ಯಥರ್ವನ ಈ ಎರಡು ಪದಗಳ ಶಕ್ತಿ ಕಡಿಮೆ ಎಂದು ಭಾವಿಸಬೇಡಿ- ರಾಧಿಕಾ ಪಂಡಿತ್

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮುದ್ದಾದ ಮಕ್ಕಳ ವಿಡಿಯೋ ಮತ್ತು ಫೋಟೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಐರಾ ಮತ್ತು ಯಥರ್ವ ಇಬ್ಬರಿಗೂ ಅಪ್ಪ-ಅಮ್ಮನಂತೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಫಾಲೊವರ್ಸ್ ಹೊಂದಿದ್ದಾರೆ.

ಸ್ಟಾರ್ ಕಿಡ್ ಗಳ ಬಾಲ್ಯವನ್ನು ನೋಡಿ ಅಭಿಮಾನಿಗಳು ಸಹ ಸಂತಸ ಪಡುತ್ತಿರುತ್ತಾರೆ. ಯಶ್ ಎರಡನೇ ಪುತ್ರ ಯಥರ್ವ ಈಗ ತೊದಲು ಮಾತುಗಳನ್ನು ಆಡುತ್ತಿದ್ದಾನೆ. ಮಕ್ಕಳು ಮಾತನಾಡುವುದನ್ನು ಕೇಳುವುದೇ ಚೆಂದ. ಯಥರ್ವ ಕೂಡ ಮುದ್ದಾಗಿ ಮಾತನಾಡುತ್ತಿದ್ದಾರೆ.

ಅಮ್ಮ ರಾಧಿಕಾ ಜೊತೆ ಮಾತನಾಡುತ್ತಿರುವ ವಿಡಿಯೋವನ್ನು ರಾಧಿಕಾ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಮನೆಯೇ ಮೊದಲ ಪಾಠಶಾಲೆ; ತಾಯಿಯೇ ಮೊದಲ ಗುರು ಎನ್ನುವ ಹಾಗೆ ಯಥರ್ವ ಸಹ ತಾಯಿಯ ಆರೈಕೆ ಜೊತೆಗೆ ತಾಯಿಂದ ಪಾಠ ಕಲಿಯುತ್ತಿದ್ದಾನೆ.

Radhika Pandit shares cute moments of son Yatharv talking; Watch Video

ರಾಧಿಕಾ ಪಂಡಿತ್ ಮಕ್ಕಳಿಗೆ ಮೂರು ಭಾಷೆಯನ್ನು ಕಲಿಸುತ್ತಿದ್ದಾರೆ. ಕನ್ನಡ, ಇಂಗ್ಲಿಷ್ ಮತ್ತು ರಾಧಿಕಾ ಮಾತೃಭಾಷೆ ಕೊಂಕಣಿ. ಈ 3 ಭಾಷೆಯಲ್ಲೂ ರಾಧಿಕಾ ಮಗನಿಗೆ ಕೇಳುವ ಪ್ರಶ್ನೆಗೆ ಮಗ ಅದೇ ಭಾಷೆಯಲ್ಲಿ ಉತ್ತರ ನೀಡುತ್ತಿದ್ದಾನೆ. ಈ ವಿಡಿಯೋ ಈಗ ಎಲ್ಲಾ ಹರಿದಾಡುತ್ತಿದೆ.

ಮುದ್ದಾಗಿ ಮಾತನಾಡುವ ಯಥರ್ವನ ವಿಡಿಯೋ ಶೇರ್ ಮಾಡುವ ಜೊತೆಗೆ ರಾಧಿಕಾ, 'ಈ ಎರಡು ಸಣ್ಣ ಪದಗಳ ಶಕ್ತಿಯನ್ನು ಎಂದಿಗೂ ಕಡಿಮೆ ಎಂದು ಭಾವಿಸಬೇಡಿ. ಅವರು ಮ್ಯಾಜಿಕ್ ಸೃಷ್ಟಿಸುತ್ತಾರೆ' ಎಂದು ಬರೆದುಕೊಂಡಿದ್ದಾರೆ.

ರಾಧಿಕಾ ಈ ಪೋಸ್ಟ್ ಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಬಹುದಿನಗಳ ನಂತರ ಮಕ್ಕಳ ವಿಡಿಯೋ ಹಂಚಿಕೊಂಡಿದ್ದಕ್ಕೆ ಅಭಿಮಾನಿಗಳು ಧನ್ಯವಾದ ತಿಳಿಸುತ್ತಿದ್ದಾರೆ. ಜೊತೆಗೆ ಯಥರ್ವನ ತೊದಲು ಮಾತುಗಳನ್ನು ಕೇಳಿ ಅಭಿಮಾನಿಗಳು ಸಂತಸ ಪಡುತ್ತಿದ್ದಾರೆ.

More from Filmibeat

English summary
Actress Radhika Pandit shares video of her son Yatharva. Radhika teaches her son in three languages.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X