ಲೆಕ್ಕಾಚಾರ ಕೆಲವರದ್ದು. ಇನ್ನು ಯಶ್ ತಮ್ಮದೇ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಎಂಬ ಸಿನಿಮಾ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದ್ದಾರೆ. ಹಾಗಾಗಿ ರಾಧಿಕಾ ಪಂಡಿತ್ ಅದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಸಾಧ್ಯತೆಯಿದೆ.
ಅಭಿಮಾನಿಗಳು ನಿಮ್ಮನ್ನು ಮತ್ತೆ ತೆರೆಮೇಲೆ ನೋಡುವುದು ಯಾವಾಗ ಎಂದು ಕೇಳಿದಾಗ ರಾಧಿಕಾ ಪಾಸಿಟಿವ್ ಆಗಿಯೇ ಪ್ರತಿಕ್ರಿಯಿಸುತ್ತಾ ಬರ್ತಿದ್ದಾರೆ. ಹಾಗಾಗಿ ಮತ್ತೆ ಸಿನಿಮಾಗಳಲ್ಲಿ ನಟಿಸುವ ಸಾಧ್ಯತೆ ದಟ್ಟವಾಗಿದೆ. ಇನ್ನು ಯಶ್ ಹಾಗೂ ರಾಧಿಕಾ ಜೋಡಿ ಸದಾ ಮೋಡಿ ಮಾಡುತ್ತಿರುತ್ತದೆ. ಇನ್ನು ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಮಾರ್ಚ್ 19ಕ್ಕೆ ತೆರೆಗೆ ಬರಲಿದೆ. 'ರಾಮಾಯಣ' ಚಿತ್ರದ ಮೊದಲ ಭಾಗ ಮುಂದಿನ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ. ಎರಡೂ ಸಿನಿಮಾಗಳು ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿರುವುದು ವಿಶೇಷ. ಎರಡೂ ಚಿತ್ರಕ್ಕೆ ಯಶ್ ಹಣ ಹೂಡಿದ್ದಾರೆ.


Click it and Unblock the Notifications











