ಅಪ್ಪಂದಿರ ದಿನದ ವಿಶೇಷ ಫೋಟೋ ಹಂಚಿಕೊಂಡ ರಾಧಿಕಾ
Recommended Video
ವಿಶೇಷ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್ | FILMIBEAT KANNADA
ಇಂದು ಅಪ್ಪಂದಿರ ದಿನ. ಈ ವಿಶೇಷ ದಿನ ನಟಿ ರಾಧಿಕಾ ಪಂಡಿತ್ ಒಂದು ವಿಶೇಷ ಫೋಟೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪತಿ ಯಶ್ ಜೊತೆಗೆ ಮುದ್ದಾದ ಮಗಳು ಇರುವ ಫೋಟೋ ಇದಾಗಿದೆ. ಅಪ್ಪ ಮಗಳ ಈ ಫೋಟೋ ತುಂಬ ಚೆನ್ನಾಗಿದೆ. ತಂದೆಯ ಎದೆಯ ಮೇಲೆ ಮಗಳು ಮಲಗಿದ್ದರೆ, ಮಗಳಿಗೆ ಅಪ್ಪನ ಸಿಹಿ ಮುತ್ತು ಸಿಕ್ಕಿದೆ.
ಇಂತಹ ಸಿಹಿಯಾದ ಫೋಟೋವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಗೂ ಈ ಫೋಟೋ ತುಂಬ ಇಷ್ಟವಾಗಿದೆ. ಅಪ್ಪನನ್ನು ಸೂಪರ್ ಹೀರೋ ಎನ್ನುವ ಮೂಲಕ ಎಲ್ಲ ಮಕ್ಕಳ ತಂದೆಯರಿಗೆ ರಾಧಿಕಾ ಶುಭಾಶಯ ತಿಳಿಸಿದ್ದಾರೆ.

ಆಗಾಗ, ಮಗಳ ಫೋಟೋ ಹಂಚಿಕೊಳ್ಳುತ್ತಿರುವ ರಾಧಿಕಾ ಅಪ್ಪಂದಿರ ದಿನ ವಿಶೇಷವಾಗಿ ಈ ಫೋಟೋವನ್ನು ಶೇರ್ ಮಾಡಿದ್ದಾರೆ.
ಉಳಿದಂತೆ, ಕನ್ನಡ ಚಿತ್ರರಂಗದ ಅನೇಕ ನಟ, ನಟಿಯರು ತಮ್ಮ ತಂದೆಯರಿಗೆ ವಿಶ್ ಮಾಡಿದ್ದಾರೆ.
English summary
Kannada actress Radhika Pandit shares her daughter photo on the occasion of fathers day.


Click it and Unblock the Notifications